fbpx
ಸಮಾಚಾರ

ಸಂಸದ ಜಿಸಿ ಚಂದ್ರಶೇಖರ್ ಅಭಿವೃದ್ಧಿಪಡಿಸಿದ್ದ ಸರ್ಕಾರೀ ಶಾಲೆ ಇಡೀ ರಾಜ್ಯಕ್ಕೆ ಮಾದರಿ ಎಂದ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್

ಬಡ ಮಕ್ಕಳೇ ಹೆಚ್ಚಾಗಿ ವ್ಯಾಸಂಗ ಮಾಡುವ ಸರ್ಕಾರೀ ಶಾಲೆಗಳ ಬಗ್ಗೆ ಅತೀವ ಕಾಳಜಿ ಹೊಂದಿರುವ ರಾಜ್ಯಸಭಾ ಸದಸ್ಯರಾದ ಜಿಸಿ ಚಂದ್ರಶೇಖರ್ ಇಲ್ಲಿಯವರೆಗೆ ಸಾಕಷ್ಟು ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ. #SaveGovernmentSchool #ಸರ್ಕಾರಿ_ಶಾಲೆ_ಉಳಿಸಿ ಹಾಗು #GirlsPride ಅಭಿಯಾನಗಳನ್ನು ಆರಂಭಿಸಿ ಅದರ ಅಡಿಯಲ್ಲಿ ಈ ಹಿಂದೆ ಬೆಂಗಳೂರಿನ ದಾಸರಹಳ್ಳಿ, ಹೆಬ್ಬಾಳ ಮತ್ತು ಶಿವಾಜಿ ನಗರ, ಮಾಗಡಿ ರಸ್ತೆಯ ಬ್ಯಾಡರಹಳ್ಳಿಯಲ್ಲಿರುವ ಸರ್ಕಾರಿ ಶಾಲೆಗೆ ನೂತನ ತಂತ್ರಜ್ಞಾನಗಳನ್ನು ವ್ಯವಸ್ಥೆ ಮಾಡಿಸಿದ್ದಾರೆ.

ಚಂದ್ರಶೇಖರ್ ಅವರ ಈ ಕಾರ್ಯ ನಾಗರೀಕ ವಲಯದಲ್ಲಿ ಭಾರಿ ಪ್ರಶಂಸೆಗೆ ಕಾರಣವಾಗಿತ್ತು. ಇದೀಗ ಶಿಕ್ಷಣ ಸಚಿವ ಸುರೇಶ ಕುಮಾರ್ ಅವರು ಚಂದ್ರಶೇಖರ್ ಅವರ ಕೆಲ್ಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೌದು, ಜಿಸಿ ಚಂದ್ರಶೇಖರ್ ಅವರು ಅಭಿವೃದ್ಧಿ ಪಡಿಸಿದ್ದ ದಾಸರಹಳ್ಳಿಯ ಸರ್ಕಾರೀ ಶಾಲೆಗೆ ಸುರೇಶ್ ಕುಮಾರ್ ಅವ್ರು ಭೇಟಿ ನೀಡಿ ಶಾಲೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಜಿಸಿ ಚಂದ್ರಶೇಖರ್ ಅವರ ವತಿಯಿಂದ ಯಾವುದೇ ಕಾನ್ವೆಂಟ್‍ಗೂ ಕಡಿಮೆ ಇಲ್ಲವೆಂಬಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಶಾಲೆಯಲ್ಲಿ ಖಾಸಗಿ ಶಾಲೆಯಲ್ಲಿಯೂ ಇರದ ರೀತಿಯಲ್ಲಿ ಸ್ಮಾರ್ಟ್‌ ಕ್ಲಾಸ್‌ ರೂಮ್ ನಿರ್ಮಿಸಲಾಗಿದೆ. ಇನ್ನು ಮಕ್ಕಳಿಗೆ ಅತ್ಯಾಧುನಿಕ ಡೆಸ್ಕ್, ಛೇರ್, ಸ್ಮಾರ್ಟ್ ಬೋರ್ಡ್ ಒದಗಿಸಲಾಗಿದೆ. ಹಾಗೆಯೆ ಹೆಣ್ಣುಮಕ್ಕಳ ಶುಚಿತ್ವ ಹಾಗೂ ಆರೋಗ್ಯದ ದೃಷ್ಟಿಯಿಂದ #ಹೆಣ್ಣುಮಕ್ಕಳಹೆಮ್ಮೆ #girlspride ಎನ್ನುವ ವಿನೂತನ ಕಾರ್ಯಕ್ರಮದ ಮೂಲಕ ಶೌಚಾಲಯ ದುರಸ್ತಿ ಹಾಗೂ ನವೀಕರಣ, ಸ್ಯಾನಿಟರಿ ನ್ಯಾಪ್ಕಿನ್ ಬರ್ನರ್, ನೀರಿನ ಸೌಕರ್ಯ ಕೊಳವೆಗಳ ದುರಸ್ತಿ ಮಾಡಿಸಲಾಗಿದೆ. ಈ ಬಗ್ಗೆ ತಮ್ಮ ಫೇಸ್ಬುಕ್ ಪುಟದಲ್ಲಿ ಸುರೇಶ ಕುಮಾರ್ ಅವರು ವಿಸ್ತಾರವಾಗಿ ಬರೆದುಕೊಂಡಿದ್ದಾರೆ,.

ಸುರೇಶ ಕುಮಾರ್ ಅವರ ಫೇಸ್ಬುಕ್ ಪೋಸ್ಟ್ ಈ ರೀತಿ ಇದೆ:
ಬೆಂಗಳೂರು ನಗರದ ದಾಸರಹಳ್ಳಿ ಕ್ಷೇತ್ರದ #ನೆಲಗದರೇನ_ಹಳ್ಳಿಯ #ಸರ್ಕಾರಿ_ಹಿರಿಯ_ಪ್ರಾಥಮಿ_ಶಾಲೆಗೆ ಇಂದು ಭೇಟಿ ನೀಡಿದ್ದೆ.
ಈ ಸರಕಾರಿ ಶಾಲೆಗೆ ಪ್ರವೇಶಾವಕಾಶ ಕೊಡಿಸಬೇಕೆಂದು ಕೆಲವು ಕಡೆಯಿಂದ ನಮ್ಮ ಕಚೇರಿಗೆ ಮನವಿ ಬಂದ ಹಿನ್ನೆಲೆಯಲ್ಲಿ ಕುತೂಹಲದಿಂದ ಶಾಲೆಗೆ ಭೇಟಿ ನೀಡಿದ್ದೆ.
(ಪ್ರತಿಷ್ಠಿತ ಶಾಲೆಗಳಿಗೆ ಪ್ರವೇಶವಕಾಶ ಕೊಡಿಸಬೇಕೆಂದು ಮನವಿ ಬರುವುದು ಮಾಮೂಲು)
ಓರ್ವ ಸಚಿವರ ಕಚೇರಿ ಯಿಂದಲೂ ಈ ಶಾಲೆಯಲ್ಲಿ ಪ್ರವೇಶಾವಕಾಶ ಕೊಡಿಸಬೇಕೆಂದು ಮನವಿ ಬಂದದ್ದು ವಿಶೇಷ.
ಶಾಲೆಯ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರನ್ನು ಹಾಗೂ ಶಿಕ್ಷಕರನ್ನು ಭೇಟಿ ಮಾಡಿ ಅವರು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದೆ.
ಸಾಲಿನಲ್ಲಿ ಕುಳಿತು ಶಾಲೆಗೆ ಪ್ರವೇಶಾವಕಾಶ ಪಡೆಯಲು ಪೋಷಕರೊಂದಿಗೆ ಕಾದಿದ್ದ ಮಕ್ಕಳನ್ನು ಹಾಗೂ ಪೋಷಕರನ್ನು ಮಾತನಾಡಿಸಿದೆ.
ವಾತಾವರಣ ಖುಷಿ ನೀಡಿತು.
ಇಂತಹ ಶಾಲೆಗಳ ಬಗ್ಗೆ ಇಡೀ ರಾಜ್ಯದಿಂದ ಸುದ್ಧಿ ಬರುತ್ತಿದೆ.
ಶಾಲೆಗೆ ನೀಡಿರುವ ಪ್ರವೇಶವಕಾಶ ಸಂಖ್ಯೆಯನ್ನು ಮೀರಿ ಬೇಡಿಕೆಗಳು ಬರುತ್ತಿವೆ. ಈ ಕುರಿತು ಎಸ್.ಡಿ.ಎಂ.ಸಿ ಸದಸ್ಯರು ಪ್ರವೇಶಾವಕಾಶ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಮನವಿಯನ್ನು ಸಲ್ಲಿಸಿದ್ದಾರೆ.
ಸ್ಥಳೀಯ ಶಾಸಕ ಶ್ರೀ ಮಂಜುನಾಥ ರವರು ಈ ಸಮಯದಲ್ಲಿ ಉಪಸ್ಥಿತರಿದ್ದರು.

 

ಒಟ್ಟಿನಲ್ಲಿ ಸಾಮಾನ್ಯ ಸರ್ಕಾರೀ ಶಾಲೆಯನ್ನು ಶಿಕ್ಷಣ ಸಚಿವರೇ ಬೆರಗಾಗುವ ರೀತಿ ಅಭಿವೃದ್ಧಿ ಮಾಡಿರುವ ಜಿಸಿ ಚಂದ್ರಶೇಖರ್ ಅವರ ಬದ್ಧತೆಯನ್ನು ಮೆಚ್ಚಲೇಬೇಕು. ಚಂದ್ರಶೇಖರ್ ಅವರು ಭವಿಷ್ಯದಲ್ಲಿ ಮತ್ತಷ್ಟು ಸರ್ಕಾರೀ ಶಾಲೆಗಳನ್ನು ಅಭಿವೃದ್ಧಿಪಡಿಸಲಿ ಅದರಿಂದ ಬಡ ಮಕ್ಕಳ ಕಲ್ಯಾಣವಾಗಲಿ ಎಂಬುದೇ ನಮ್ಮ ಆಶಯ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top