fbpx
ಸಮಾಚಾರ

“ಮಾತನಾಡುವಾಗ ಪ್ರಜ್ಞೆ ಇರಲಿ” ಮಾಜಿ ಸಿಎಂ ಹೆಚ್‍ಡಿಕೆಗೆ ರಾಕ್‍ಲೈನ್ ವಾರ್ನಿಂಗ್

ಕೆಆರ್​ಎಸ್ ಡ್ಯಾಂ ಮತ್ತು ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಮಂಡ್ಯದ ಸಂಸದೆ ಸುಮಲತಾ ಅಂಬರೀಷ್​ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ನಡುವಣ ಜಗಳ ತಾರಕಕ್ಕೆ ಏರಿರುವಾಗಲೇ ಅಂಬರೀಷ್ ಕುಟುಂಬದ ಆತ್ಯಾಪ್ತ ರಾಕ್​ಲೈನ್ ವೆಂಕಟೇಶ್ ರಂಗಪ್ರವೇಶ ಮಾಡಿದ್ದಾರೆ.

ಕುಮಾಸ್ವಾಮಿ ಅವರು ನೀಡಿರುವ ಹೇಳಿಕೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂಬರೀಶ್ ವಿಷಯ ಮಾತಾಡೋವಾಗ ಪ್ರಜ್ಞೆ ಇಟ್ಟುಕೊಂಡು ಮಾತನಾಡಿ. ಚಿತ್ರರಂಗ ನಿಮಗೇನು ಮೋಸ ಮಾಡಿದೆ. ಹೇಗೆ ಲಾಭ ಮಾಡಿಕೊಂಡಿದ್ದೀರಾ ಎಲ್ಲರಿಗೂ ಗೊತ್ತು. ಯಾಕೆ ಚಿತ್ರರಂಗಕ್ಕೆ ಬೈತೀರಾ. ನೀವು ಸಿಎಂ ಆಗಿದ್ದಾಗ ಚಿತ್ರರಂಗಕ್ಕೆ ಏನ್ ಮಾಡಿದ್ದೀರಾ.? ಅಂಬರೀಶ್ ಮೇಲೆ ಯಾಕೆ ಇಷ್ಟು ಆಪಾದನೆ ಮಾಡ್ತಿದ್ದೀರಾ. ಅವರು ಬದುಕಿದ್ದಾಗ ಮಾತಾಡಬೇಕಿತ್ತು. ಅವರು ಹೋದ ಮೇಲೆ ಯಾಕೆ ಇಂತಹ ಹೇಳಿಕೆ ಕೊಡುತ್ತಿದ್ದೀರಾ? ಇದು ನಮಗೆ ಬೇಜಾರು ತರುವ ವಿಷಯವಾಗಿದೆ ಎಂದು ಕಿಡಿಕಾರಿದ್ದಾರೆ.

ಒಬ್ಬರಿಗೆ ಗೌರವ ಕೊಡೋದು ತಪ್ಪಲ್ಲ ಸ್ವಾಮಿ. ಕುಮಾರಸ್ವಾಮಿ ನನ್ನ ಮುಂದೆ ಬಂದ್ರೂ ನಮಸ್ಕಾರ ಹೇಳ್ತೀನಿ. ಅಂಬಿ ಇದ್ದಾಗ ನೀವು ಯಾವ ಟೋನ್ ನಲ್ಲಿ ಮಾತನಾಡ್ತಿದ್ರಿ. ಈಗ ವಾಲ್ಯೂಮ್ ರೈಸ್ ಮಾಡಿ ಮಾತನಾಡಬೇಡಿ. ನಿಮ್ಮ ಪಕ್ಷದವರ ಕೈಯಲ್ಲಿ ಅಂಬರೀಶ್​ನ ಬೈಯಿಸುತ್ತೀರಾ? ಅಂಬರೀಷ್​ ಅಣ್ಣನನ್ನ ಸ್ನೇಹಿತ ಅಂತ ಹೇಳ್ತೀರಾ.. ನಿಮ್ಮ ಪಕ್ಷದ ವಕ್ತಾರರಿಂದ ಬೈಯುಸುತ್ತೀರಾ? ಹಾಗೆಲ್ಲಾ ಮಾತನಾಡಬಾರದು ಅಂತಾ ಅವರಿಗೆ ಹೇಳೋಕ್ಕೆ ಅಗೋಲ್ಲವಾ ನಿಮಗೆ? ಎಂದು ಮಾಜಿ ಸಿಎಂ ಹೆಚ್​ಡಿಕೆ ವಿರುದ್ಧ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಬೆಂಗಳೂರಲ್ಲಿ ಕಿಡಿಕಾರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top