fbpx
ಸಮಾಚಾರ

ಅಂಬಿ ಸ್ಮಾರಕ ವಿಷಯ ಮಾತಾಡಲು ಹೋಗಿದ್ದ ಹಿರಿಯ ಕಲಾವಿದರನ್ನು ಅವಮಾನಿಸಿದ್ದರು: ಹೆಚ್ ಡಿಕೆ ವಿರುದ್ಧ ಸುಮಲತಾ ಗಂಭೀರ ಆರೋಪ

ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವಿನ ಗುದ್ದಾಟ ಬೇರೆ ಬೇರೆ ರೂಪ ಪಡೆದಿದ್ದು, ಅಭಿಮಾನಿಗಳ ಮಧ್ಯೆ ಜಟಾಪಟಿಗೂ ಕಾರಣವಾಗಿದ್ದು. ಇದೀಗ ವಿವಾದದ ಕುರಿತು ಸುದ್ದಿಗೋಷ್ಠಿ ನಡೆಸಿರುವ ಸುಮಲತಾ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸ್ಮಾರಕ ನಿರ್ಮಾಣ ಕುರಿತು ಹಿರಿಯ ನಟರಾದ ದೊಡ್ಡಣ್ಣ ಮತ್ತು ಶಿವರಾಮಣ್ಣನವರು ಮಾತನಾಡಲು ವಿಧಾನಸೌಧಕ್ಕೆ ಹೋಗಿದ್ದಾಗ ಅವರನ್ನು ಕಾಯಿಸಿ ಏಕವಚನದಲ್ಲಿ ಬೈದು ಮುಖಕ್ಕೆ ಪೇಪರ್ ಎಸೆದು ಇದೇ ಕುಮಾರಸ್ವಾಮಿಯವರು ಕಳುಹಿಸಿದ್ದರು ಎಂದು ಆರೋಪ ಮಾಡಿದ್ದಾರೆ.

ಸ್ಮಾರಕ ನಿರ್ಮಾಣ ವಿಚಾರದಲ್ಲಿ ಹಿರಿಯ ನಟನಿಗೆ ಮಾಡಿದ್ದ ಅವಮಾನ ಕುರಿತು ನಾನು ಆದಿಚುಂಚನಗಿರಿ ಶ್ರೀಗಳ ಬಳಿ ನೋವು ತೋಡಿಕೊಂಡಿದ್ದೆ, ಅದಕ್ಕೆ ಅವರು ಕೂಡ ಕುಮಾರಸ್ವಾಮಿಯವರು ಈ ರೀತಿ ಮಾಡಬಾರದಿತ್ತು ಎಂದರು ಎಂದು ಸುಮಲತಾ ನೆನಪಿಸಿಕೊಂಡಿದ್ದಾರೆ.

ಅಂಬರೀಶ್ ಸ್ಮಾರಕವನ್ನು ಕುಮಾರಸ್ವಾಮಿ ಮಾಡಿಸಿದ್ದಲ್ಲ. ಹಾಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಹಿ ಮಾಡಿ ಒಪ್ಪಿಗೆ ನೀಡಿದ್ದಾರೆ. ಸ್ಮಾರಕ ಸಂಬಂಧ ಹೆಚ್‌.ಡಿ.ಕುಮಾರಸ್ವಾಮಿ ಭೇಟಿಗೆ ಹೋಗಿದ್ದಾಗ ಅವರು ಯಾವ ರೀತಿ ವರ್ತಿಸಿದ್ದಾರೆಂದು ನೆನಪಿಸಿಕೊಳ್ಳಲಿ. ಆಗ ಏಕವಚನದಲ್ಲಿ ಮಾತನಾಡಿ ಪೇಪರ್ ಮುಖಕ್ಕೆ ಎಸೆದಿದ್ದರು. ಅವರದ್ದು ಸಾಧನೆ ಏನು ಎಂದು ಮಾತನಾಡಿದ್ದರು. ಈ ಘಟನೆಯಿಂದ ಬೇಸರವಾಗಿ ನಟ ದೊಡ್ಡಣ್ಣ ಕೂಡಾ ಕಣ್ಣೀರು ಹಾಕಿದ್ದಾರೆ. ಇಷ್ಟಕ್ಕೂ ಯಾರೇ ಸಿಎಂ ಆಗಿದ್ದರೂ ಅಂಬರೀಶ್ ಸ್ಮಾರಕ ಮಾಡ್ತಿದ್ದರು. ಅದು ಅವರ ಕರ್ತವ್ಯ ಎಂದು ಸುಮಲತಾ ಉತ್ತರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top