fbpx
ಸಮಾಚಾರ

ಜುಲೈ 10: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಜುಲೈ 10, 2021 ಶನಿವಾರ
ವರ್ಷ : 1943 ಪ್ಲಾವ
ತಿಂಗಳು : ಜ್ಯೇಷ್ಠ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಅಮಾವಾಸ್ಯೆ 6:45 am
ನಕ್ಷತ್ರ : ಪುನರ್ವಸು 1:02 am
ಯೋಗ : ವ್ಯಾಘಾತ 4:50 pm
ಕರಣ : ನಾಗ 6:45 am ಕಿಮ್ಸ್ತುಗ್ನ 7:19 pm

Time to be Avoided
ರಾಹುಕಾಲ : 9:14 am – 10:49 am
ಯಮಗಂಡ : 2:00 pm – 3:35 pm
ದುರ್ಮುಹುರ್ತ : 6:03 am – 6:54 am, 6:54 am – 7:45 am
ವಿಷ : 12:08 pm – 1:51 pm
ಗುಳಿಕ : 6:03 am – 7:38 am

Good Time to be Used
ಅಮೃತಕಾಲ : 10:27 pm – 12:10 am
ಅಭಿಜಿತ್ : 11:59 am – 12:50 pm

Other Data
ಸೂರ್ಯೋದಯ : 5:59 am
ಸುರ್ಯಾಸ್ತಮಯ : 6:50 pm
ರವಿರಾಶಿ : ಮಿಥುನ
ಚಂದ್ರರಾಶಿ : ಮಿಥುನ upto 18:37

 

 

 

ಕುಳಿತು ಉಂಡರೆ ಕುಡಿಕೆ ಹೊನ್ನು ಕೂಡ ಹೆಚ್ಚು ದಿನ ಬಾರದು ಎಂಬುದನ್ನು ನೆನಪಿಡಿ. ಹಾಗಾಗಿ ಆಲಸ್ಯ ಮರೆತು ಉದ್ಯೋಗನಿರತರಾಗಿರುವುದು ಕ್ಷೇಮ. ನಿಮ್ಮಿಂದಲೇ ಒಂದು ಹೊಸ ರೀತಿಯ ಸಲಹೆಯನ್ನು ಪಡೆಯಲು ಆತ್ಮೀಯರು ಕಾದಿದ್ದಾರೆ.

 

ವೃಥಾ ಅಪವಾದದಲ್ಲಿ ಕಳೆಯುವಂತಹ ಸೋಮಾರಿಯಾದ ಗೆಳೆಯರನ್ನು ದೂರವಿಡಿ. ಒಳ್ಳೆಯ ದಿನಗಳು ನಿಮಗೆ ಕಾದಿವೆ. ನಿಮ್ಮ ಕುಲದೇವರನ್ನು ಪ್ರಾರ್ಥಿಸಿರಿ. ನಿಮ್ಮ ಕಾರ್ಯ ಸಾಧನೆಯಲ್ಲಿ ಗೆಲುವು ಸಿಗಲು ಸಾಧ್ಯವಿದೆ.

 

ತೀರಾ ಆತ್ಮೀಯರಾದ ಗೆಳೆಯರೇ ಮನಸ್ಸಿಗೆ ನೋವು ತರುವಂತಹ ಕೆಲಸ ಮಾಡುವರು. ನಿರಾಸೆ ಆಗುವುದು ಬೇಡ. ಗ್ರಹಸ್ಥಿತಿಗಳ ಕಾರ್ಯವನ್ನು ನಾವು ಗೌರವಿಸಲೇಬೇಕಾಗುವುದು.

 

ಅನ್ಯರು ಬಂದು ನಿಮ್ಮನ್ನು ಮಂಕುಗೊಳಿಸುವ ಸಾಧ್ಯತೆ ಇದೆ. ಸಾಧ್ಯವಾದಷ್ಟು ಜಾಗ್ರತೆಯಿಂದ ಇರಲು ಪ್ರಯತ್ನಿಸಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಅಗತ್ಯ.

 

 

ಗಾಂಭೀರ್ಯವನ್ನು ಮರೆತು ಮಾತನಾಡುವುದಕ್ಕೆ ಮುಂದಾಗದಿರಿ. ಜನರ ಆದರ ಕಳೆದುಕೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ. ಹಾಗಾಗಿ ಈದಿನ ಮಾತಿನ ವಿಶೇಷ ಕಾಳಜಿ ವಹಿಸಬೇಕಾಗುವುದು.

 

 

ಮಾನಸಿಕ ಕಿರಿಕಿರಿಯು ಬಹಳವಾಗುವುದು. ಚಿತ್ರ-ವಿಚಿತ್ರ ಕಲ್ಪನೆಗಳು ಮನದಲ್ಲಿ ಮೂಡಿ ಭಯವನ್ನು ಹುಟ್ಟಿಸುವುದು. ಈದಿನ ಪ್ರಯಾಣದ ಸಮಯದಲ್ಲಿ ಸ್ವಲ್ಪ ಉದ್ದಿನಕಾಳನ್ನು ಇಟ್ಟುಕೊಳ್ಳಿರಿ. ಶಿವ ಪಂಚಾಕ್ಷ ರಿ ಮಂತ್ರವನ್ನು ಪಠಿಸಿರಿ.

 

 

ಕಷ್ಟಗಳು ಕತ್ತಲೆಯಿದ್ದಂತೆ. ಕತ್ತಲು ಕಳೆದು ಬೆಳಕು ಮೂಡುವಂತೆ ನಿಮ್ಮ ಜೀವನದಲ್ಲಿ ಹೊಸ ಬೆಳಕು ಕಾಣಿಸಿಕೊಳ್ಳುವುದು. ಸಾಂಸಾರಿಕ ವಿಷಯಗಳನ್ನು ಅನ್ಯರ ಬಳಿ ಚರ್ಚಿಸದಿರಿ. ಇದರಿಂದ ನಗೆಪಾಟಲಿಗೆ ಒಳಗಾಗಬೇಕಾಗುವುದು.

 

 

ಪದೇ ಪದೆ ಎಡವಿದ ಕಾಲೇ ಪುನಃ ಎಡವುವಂತೆ ಸದ್ಯದ ಪರಿಸ್ಥಿತಿಯಲ್ಲಿ ನೀವಿದ್ದೀರಿ. ನೀವು ಇಚ್ಛಿಸಿದ ಕಾರ್ಯಗಳು ಸಕಾಲದಲ್ಲಿ ಆಗದೆ ಮಾನಸಿಕ ಕ್ಷೋಭೆಗೆ ಗುರಿಯಾಗುವಿರಿ. ಆದಷ್ಟು ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿರಿ.

 

ಹೇಳುವುದು ಒಂದು ಮಾಡುವುದು ಇನ್ನೊಂದು ಎನ್ನುವ ರೀತಿಯ ಜನರು ಇಂದು ನಿಮ್ಮನ್ನು ಭೇಟಿ ಆಗುವರು. ಹಾಗಾಗಿ ಈದಿನ ಯಾರ ಮೇಲೂ ವಿಶ್ವಾಸವಿಡದೆ ಭಗವಂತನನ್ನು ಏಕ ಮನಸ್ಸಿನಿಂದ ಆರಾಧಿಸಿರಿ.

 

 

ನಿಮ್ಮ ಜಾಣ್ಮೆ, ನೈಪುಣ್ಯ, ತಾಳ್ಮೆಗಳು ಇಂದು ನಿಮಗೆ ಸಹಕಾರಿಯಾಗಿ ನಿಲ್ಲಲಿವೆ. ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗಿ ಆಗುವುದು. ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ.

 

ನಿಮ್ಮ ದಾರಿಯಲ್ಲಿ ನಿಮ್ಮ ಆತ್ಮೀಯರೇ ಅಡೆ ತಡೆ ತರುವ ವಿಚಾರವನ್ನು ಮಾಡುತ್ತಿದ್ದಾರೆ. ಹಾಗಾಗಿ ಈದಿನ ಯಾರೊಬ್ಬರ ವಿರೋಧವನ್ನು ಕಟ್ಟಿಕೊಳ್ಳದಿರಿ. ಹಂತಹಂತವಾಗಿ ನೀವು ಯಶಸ್ಸಿನ ಏಣಿಯನ್ನು ಏರುವಿರಿ.

 

ಎಲ್ಲರನ್ನು ತೂಗಿಸಿಕೊಂಡು ಹೋಗುವಂತಹ ನಿಮ್ಮ ಜಾಣ್ಮೆಯು ವಿಶೇಷವಾಗಿ ಎಲ್ಲರಿಂದ ಪ್ರಶಂಸೆಗೆ ಒಳಗಾಗುವುದು. ಭಗವಂತನು ಕೊಟ್ಟಿರುವ ಈ ಜಾಣ್ಮೆಯನ್ನು ಶುಭ ಕಾರ್ಯಗಳಿಗೆ ಉಪಯೋಗಿಸಿಕೊಂಡಲ್ಲಿ ಹೆಚ್ಚು ಅನುಕೂಲವಾಗುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top