fbpx
ಸಮಾಚಾರ

ಹರ್ಭಜನ್ ಸಿಂಗ್ ಕುಟುಂಬಕ್ಕೆ ಹೊಸ ಅತಿಥಿ ಆಗಮನ: 2ನೇ ಮಗುವಿನ ತಂದೆಯಾದ ಹರ್ಭಜನ್ ಸಿಂಗ್

ಟೀಂ ಇಂಡಿಯಾದ ಹಿರಿಯ ಬೌಲರ್ ಹರ್ಭಜನ್ ಸಿಂಗ್ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಭಜ್ಜಿ ಪತ್ನಿ, ನಟಿ ಗೀತಾ ಬಾಸ್ರಾ ಅವರು ಶನಿವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಹರ್ಭಜನ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

 

 

ಆರೋಗ್ಯವಂತ ಮಗನಾಗಿ ನಮ್ಮನ್ನು ಆಶೀರ್ವದಿಸಿದ ದೇವರಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ. ಗೀತಾ ಮತ್ತು ಮಗು ಇಬ್ಬರೂ ಚೆನ್ನಾಗಿದ್ದಾರೆ. ನಾವಿಬ್ಬರೂ ತುಂಬಾ ಸಂತೋಷವಾಗಿದ್ದೇವೆ ಮತ್ತು ನಮ್ಮ ಹಿತೈಷಿಗಳ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾವು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ ಎಂದು ಹರ್ಭಜನ್ ಬರೆದಿದ್ದಾರೆ.

ಗೀತಾ ಬಸ್ರಾ ಮತ್ತು ಮಗು ಆರೋಗ್ಯವಾಗಿದ್ದಾರೆ. ನಾವು ಸಂತೋಷದಲ್ಲಿ ಮುಳುಗಿದ್ದೇವೆ. ನಿಮ್ಮೆಲ್ಲಾ ಪ್ರೀತಿ-ಹಾರೈಕೆಗಳಿಗೆ ನಮ್ಮ ಧನ್ಯವಾದಗಳು. ಆರೋಗ್ಯವಂತ ಮಗುವನ್ನು ನಮಗೆ ಆಶೀರ್ವದಿಸಿದ್ದಕ್ಕಾಗಿ ಸರ್ವಶಕ್ತನಿಗೆ ಧನ್ಯವಾದಗಳು ಎಂದು ಸಿಂಗ್ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಹರ್ಭಜನ್ ಸಿಂಗ್ ಅಕ್ಟೋಬರ್ 29, 2015ರಲ್ಲಿ ನಟಿ ಗೀತಾ ಬಸ್ರಾ ಅವರನ್ನು ಪಂಜಾಬ್‌ನ ಜಲಂದರ್‌ನಲ್ಲಿ ವಿವಾಹವಾಗಿದ್ದರು. ಗೀತಾ ಬಸ್ರಾ ಇಮ್ರಾನ್ ಹಶ್ಮಿ ಅಭಿನಯದ ‘ದಿಲ್‌ ದಿಯಾ ಹೈ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ‘ದಿಲ್‌ ದಿಯಾ ಹೈ’ ಚಿತ್ರವು 2006ರಲ್ಲಿ ತೆರೆ ಕಂಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top