fbpx
ಸಮಾಚಾರ

ಬೆನ್ನಿನ ಮೇಲಿನ ಟ್ಯಾಟೂ ಗುಟ್ಟನ್ನು ಬಿಚ್ಚಿಟ್ಟ ಸಂಜನಾ ಗಲ್ರಾನಿ: 15 ವರ್ಷಗಳ ನಂತರ ರಿವೀಲ್​ ಮಾಡಿದ ನಟಿ..!

ನಟಿ ಸಂಜನಾ ಗಲ್ರಾನಿ ವೈದ್ಯ ಆಜೀಜ್​ ಅವರನ್ನು ವಿವಾಹವಾಗಿದ್ದಾರೆ. ಅವರ ಮದುವೆ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆದಿದ್ದವು. ಈಗ ಬೆನ್ನಿನ ಭಾಗದಲ್ಲಿ ಅವರು ಹಾಕಿಸಿಕೊಂಡ ಹಚ್ಚೆಯ ಫೋಟೋವನ್ನು ಸಂಜನಾ ಅನಾವರಣ ಮಾಡಿದ್ದಾರೆ. ಅಲ್ಲದೆ, ಈ ವಿಶೇಷ ಟ್ಯಾಟೂ ಎಷ್ಟು ಮುಖ್ಯ ಅನ್ನೋದನ್ನು ಸಂಜನಾ ಬರೆದುಕೊಂಡಿದ್ದಾರೆ.

ಸದ್ಯ ಇದೀಗ ಸಂಜನಾ ಗಲ್ರಾನಿಯವರು ಬೆನ್ನ ಮೇಲೆ ಹಾಕಿಸಿಕೊಂಡಿರುವ ತಮ್ಮ ಪತಿಯ ಹೆಸರಿನ ಟ್ಯಾಟೂವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸಂಜನಾ ಸೀರೆಯುಟ್ಟು, ಮುಡಿಗೆ ಮಲ್ಲಿಗೆ ಹೂ ಮುಡಿದು, ಟ್ರೇಡಿಶನ್ ಲುಕ್‍ನಲ್ಲಿ ಫೋಸ್ ನೀಡಿದ್ದು, ಅವರ ಬೆನ್ನ ಮೇಲೆ ಆಜೀಜ್ ಎಂಬ ಹಚ್ಚೆ ಇರುವುದನ್ನು ಕಾಣಬಹುದಾಗಿದೆ.

ಫೋಟೋ ಜೊತೆಗೆ ನನ್ನ ಟ್ಯಾಟೂವನ್ನು ಬಹಿರಂಗ ಪಡಿಸುತ್ತಿದ್ದೇನೆ. ನನ್ನ ವೈಯಕ್ತಿಕ ಮತ್ತು ನನ್ನ ಹೃದಯಕ್ಕೆ ಹತ್ತಿರವಾದಂತಹ ಟ್ಯಾಟೂ, ಅನಗತ್ಯ ಗಾಸಿಪ್‍ಗಳಿಂದ ದೂರವಿರುವ ಸಲುವಾಗಿ ನನ್ನ ಜೀವನದ ಪ್ರೀತಿಯನ್ನು ಇಷ್ಟು ದಿನ ಮುಚ್ಚಿಟ್ಟಿದೆ. ಆದರೀಗ ನಾವು ಮದುವೆಯಾಗಿರುವ ವಿಚಾರವನ್ನು ಅಧಿಕೃತವಾಗಿ ಘೋಷಿಸುತ್ತಿದ್ದೇವೆ. ಹಾಗಾಗಿ ಟ್ಯಾಟೂವನ್ನು ತೋರಿಸುತ್ತಿದ್ದೇನೆ ಎಂದಿದ್ದಾರೆ.

 

 

ನಮ್ಮ ಮುಂದಿರುವ ವ್ಯಕ್ತಿ ಸ್ನೇಹಿತ ಆಗಿರಬಹುದು, ಹಿತೈಷಿ ಆಗಿರಬಹುದು, ರಾಜಕಾರಣಿ, ನಟ, ಕ್ರಿಕೆಟರ್ ಆಗಿರಬಹುದು. ಎಲ್ಲ ಚೌಕಟ್ಟುಗಳನ್ನು ಮೀರಿದ ಸ್ನೇಹವನ್ನು ಯಾವುದೇ ಸಾಕ್ಷಿ, ಪುರಾವೆಗಳಿಲ್ಲದೆ ವಿವಿಧ ದೃಷ್ಟಿಯಲ್ಲಿ 1000 ಕಥೆ ಹೆಣೆಯಲಾಗುವುದು. ಇದನ್ನು ನೋಡಿದರೆ ಅಸಹ್ಯವಾಗುವುದು. 2021ರಲ್ಲಿ ಇದ್ದರೂ ಕೂಡ ಈ ರೀತಿ ಮನಸ್ಥಿತಿ ಇರುವ ಸಮಾಜದಲ್ಲಿ ಬದುಕುತ್ತಿದ್ದೇವೆ. ಕೆಟ್ಟ ರೀತಿಯಲ್ಲಿ ಸಂಬಂಧಗಳನ್ನು ನಿರ್ಣಯಿಸಲಾಗುವುದು.

ನಾನು ಪ್ರೀತಿಸುವ ವ್ಯಕ್ತಿ ಅಜೀಜ್ ಅವರನ್ನು ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದೇನೆ. ಕಳೆದ 15 ವರ್ಷಗಳಿಂದ ಸ್ನೇಹಿತ, ಪ್ರಿಯಕರ, ತಂದೆ ರೀತಿ ಮಾರ್ಗದರ್ಶನ ನೀಡಿರುವ ಅಜೀಜ್ ಜೊತೆ ಪ್ರತಿ ವರ್ಷ ಕಳೆದಿರುವುದಕ್ಕೆ ದೇವರಿಗೆ ಧನ್ಯವಾದ ತಿಳಿಸುವೆ.

‘ಎಲ್ಲಾ ಬೆಳವಣಿಗೆ, ಆರೋಪ ಹಾಗೂ ನೆಗೆಟಿವಿಟಿ ಮಧ್ಯೆ ನಿಜವಾದ ಪ್ರೀತಿ ತನ್ನ ದಾರಿಯನ್ನು ಕಂಡುಕೊಂಡಿದೆ. ನಿಜವಾದ ಪ್ರೀತಿ ಮಾತ್ರ ಯಾವಾಗಲೂ ಇರುತ್ತದೆ. ಲವ್​ ಯು ಆಜೀಜ್​. ನಿಜವಾದ ಗೆಳೆಯ, ಲವರ್​, ಗಂಡ ಮತ್ತು ತಂದೆ ರೀತಿಯ ಮೆಂಟರ್​ ಆಗಿ ನನ್ನ ಜೀವನದಲ್ಲಿ ಇರುವುದಕ್ಕೆ ಧನ್ಯವಾದ’ ಎಂದಿದ್ದಾರೆ ಸಂಜನಾ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top