fbpx
ಸಮಾಚಾರ

ಜುಲೈ 12: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಜುಲೈ 12, 2021 ಸೋಮವಾರ
ವರ್ಷ : 1943 ಪ್ಲಾವ
ತಿಂಗಳು : ಆಷಾಢ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ದ್ವಿತೀಯಾ 8:18 am
ನಕ್ಷತ್ರ : ಆಶ್ಲೇಷ 3:14 am
ಯೋಗ : ವಜ್ರ 3:51 pm
ಕರಣ : ಕುಲವ 8:18 am ತೈತುಲ 8:24 pm

Time to be Avoided
ರಾಹುಕಾಲ : 7:39 am – 9:14 am
ಯಮಗಂಡ : 10:49 am – 12:25 pm
ದುರ್ಮುಹುರ್ತ : 12:50 pm – 1:41 pm, 3:23 pm – 4:14 pm
ವಿಷ : 3:38 pm – 5:17 pm
ಗುಳಿಕ : 2:00 pm – 3:35 pm

Good Time to be Used
ಅಮೃತಕಾಲ : 1:35 am – 3:14 am
ಅಭಿಜಿತ್ : 11:59 am – 12:50 pm

Other Data
ಸೂರ್ಯೋದಯ : 6:00 am
ಸುರ್ಯಾಸ್ತಮಯ : 6:50 pm
ರವಿರಾಶಿ : ಮಿಥುನ
ಚಂದ್ರರಾಶಿ : ಕರ್ಕಾಟಕ upto 27:14+

 

 

 

ಜನರೊಡನೆ ವ್ಯವಹರಿಸುವಾಗ ಎಚ್ಚರ ಇರಲಿ. ಗುಟ್ಟಿನ ವಿಚಾರಗಳನ್ನು ರಟ್ಟುಮಾಡಿಕೊಳ್ಳಬೇಡಿ. ವ್ಯವಹಾರಿಕ ಜಾಣ್ಮೆ ಬೆಳೆಸಿಕೊಳ್ಳಿ. ಕಚೇರಿಯಲ್ಲಿ ಕೆಲಸದ ಒತ್ತಡ ಕಾಡುವುದು. ತಲೆನೋವಿನಂತಹ ಕಿರಿಕಿರಿ ಬಗ್ಗೆ ಎಚ್ಚರ ಇರಲಿ.

 

ಎಲ್ಲರನ್ನು ಏಕಕಾಲಕ್ಕೆ ಸಂಭಾಳಿಸುವುದು ಕಷ್ಟವಾಗುತ್ತದೆ. ಹಾಗಾಗಿ ಕೆಲವು ಕೆಲಸಗಳನ್ನು ಮನೆಯ ಸದಸ್ಯರಿಗೆ ಹಂಚಿ ಬಿಡಿ. ಇಲ್ಲವೆ ಗೆಳೆಯರಿಗೆ ಕೆಲಸದ ಜವಾಬ್ದಾರಿಯನ್ನು ಹಂಚಿ. ಆಗ ನೀವು ಆರಾಮದಿಂದ ಇರಬಹುದು.

 

ಅಂದುಕೊಂಡಿದ್ದಕ್ಕಿಂತ ಸುಲಭವಾಗಿ ಕೆಲವು ಸಮಸ್ಯೆಗಳು ಬಗೆಹರಿಯುವುದರಿಂದ ನೆಮ್ಮದಿಯ ವಾತಾವರಣ ಕಂಡು ಬರುವುದು. ನಿಮ್ಮಿಂದಾಗಿ ಕೆಲವರ ಮುಖವಾಡ ಕಳಚಿ ಬೀಳುವುದು. ಇನ್ನೊಬ್ಬರನ್ನು ದೂರುವುದನ್ನು ಬಿಟ್ಟುಬಿಡಿ.

 

ಯಾರದೋ ಮಾತುಗಳಿಂದ ಉದ್ವಿಗ್ನರಾಗದೆ ಸಮಚಿತ್ತದಿಂದ ವರ್ತಿಸಿ ಸಂಭ್ರಮದಿಂದಿರಿ. ಇದಕ್ಕೆ ಪೂರಕವಾಗಿ ಗ್ರಹಗಳು ನಿಮಗೆ ಸಹಾಯ ಮಾಡುವುದು. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

 

 

ಹಣದ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರಿ. ಇಲ್ಲದಿದ್ದರೆ ಅನಗತ್ಯ ಸನ್ನಿವೇಶಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ಪರಾಕ್ರಮದ ಕೆಲಸಗಳಲ್ಲಿ ಯಶಸ್ಸನ್ನು ಹೊಂದುವಿರಿ. ಈ ದಿನ ಹಿರಿಯ ಸಹೋದರನ ಸಹಕಾರ ಸಿಗುವುದು.

 

 

ಎಲ್ಲರೊಂದಿಗೂ ಮುಕ್ತವಾಗಿ ಬೆರೆಯುವಿರಿ. ಧನಾತ್ಮಕ ಆಲೋಚನೆಗಳಿಂದ ನಿಮ್ಮ ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ಉಪಾಧ್ಯಾಯ ವೃತ್ತಿಯಲ್ಲಿರುವವರಿಗೆ ಉತ್ತಮ ದಿನ. ಬಾಕಿ ಬರಬೇಕಾಗಿದ್ದ ಹಣ ನಿಮ್ಮ ಕೈಸೇರುವುದು.

 

 

ಆತ್ಮೀಯರ ಆಗಮನದಿಂದ ಮನಃಶಾಂತಿ ದೊರೆಯಲಿದೆ. ನೀವು ಹಮ್ಮಿಕೊಂಡ ಕೆಲಸ ಕಾರ್ಯಗಳನ್ನು ಇಂದು ಬೇಗನೆ ಮುಗಿಸುವಿರಿ. ಇದರಿಂದ ಮೇಲಾಧಿಕಾರಿಗಳು ನಿಮ್ಮ ಬಗ್ಗೆ ಗೌರವ ಭಾವನೆ ತಾಳುವರು.

 

 

ಹೊಸ ಹೊಸ ವಿಚಾರಗಳು ನಿಮ್ಮ ತಲೆಯಲ್ಲಿ ಮಿಂಚಿ ಮಾಯವಾಗುವುದು. ದೂರದೃಷ್ಟಿಯಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ಆರ್ಥಿಕ ಸದೃಢತೆಯು ನಿಮ್ಮ ಮನಸ್ಸಿಗೆ ಹರ್ಷವನ್ನುಂಟು ಮಾಡುವುದು.

 

ನೆರೆಹೊರೆಯವರೊಂದಿಗೆ ಪ್ರೀತಿ-ವಿಶ್ವಾಸದಿಂದ ಇರಿ. ಅನಗತ್ಯ ವಿಷಯಗಳಲ್ಲಿ ಮೂಗು ತೂರಿಸಿ ಮನಸ್ತಾಪಕ್ಕೆ ಒಳಗಾಗುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನತೆಯಿಂದ ಮಗ್ನರಾಗಿ. ಭಗವಂತನ ಆಶೀರ್ವಾದ ದೊರೆಯುವುದು.

 

 

ಖರ್ಚಿನ ದಾರಿಗಳು ಅನೇಕ ರೀತಿಯಲ್ಲಿ ತೆರೆದುಕೊಳ್ಳುವುದು. ಹಾಗಾಗಿ ಕೂಡಿಟ್ಟ ಹಣವು ನೀರಿನಂತೆ ಖರ್ಚಾಗುವುದು. ಅನಗತ್ಯ ವಸ್ತುಗಳ ಖರೀದಿಯನ್ನು ಮಾಡದಿರುವುದು ಕ್ಷೇಮಕರ.

 

ಬಾಳಸಂಗಾತಿಯೊಡನೆ ಸ್ನೇಹದಿಂದ ವರ್ತಿಸಿದಲ್ಲಿ ಆಕೆಯು ಕೂಡ ಪ್ರಸನ್ನವದನಳಾಗಿ ನಿಮ್ಮ ಕೆಲಸ ಕಾರ್ಯಕ್ಕೆ ಬೆಂಬಲ ಸೂಚಿಸುವರು.  ಆಂಜನೇಯ ಸ್ತೋತ್ರ ಪಠಿಸಿರಿ.

 

ಕೈಗೆ ಎಟುಕದೆ ಇಷ್ಟು ದಿನ ಕಾಡುತ್ತಿದ್ದ ಕಾರ್ಯವೊಂದು ದಿಢೀರನೆ ನಿಮ್ಮ ಪ್ರಯತ್ನದಿಂದ ಸಿದ್ಧಿಸುವುದು. ರಿಯಲ್‌ ಎಸ್ಟೇಟ್‌ ದಂಧೆಗಳಲ್ಲಿ ಹಣ ಹೂಡುವ ಮುನ್ನ ಎರಡು ಬಾರಿ ಚಿಂತಿಸಿರಿ. ದುರ್ಗಾ ಸ್ತೋತ್ರವನ್ನು ಪಠಿಸಿರಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top