fbpx
ಸಮಾಚಾರ

ನೇಮಕಾತಿಗೆ ಅರ್ಜಿ ಆಹ್ವಾನಿಸಿದ ಎಸ್​ಬಿಐ; 6100ಕ್ಕೂ ಅಧಿಕ ಹುದ್ದೆಗಳಿವೆ

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 2021ನೇ ಸಾಲಿನ ನೇಮಕಾತಿ ಆರಂಭಿಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಜುಲೈ 26ರೊಳಗೆ ಅರ್ಜಿ ಸಲ್ಲಿಸಬಹುದು.

ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಕೂಡ ನೀಡಲಾಗುತ್ತದೆ. ಆನ್‌ಲೈನ್ ಮೂಲಕ ಅಭ್ಯರ್ಥಿಗಳು ಸಲ್ಲಿಸಬಹುದಾಗಿದ್ದು, ಜುಲೈ 26ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳ ಆಯ್ಕೆಗಾಗಿ ಆನ್‌ಲೈನ್ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.

ವಯೋಮಿತಿ: ಸಾಮಾನ್ಯ ಹಾಗೂ ಮೀಸಲಾತಿ ರಹಿತ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಗರಿಷ್ಠ 28 ವರ್ಷ(31-10-2020ರಂತೆ). ದಿವ್ಯಾಂಗರಿಗೆ10 ವರ್ಷ, ಎಸ್ ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷ ವಯೋಮಿತಿಯಲ್ಲಿ ವಿನಾಯಿತಿ ಇರುತ್ತದೆ.

ಆಯ್ಕೆ ಪ್ರಕ್ರಿಯೆ ಹೇಗೆ?
ಆನ್​ಲೈನ್ ಲಿಖಿತ ಪರೀಕ್ಷೆಗಳು ಮತ್ತು ಸ್ಥಳೀಯ ಭಾಷೆಗಳ ಪರೀಕ್ಷೆಗಳ ಮೂಲಕ ಅಪ್ರೆಂಟಿಸ್​ ನೇಮಕಾತಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಆಬ್ಜೆಕ್ಟಿವ್ ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳಿಗೆ ನಕಾರಾತ್ಮಕ ಅಂಕಗಳು ಇರುತ್ತವೆ. ಆನ್​ಲೈನ್​ ಪರೀಕ್ಷೆಗಳು ಆಗಸ್ಟ್​ನಲ್ಲಿ ನಡೆಯಲಿವೆ.

ಅರ್ಜಿ ಶುಲ್ಕದ ವಿವರ
ಎಸ್​ಬಿಐನ ಈ ಹುದ್ದೆಗೆ ಅರ್ಜಿ ಸಲ್ಲಿಸುವವರು 300 ರೂಪಾಯಿ ಶುಲ್ಕ ತುಂಬಬೇಕು. ಎಸ್​ಸಿ/ಎಸ್​ಟಿ/ಪಿಡಬ್ಲ್ಯೂಡಿ ವರ್ಗಕ್ಕೆ ಸೇರಿದವರು ಯಾವುದೇ ಶುಲ್ಕ ತುಂಬುವ ಅಗತ್ಯ ಇರುವುದಿಲ್ಲ.

ಅಭ್ಯರ್ಥಿಗಳು ಜುಲೈ ೨೬ರೊಳಗೆ sbi.co.in ಮೂಲಕ ಅರ್ಜಿ ಸಲ್ಲಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top