fbpx
ಸಮಾಚಾರ

“ಎಲ್ಲ ಕಡೆ ಉಮಾಪತಿ ಹೆಸರು ಕೇಳಿ ಬರುತ್ತಿದೆ” ನಟ ದರ್ಶನ್ ಆರೋಪ

ಚಾಲೆಂಜಿಂಗ್ ಸ್ಟಾರ್ ಹೆಸರಲ್ಲಿ ವಂಚನೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಉಮಾಪತಿ ವಿರುದ್ಧ ದರ್ಶನ್ ಕೆಲವು ಆರೋಪಗಳನ್ನ ಮಾಡಿದ್ದಾರೆ.

ಎಲ್ಲ ಕಡೆ ಉಮಾಪತಿ ಎಂಬುದೇ ಕೇಳಿ ಬರುತ್ತಿದೆ. ನಾನು ಅವರ ವಿರುದ್ಧ ಆರೋಪ ಮಾಡುತ್ತಿಲ್ಲ. ಆದರೆ ಯಾರು ಮಾಡಿರುತ್ತಾರೋ ಅವರನ್ನ ಹಿಡಿದುಕೊಳ್ಳುತ್ತೇವೆ. ಬಾಯಿಬಿಟ್ಟರೆ ಸಾಯಿಸುಬಿಡುತ್ತೇನೆ ಎಂದು ಉಮಾಪತಿ ಹೇಳಿದ್ದಾರೆ ಅಂತ ಅರುಣಾ ಕುಮಾರಿ ಹೇಳಿದಳು. ಏಪ್ರಿಲ್ 8ರಿಂದ ಉಮಾಪತಿ ಚಾಟ್ ಮಾಡಿದ್ದಾರೆ. ಅರುಣಾ ಕುಮಾರಿ ಜತೆ ಉಮಾಪತಿ ಚಾಟ್ ಮಾಡಿದ್ದಾರೆ. ಉಮಾಪತಿ ನನಗೆ ಅರುಣಾ ಕುಮಾರಿ ಪರಿಚಯ ಇಲ್ಲವೆಂದಿದ್ದಾರೆ. ಸಹೋದರನಿಂದ ಪರಿಚಯವಾಗಿದ್ದು ಎಂದು ಹೇಳಿದ್ದರು. ಆದರೆ ಅರುಣಾ ಕುಮಾರಿ ಜೊತೆ ಚಾಟ್‌ ಮಾಡಿರುವುದು ಪತ್ತೆಯಾಗಿದೆ ಎಂದು ದರ್ಶನ್ ಹೇಳಿದ್ದಾರೆ.

“ಉಮಾಪತಿ, ಅರುಣಾ ಯಾರೇ ಇದ್ರೂ ಸುಮ್ನೆ ಬಿಡಲ್ಲ, ಯಾರ ವಿರುದ್ಧವೂ ಆರೋಪ ಮಾಡಲ್ಲ, ಸಿಕ್ಕಿಬಿದ್ರೆ ಸುಮ್ನಿರಲ್ಲ” ಎಂದು ನಟ ದರ್ಶನ್​ ಇಂದು ಮೈಸೂರಿನಲ್ಲಿ ಸುದ್ದಿಗೋಷ್ಟಿಯಲ್ಲೇ ವಾರ್ನಿಂಗ್ ಕೊಟ್ಟಿದ್ದಾರೆ. ಚಾಟ್​ಲಿಸ್ಟ್, ಆಡಿಯೋ ಎಲ್ಲವನ್ನೂ ಸುದ್ದಿಗೋಷ್ಠಿಯಲ್ಲಿ ನಟ ದರ್ಶನ್​ ತೋರಿಸಿದ್ದಾರೆ. ಉಮಾಪತಿ -ಅರುಣಾ ಮಾತುಕತೆಯ ಆಡಿಯೋ ಪ್ರದರ್ಶನ, ಇಡೀ ಪ್ರಕರಣದವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ದರ್ಶನ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top