fbpx
ಸಮಾಚಾರ

ಈವಾರ ‘ಬಿಗ್ ಬಾಸ್’ ಶೋನಿಂದ ಎಲಿಮಿನೇಟ್ ಆದ ಬಲಿಷ್ಠ ಸ್ಪರ್ದಿ

ಬಿಗ್ ಬಾಸ್ ಕನ್ನಡ ಸೀಸನ್ 8ರ ಸೆಕೆಂಡ್ ಇನಿಂಗ್ಸ್ ಭರ್ಜರಿಯಾಗಿಯೇ ಆರಂಭಗೊಂಡಿತ್ತು. ಕಳೆದ ವಾರ ನಿಧಿ ಸುಬ್ಬಯ್ಯ ಮನೆಯಿಂದ ಆಚೆಗೆ ಬಂದಿದ್ದರು. ಈ ವಾರ ರಘು ಗೌಡ ಮನೆಯಿಂದ ಆಚೆ ಬಂದಿದ್ದಾರೆ. ಆ ಮೂಲಕ ತಮ್ಮ 91 ದಿನಗಳ ಬಿಗ್ ಬಾಸ್ ಜರ್ನಿಯನ್ನು ಮುಗಿಸಿದ್ದಾರೆ.

 

 

ಈ ವಾರ ಚಕ್ರವರ್ತಿ ಚಂದ್ರಚೂಡ್​, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್​, ದಿವ್ಯಾ ಸುರೇಶ್​, ಪ್ರಶಾಂತ್ ಸಂಬರಗಿ​, ರಘು ಗೌಡ, ಶಮಂತ್ ಬ್ರೋ ಗೌಡ,​ ವೈಷ್ಣವಿ, ಅರವಿಂದ್ ಕೆ.ಪಿ ಮೇಲೆ ಎಲಿಮಿನೇಷನ್​ ತೂಗುಗತ್ತಿ ತೂಗುತ್ತಿತ್ತು.

ಮೊದಲು ಮಂಜು ಸೇವ್​ ಆದರು. ನಂತರ ಅರವಿಂದ್, ವೈಷ್ಣವಿ ಗೌಡ, ದಿವ್ಯಾ ಸುರೇಶ್​, ಪ್ರಶಾಂತ್​ ಸಂಬರಗಿ, ಶಮಂತ್​ ಬ್ರೋ ಗೌಡ, ಪ್ರಿಯಾಂಕ ತಿಮ್ಮೇಶ್​ ಸೇವ್​ ಆದರು. ಕೊನೆಯಲ್ಲಿ ಚಕ್ರವರ್ತಿ ಹಾಗೂ ರಘು ಉಳಿದುಕೊಂಡರು. ಚಕ್ರವರ್ತಿ ಸೇವ್​ ಆಗಿ, ರಘು ಔಟ್​ ಆದರು.

ಬಿಗ್‍ಬಾಸ್ ಫಸ್ಟ್ ಇನ್ನಿಂಗ್ಸ್‌ನಲ್ಲಿ ಅಷ್ಟಾಗಿ ಆಕ್ಟೀವ್ ಆಗಿರದ ರಘು ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ರೊಚ್ಚು ರಘು ಆಗಿ ಬಂದಿರುವುದಾಗಿ ತಿಳಿಸಿ ಮೊದಲ ವಾರದಿಂದಲೇ ಟಾಸ್ಕ್‌ಗಳಲ್ಲಿ ಚೆನ್ನಾಗಿ ಭಾಗವಹಿಸುವ ಮೂಲಕ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ದೊಡ್ಮನೆಯಲ್ಲಿ ವೈಷ್ಣವಿಯವರ ಬೆಸ್ಟ್ ಫ್ರೆಂಡ್ ಆಗಿರುವ ರಘು ತಮ್ಮ ತುಂಟತನ, ತರ್ಲೆ ಹಾಗೂ ಕಾಮಿಡಿ ಮಾಡುವ ಮೂಲಕ ಮನೆಯ ಸ್ಪರ್ಧಿಗಳಿಗೆ ನಗುವಿನ ಕಚಗುಳಿ ನೀಡುತ್ತಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top