fbpx
ಸಮಾಚಾರ

ಸಂಚಾರಿ ವಿಜಯ್‌ರ ಅಪೂರ್ಣ ಆಸೆಯನ್ನು ಈಡೇರಿಸಿದ ‘ಉಸಿರು’ ಟೀಮ್

ಕೋವಿಡ್ ಎರಡನೇ ಅಲೆ ಹಾಗೂ ಲಾಕ್‍ಡೌನ್ ಸಂದರ್ಭದಲ್ಲಿ ಜನರಿಗೆ ಆಕ್ಸಿಜನ್ ನೀಡುವ ಸಲುವಾಗಿ ರೂಪುಗೊಂಡ ‘ಉಸಿರು’ ತಂಡದಲ್ಲಿ ಸಂಚಾರಿ ವಿಜಯ್ ಕೂಡ ಇದ್ದರು. ‘ಉಸಿರು’ ತಂಡದ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಸಂಚಾರಿ ವಿಜಯ್ ಮುಂದಾಗಿದ್ದರು.

ಅದೆಲ್ಲ ಕಾರ್ಯರೂಪಕ್ಕೆ ಬರುವ ಮುನ್ನವೇ ಅಪಘಾತದಿಂದಾಗಿ ಸಂಚಾರಿ ವಿಜಯ್ ಇಹಲೋಕ ತ್ಯಜಿಸಿಬಿಟ್ಟರು. ಉಸಿರು ತಂಡದಲ್ಲಿದ್ದಾಗ, ತಂಡದ ಸದಸ್ಯರೊಂದಿಗೆ ಬುಡಕಟ್ಟು ಜನಾಂಗದ ಹಾಡಿಯ ಮನೆಗಳ ಮೇಲ್ಛಾವಣಿಗಳಿಗೆ ಟಾರ್ಪಲ್ ಹೊದಿಕೆ ಹೊದಿಸುವ ಬಗ್ಗೆ ಹಾಗೂ ಕೊಡಗು ಹಾಗೂ ಮೈಸೂರು ಗಡಿಭಾಗದ ನಾಗರಹೊಳೆ ಪ್ರದೇಶದ ಸುತ್ತಮುತ್ತಲೂ ವಾಸ ಇರುವ ಹಾಡಿ ನಿವಾಸಿಗಳ ಮನೆಗಳಿಗೆ ಟಾರ್ಪಲ್ ಹಾಕಿಸುಕೊಂಡುವಂತೆ ‘ಉಸಿರು’ ತಂಡದ ಸದಸ್ಯರ ಜೊತೆ ಸಂಚಾರಿ ವಿಜಯ್ ಚರ್ಚೆ ಮಾಡಿದ್ದರು.

ಇದೀಗ ಅವರ ಅಂತಿಮ ಆಸೆಯಂತೆ ನಾಗರಹೊಳೆ ಸಮೀಪದ ಬುಡಕಟ್ಟು ಜನಾಂಗದ ಮನೆಗಳಿಗೆ ಟಾರ್ಪಲಿನ್ ಹೊದಿಕೆ ಹೊದಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಕವಿರಾಜ್‌ ಹೇಳಿದ್ದಾರೆ. ಮೂರು ವಾರಗಳ ಹಿಂದೆ ಮನೆಗಳ ಅಳತೆ ಪಡೆದುಕೊಂಡು ಶನಿವಾರ ಮತ್ತು ಭಾನುವಾರ ಹಾಡಿಯ ಮನೆಗಳ ಮೇಲ್ಛಾವಣಿಗೆ ಟಾರ್ಪಲಿನ್ ಹೊದಿಕೆ ಹೊದಿಸುವ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು. ಚಲನಚಿತ್ರ ನಟಿ ನೀತು ಶೆಟ್ಟಿ, ಉಸಿರು ತಂಡದ ಸದಸ್ಯರು, ಸ್ವಯಂಸೇವಕರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top