fbpx
ಸಮಾಚಾರ

ದರ್ಶನ್ ಹಾಗೂ ಉಮಾಪತಿ ಪ್ರಕರಣ ಸುಖಾಂತ್ಯದತ್ತ?ವಿವಾದಕ್ಕೆ ಅಂತ್ಯ ಹಾಡೋಣ ಎಂದ ಚಾಲೆಂಜಿಂಗ್ ಸ್ಟಾರ್

ನಟ ದರ್ಶನ್ ಹೆಸರಲ್ಲಿ ಹಣ ವಂಚನೆ ಯತ್ನ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ. ಆರಂಭದಲ್ಲಿ ನಿರ್ಮಾಪಕ ಉಮಾಪತಿ ಮೇಲೆ ಅನುಮಾನ ಮೂಡಿತ್ತಾದರೂ ನಂತರದ ಬೆಳವಣಿಗೆಯಲ್ಲಿ ಈ ಪ್ರಕರಣದ ಪ್ರಮುಖ ಕೇಂದ್ರಬಿಂದು ಆರೋಪಿ ಅರುಣಾಕುಮಾರಿ ಎನ್ನಲಾಗುತ್ತಿದೆ. ಇದೀಗ ನಟ ದರ್ಶನ್​ ಕೂಡ ‘ಈ ಕೇಸ್​ಗೆ ಈಗಾಗಲೇ ಮಂಗಳ ಹಾಡಿ ಆಗಿದೆ’ ಎನ್ನುವ ಮೂಲಕ ನಿರ್ಮಾಪಕ ಉಮಾಪತಿಯನ್ನು ಬಿಟ್ಟುಕೊಟ್ಟಿಲ್ಲ.

ಈ ಕುರಿತು ಮಾಧ್ಯಗಳಿಗೆ ಪ್ರತಿಕ್ರಿಯಿಸಿರುವ ದರ್ಶನ್ ಈ ಪ್ರಕರಣವನ್ನು ಇಲ್ಲಿಗೆ ನಿಲ್ಲಿಸೋಣ ಎಂದಿದ್ದಾರೆ. ಉಮಾಪತಿಯವರು ನನ್ನ ನಿರ್ಮಾಪಕರು. ಅವರ ವಿರುದ್ಧ ನಾನೆಂದಿಗೂ ಮಾತನಾಡುವುದಿಲ್ಲ. ಅವರನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ದರ್ಶನ್ ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ ಇದನ್ನು ಕುಳಿತು ಚರ್ಚಿಸುತ್ತೇವೆ ಎಂದೂ ಅವರು ತಿಳಿಸಿದ್ದಾರೆ.

ಅರುಣಾ ಅವರ ಆರೋಪಕ್ಕೆ ಕುರಿತಂತೆ ಪ್ರತಿಕ್ರಿಯಿಸಿದ ದರ್ಶನ್ ಎರಡು- ಮೂರು ದಿನಗಳಿಂದ ನಡೆಯುತ್ತಿರುವ ಈ ಪ್ರಕರಣದಿಂದ ರೋಸಿ ಹೋಗಿದ್ದೇನೆ. ಎಲ್ಲರೂ ಇದನ್ನು ಬಿಟ್ಟುಬಿಡಿ. ಈ ಕೇಸನ್ನು ನ್ಯಾಯಾಲಕ್ಕೆ ಹಾಕಿದರೂ ಇದು ನಿಲ್ಲುವುದಿಲ್ಲ. ಹಾಗಿರುವಾಗ ಇದನ್ನೇ ಗುದ್ದಾಡಿ ಪ್ರಯೋಜನವಿಲ್ಲ. ವಂಚನೆಯ ಮೂಲದ ಬಗ್ಗೆ ತಿಳಿದುಕೊಳ್ಳಬೇಕೆಂದು ಅದರ ಕುರಿತು ಗಮನಹರಿಸಿದೆವು ಅಷ್ಟೇ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top