fbpx
ಸಮಾಚಾರ

“ನನಗೆ ಯಾರೂ ಟೈಮ್ ಕೊಡಬೇಕಾಗಿಲ್ಲ, ಇನ್ನೊಬ್ಬರ ಭಿಕ್ಷೆಯಲ್ಲಿ ಬದುಕಬೇಕಿಲ್ಲ” ನಿರ್ಮಾಪಕ ಉಮಾಪತಿ

‘ಚಾಲೆಂಜಿಂಗ್ ಸ್ಟಾರ್’ ನಟ ದರ್ಶನ್‌ ಅವರ ಹೆಸರಿನಲ್ಲಿ 25 ಕೋಟಿ ರೂ. ವಂಚನೆಗೆ ಪ್ರಯತ್ನಪಡಲಾಗಿದೆ ಎಂಬ ಆರೋಪದ ಮೇಲೆ ಬ್ಯಾಂಕ್ ಮ್ಯಾನೇಜರ್ ಎಂದು ಸುಳ್ಳು ಹೇಳಿದ್ದ ಮಹಿಳೆ ಅರುಣಾ ಕುಮಾರಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈ ಕುರಿತು ಮೈಸೂರಿನಲ್ಲಿ, ಜಯನಗರದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆದರೆ ಈ ವೇಳೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮೇಲೆ ಕೆಲ ಆರೋಪಗಳು ಬಂದಿತ್ತು. ಅವುಗಳಿಗೆ ಉಮಾಪತಿ ಉತ್ತರ ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ನಿರ್ಮಾಪಕ ಉಮಾಪತಿ, ನನಗೆ ಯಾರ ಬಗ್ಗೆಯೂ ಅನುಮಾನ ಇಲ್ಲ. ಈ ವಂಚನೆ ಪ್ರಕರಣ ಬಯಲಿಗೆ ಎಳೆದಿದ್ದೇ ನಾನು. ನಾನು ಪ್ರತಿ ವಿಚಾರವನ್ನೂ ದರ್ಶನ್ ಅವರಿಗೆ ತಿಳಿಸಿದ್ದೇನೆ. ಶೀಘ್ರವೇ ಈ ಪ್ರಕರಣಕ್ಕೆ ತೆರೆ ಬೀಳಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

“ನಾನು ತಪ್ಪು ಮಾಡಿಲ್ಲ, ನನಗೆ ಯಾರು ಟೈಮ್ ಕೊಡಬೇಕಿಲ್ಲ, 2 ದಿನ ಟೈಮ್ ಬೇಕು ಅಂತಾ ಹೇಳಿದ್ದೇನೆ. ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ. ಜನ ಸಾವಿರ ಹೇಳುತ್ತಾರೆ. ಆದರೆ ಪೊಲೀಸ್ ಇಲಾಖೆ ತೀರ್ಮಾನ ಮಾಡುತ್ತದೆ” ಎಂದು ಹೇಳಿದರು.

ನನಗೆ ದೇವರು ಎಲ್ಲಾ ಕೊಟ್ಟಿದ್ದಾನೆ. ನಾನೇ ಕಾನೂನು ಮೂಲಕ ಹೋರಾಟ ಮಾಡಬೇಕು. ಇನ್ನೊಬ್ಬರ ಭಿಕ್ಷೆಯಲ್ಲಿ ನಾನು ಬದುಕಬೇಕಿಲ್ಲ. ನನಗೆ ಕುಡಿಯೋದು, ಪಬ್ ಚಟ ಇಲ್ಲ. ಈ ಪ್ರಕರಣದಲ್ಲಿ ನನ್ನ ಸಿಕ್ಕಿಸುವ ಪ್ರಯತ್ನ ನಡೆಸಲಾಗುತ್ತಿದೆ. ನನ್ನದೇನು ತಪ್ಪಿಲ್ಲ. ನಾವು ದೂರು ಕೊಟ್ಟಿದ್ದೇವೆ, ತನಿಖೆಯಲ್ಲಿ ಎಲ್ಲಾ ಬಯಲಾಗುತ್ತದೆ ಎಂದು ಹೇಳಿದ್ದಾರೆ.

ವಾಟ್ಸಾಪ್ ಚಾಟ್ ಅನ್ನು ನಾನು 17 ರಂದೇ ನಾನು ದರ್ಶನ್ ಸರ್‍ಗೆ ಕಳುಹಿಸಿದ್ದೇನೆ. ಹಾಗಾಗಿ ನಾನು ಕದ್ದು ಮುಚ್ಚಿ ಮಾಡೋದು ಏನಿದೆ? ನನಗೆ ಏನು ಗುಂಡಿಟ್ಟು ಸಾಯಿಸುತ್ತಾರಾ? ನಾನೇನು ಮಾಡಿದ್ದೇನೆ? ಕಾನೂನು ಇದೆ, ಭಗವಂತ ಇದ್ದಾನೆ. 24 ಗಂಟೆಯಲ್ಲಿ ಈವರೆಗೆ ಬಂದಿದೆ ಇನ್ನು ಉಳಿದದ್ದು ತನಿಖೆ ಮೂಲಕ ಬರುತ್ತದೆ ಎಂದು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top