fbpx
ಸಮಾಚಾರ

ಆ 3 ವಿಷಯ ಹೇಳಿದರೇ ಮಂಡ್ಯ ರಾಜಕೀಯಕ್ಕಿಂತ ದೊಡ್ಡದಾಗತ್ತೆ” ನಿರ್ಮಾಪಕ ಉಮಾಪತಿ ಸ್ಪೋಟಕ ಹೇಳಿಕೆ

ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ವಂಚನೆ ಯತ್ನ ಕೇಸ್ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ನಿರ್ಮಾಪಕ ಉಮಾಪತಿ, ನನಗೆ ಯಾರ ಬಗ್ಗೆಯೂ ಅನುಮಾನ ಇಲ್ಲ. ಈ ವಂಚನೆ ಪ್ರಕರಣ ಬಯಲಿಗೆ ಎಳೆದಿದ್ದೇ ನಾನು. ನಾನು ಪ್ರತಿ ವಿಚಾರವನ್ನೂ ದರ್ಶನ್ ಅವರಿಗೆ ತಿಳಿಸಿದ್ದೇನೆ. ಶೀಘ್ರವೇ ಈ ಪ್ರಕರಣಕ್ಕೆ ತೆರೆ ಬೀಳಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಆ ಮೂರು ವಿಷಯ ಹೇಳಬೇಡಿ ಎಂದು ದರ್ಶನ್ ಸರ್ ಹೇಳಿದ್ದಾರೆ. ದರ್ಶನ್ ಸರ್ ನನ್ನ ಮೇಲೆ ನಂಬಿಕೆ ಇಟ್ಟು ಆ ಮೂರು ವಿಷಯ ಹೇಳಿದ್ದಾರೆ. ಹೀಗಾಗಿ ಆ ಮೂರು ವಿಚಾರ ಹೊರಗೆ ಹೇಳಲ್ಲ. ಆ ಮೂರು ವಿಷಯ ಹೇಳಿದ್ರೆ ಅಲ್ಲೋಲ-ಕಲ್ಲೋಲ ಆಗುತ್ತೆ, ಅದನ್ನು ಹೇಳಿದರೆ ಮಂಡ್ಯ ರಾಜಕೀಯಕ್ಕಿಂತ ಇನ್ನು ದೊಡ್ಡದಾಗತ್ತೆ.” ಎಂದು ನಿರ್ಮಾಪಕ ಉಮಾಪತಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

”ದರ್ಶನ್ ಅವರು ನನ್ನನ್ನು ಆರೋಪಿಯನ್ನಾಗಿ ಮಾಡಿಲ್ಲ, ನಿರ್ಮಾಪಕರ ಅಂಗಳದಲ್ಲಿ ಬಾಲ್ ಇದೆ, ಉಮಾಪತಿ ಬಕ್ರಾ ಆದ್ರಾ, ಅದನ್ನು ಅವರೇ ಸ್ಪಷ್ಟಪಡಿಸಬೇಕು ಅಂತ ಹೇಳಿದ್ದಾರೆ” ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top