fbpx
ಸಮಾಚಾರ

#IBPS ಮೋಸದಿಂದ ಕರ್ನಾಟಕ ಬ್ಯಾಂಕ್ ಗಳಲ್ಲಿ ಕನ್ನಡಿಗರ ಕಷ್ಟ ನನಗೆ ಅರಿವಿಲ್ಲ ಎಂದ ನಿರ್ಮಲ ಸೀತಾರಾಮನ್ ಗೆ ಕನ್ನಡಿಗರ ಕಷ್ಟವನ್ನು ವಿಡಿಯೋ ಸಮೇತ ತೋರಿಸಿದ ಜಿಸಿ ಚಂದ್ರಶೇಖರ್

ಕರ್ನಾಟಕ ರಾಜ್ಯದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಕಲಿಯದೇ ಪರ ಭಾಷೆಗಳಲ್ಲೇ ವ್ಯವಹಾರ ನಡೆಸುತ್ತಿರುವ ಹೊರ ರಾಜ್ಯಗಳ ಅಧಿಕಾರಿಗಳ ವಿರುದ್ಧ ಕನ್ನಡಿಗರು ಆಕ್ರೋಶವನ್ನು ವ್ಯಕ್ತಪಡಿಸೋದು ಆಗಾಗ ಕೇಳಿಬರುತ್ತಲೇ ಇರುತ್ತದೆ. ಕನ್ನಡನಾಡಿನ ಗ್ರಾಮೀಣ ಭಾಗದ ಜನರು ಸೇರಿದಂತೆ ಬಹು ಪ್ರದೇಶದ ಜನರು ಬಾರದ ಭಾಷೆಯಿಂದ ಬ್ಯಾಂಕ್ ಗಳಲ್ಲಿ ಸರಿಯಾಗಿ ವ್ಯವರಿಸಲು ಪರದಾಡುವ ಸ್ಥಿತಿ ಎದುರಾಗಿದೆ.

ಕನ್ನಡಿಗರ ಮೇಲೆ ಬೇರೆ ರಾಜ್ಯದಿಂದ ಬಂದ ಅಧಿಕಾರಿಗಳು ದಬ್ಬಾಳಿಕೆ ನಡೆಯುವ ಘಟನೆಗಳಿಗೆಲ್ಲಾ 2014ರ ನಂತರ ಬದಲಾದ ಐಬಿಪಿಎಸ್ ನಿಯಮಾವಳಿಗಳೇ ಕಾರಣ ಎಂಬುದುದು ಹೆಚ್ಚು ಗುಟ್ಟಾಗಿ ಉಳಿದಿಲ್ಲ. 2014ರ ನಂತರ ಬದಲಾದ ನಿಯಮಾವಳಿಯಿಂದ ಐಬಿಪಿಎಸ್ ಪರೀಕ್ಷೆಯನ್ನು ಕೇವಲ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಮಾತ್ರವೇ ಬರೆಯಬೇಕಾಗಿದೆ. ಅಲ್ಲದೇ ನೇಮಕಾತಿಯಲ್ಲಿಯೂ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡುತ್ತಿಲ್ಲ ಎಲ್ಲಾ ಕಾರಣದಿಂದ ಕರುನಾಡ ಬ್ಯಾಂಕ್ ಗಳಲ್ಲಿ ಕೇವಲ ಪರ ರಾಜ್ಯದ ಸಿಬ್ಬಂದಿಯವರೇ ತುಂಬಿದ್ದಾರೆ.

ತನ್ನೊಂದಿಗೆ ವ್ಯವಹರಿಸಬೇಕೆಂದರೆ ನೀವು ಹಿಂದಿ ಕಲಿಯಬೇಕು, ತಾನು ಕನ್ನಡ ಮಾತನಾಡಲಾರೆ ಎಂದು ಸ್ಥಳೀಯ ಗ್ರಾಹಕರೊಂದಿಗೆ ಉದ್ಧಟತನ ತೋರಿಸಿದ ಬ್ಯಾಂಕ್‌ ನೌಕರನನ್ನು ಗ್ರಾಹಕ ತರಾಟೆಗೆ ತೆಗೆದುಕೊಂಡ ಘಟನೆಯೊಂದು ಬೆಳಕಿಗೆ ಬಂದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಂಸದ ಜಿಸಿ ಚಂದ್ರಶೇಖರ್ ಅವರು ಹಂಚಿಕೊಂಡಿದ್ದು ತೀವ್ರವಾಗಿ ಖಂಡಿಸಿದ್ದಾರೆ. ಈ ವಿಡಿಯೋವನ್ನು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ಟ್ಯಾಗ್ ಮಾಡಿರುವ ಚಂದ್ರಶೇಖರ್ ಐಬಿಪಿಎಸ್ ಮೋಸದಿಂದ ಕನ್ನಡಿಗರಿಗೆ ಆಗುತ್ತಿರುವ ಕಷ್ಟ ಹೀಗಿದು ಎಂದು ಹೇಳಿದ್ದಾರೆ.

 

 

ಚಂದ್ರಶೇಖರ್ ಅವರ ಟ್ವೀಟ್ ಈ ರೀತಿ ಇದೆ:
“ಮಾನ್ಯ ನಿರ್ಮಲ ಸೀತಾರಾಮನ್ ಅವರೇ, ನಿಮ್ಮನ್ನು ಭೇಟಿಯಾದ ಸಂದರ್ಭದಲ್ಲಿ ನೀವು #IBPSMosa ದಿಂದ ಕರ್ನಾಟಕ ಜನತೆಗೆ ಮತ್ತು ಮಕ್ಕಳಿಗೆ ಆಗುತ್ತಿರುವ ಕಷ್ಟಗಳ ಬಗ್ಗೆ ಅರಿವಿಲ್ಲ ಅಂದಿದ್ರಿ. ನೀವು ನಮ್ಮ ಕರ್ನಾಟಕದಿಂದ ಆಯ್ಕೆ ಆದ ಸಂಸದರು ಮತ್ತು ಕೇಂದ್ರ ಹಣಕಾಸು ಸಚಿವೆ ಆದ ಕಾರಣ ಈ ವಿಡಿಯೋ ನಿಮ್ಮ ಗಮನಕ್ಕೆ, #IBPSMosa ದಿಂದ ಬ್ಯಾಂಕ್ ನಲ್ಲಿ ಕನ್ನಡಿಗರ ಕಷ್ಟ.”

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top