fbpx
ಸಮಾಚಾರ

ಜುಲೈ 15: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಜುಲೈ 15, 2021 ಗುರುವಾರ
ವರ್ಷ : 1943 ಪ್ಲಾವ
ತಿಂಗಳು : ಆಷಾಢ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಪಂಚಮೀ 7:15 am
ನಕ್ಷತ್ರ : ಉತ್ತರ 3:21 am
ಯೋಗ : ವರಿಘ 11:44 am
ಕರಣ : ಬಾಲವ 7:15 am ಕುಲವ 6:43 pm

Time to be Avoided
ರಾಹುಕಾಲ : 2:00 pm – 3:36 pm
ಯಮಗಂಡ : 6:04 am – 7:39 am
ದುರ್ಮುಹುರ್ತ : 10:18 am – 11:09 am, 3:23 pm – 4:14 pm
ವಿಷ : 10:48 am – 12:22 pm
ಗುಳಿಕ : 9:15 am – 10:50 am

Good Time to be Used
ಅಮೃತಕಾಲ : 8:15 pm – 9:50 pm
ಅಭಿಜಿತ್ : 12:00 pm – 12:50 pm

Other Data
ಸೂರ್ಯೋದಯ : 6:01 am
ಸುರ್ಯಾಸ್ತಮಯ : 6:50 pm
ರವಿರಾಶಿ : ಮಿಥುನ
ಚಂದ್ರರಾಶಿ : ಸಿಂಹ upto 09:39

 

 

 

ಖರ್ಚಿನ ದೃಷ್ಟಿಯಿಂದ ಹೊಸದಾದ ಒತ್ತಡ ಎದುರಾದರೂ ಬೇರೆ ರೂಪಗಳಿಂದ ಹಣವು ಹರಿದು ಬರುವುದರಿಂದ ಅನುಕೂಲವಾಗುವುದು. ನಿಮ್ಮ ಕಾರ್ಯಗಳು ಸುಗಮವಾಗುವುದು. ನಿಮ್ಮ ಸಂತಸಕ್ಕೆ ಮಡದಿ ಮಕ್ಕಳು ಸಹಾಯ ಮಾಡುವರು.

 

ನಿಮಗೆ ತಿಳಿಯದಂತೆ ಕೆಲವು ಹಿತಶತ್ರುಗಳ ಕಾಟ ಆರಂಭವಾಗುವುದು. ಬೂದಿ ಮುಚ್ಚಿದ ಕೆಂಡದಂತೆ ಇರುವ ಕೆಲವರು ಏಕಾಏಕಿ ನಿಮ್ಮ ಮೇಲೆ ಏರಿ ಬರುವ ಸಂದರ್ಭವಿರುತ್ತದೆ. ಲಕ್ಷ್ಮೀನಾರಸಿಂಹದೇವರನ್ನು ಪ್ರಾರ್ಥಿಸಿ.

 

ಮನೆಗೆದ್ದು ಮಾರುಗೆಲ್ಲು ಎಂದರು ಅನುಭಾವಿಗಳು. ಹಾಗಾಗಿ ಮನೆಯ ಸದಸ್ಯರೊಡನೆ ಮನಸ್ತಾಪ ಮಾಡಿಕೊಳ್ಳದಿರಿ. ಮಕ್ಕಳ ಪ್ರಗತಿಯು ನಿಮಗೆ ಸಂತಸವನ್ನು ನೀಡುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

 

ಚಾಣಾಕ್ಷ ಮತಿಗಳಾದ ನೀವು ಯೋಚಿಸದೆ ಯಾವ ಕೆಲಸವನ್ನು ಮಾಡಲಾರಿರಿ. ಆದರೆ ಅತಿಯಾದ ಆತ್ಮವಿಶ್ವಾಸದಿಂದ ಮಾಡುವ ಕೆಲಸವು ಕೆಟ್ಟು ಹೋಗುವ ಸಾಧ್ಯತೆಗಳಿದ್ದು ಹೆಚ್ಚಿನ ಬೀಗುವಿಕೆಗಿಂತ ಬಾಗಿ ನಡೆಯುವುದೇ ಒಳ್ಳೆಯದು

 

 

ನೀವು ಇಚ್ಛಿಸಿದ ಕಾರ್ಯಗಳು ಕೈಗೂಡುವವು. ನಿಮಗೆ ಸಹಾಯ ಮಾಡಲು ನಾ ಮುಂದು ತಾ ಮುಂದು ಎಂದು ಜನರು ಮುಂದೆಬರುವರು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುವುದು.

 

 

ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಇರಲಿ. ಯಾವುದೇ ವಿಷಯಗಳಲ್ಲಿ ಅನಗತ್ಯ ಹಸ್ತಕ್ಷೇಪ ಸಲ್ಲದು. ನಿಮ್ಮ ಶ್ರಮಕ್ಕೆ ತಕ್ಕ ಫಲವನ್ನು ಪಡೆಯುವಿರಿ. ಆರೋಗ್ಯ ಸುಸ್ಥಿರವಾಗಿರುವುದು. ಈಶ್ವರ ಆರಾಧನೆ ಮಾಡುವುದು ಒಳಿತು.

 

 

ಆರೋಗ್ಯದ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವಿರಿ. ಆದರೆ, ನಿಮಗೆ ನಿರಾಶೆ ಕಾದಿರುವುದು. ಸೂಕ್ತ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ. ಸಂಗಾತಿಯ ಪೂರ್ಣ ಸಹಕಾರ ದೊರೆಯಲಿದೆ.

 

 

ಬಹಳ ದಿನಗಳ ನಂತರ ಹಳೆ ಮಿತ್ರರನ್ನು ಭೇಟಿಯಾಗುವ ಸಂಭವ ಇದೆ. ಯಾವುದೇ ಜವಾಬ್ದಾರಿ ಹೊರುವ ಮೊದಲು ನಿಮ್ಮ ಸಾಮರ್ಥ್ಯ‌ದ ಅರಿವಿರಲಿ. ಅತ್ಯುತ್ಸಾಹ ಅಪಹಾಸ್ಯಕ್ಕೆ ಈಡಾದೀತು. ಹಿರಿಯರಿಂದ, ಸ್ನೇಹಿತರಿಂದ ಬರಲಿರುವ ಯಾವುದೇ ಸಹಾಯಗಳನ್ನು ತಿರಸ್ಕರಿಸಬೇಡಿ. ಅನಿರೀಕ್ಷಿತ ಆರ್ಥಿಕ ಮುಗ್ಗಟ್ಟು ನಿಮ್ಮನ್ನು ಅಧೈರ್ಯಗೊಳಿಸೀತು. ಜೀವನ ವಿಧಾನವನ್ನು ಸ್ವಲ್ಪ ಬದಲಿಸಿಕೊಳ್ಳಬೇಕಾಗುವುದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

 

ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವವು. ಇದರಿಂದ ಮನೆಯಲ್ಲಿ ಶಾಂತಿ ನೆಲೆಸುವುದು. ಮನೆತನಕ್ಕೆ ಸಂಬಂಧಿಸಿದ ಗಂಭೀರ ಪ್ರಸಂಗ ನಿಮ್ಮ ಜಾಣತನಕ್ಕೆ ಸವಾಲಾಗುವುದು. ಆದರೆ ಕುಲದೇವತಾ ಸ್ಮರಣೆಯಿಂದ ಆತ್ಮವಿಶ್ವಾಸ ಮೂಡುವುದು. ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ಹೊಸ ಗೆಳೆಯರ ಪರಿಚಯ ನಿಮ್ಮ ಉತ್ಸಾಹ ಹೆಚ್ಚಿಸಲಿದೆ.

 

ನೆಂಟರ ಆಗಮನದಿಂದ ಮನೆಯಲ್ಲಿ ಸಂತಸ ನೆಲೆಸುವುದು. ಆದರೆ ಅವರ ಆಶೋತ್ತರಗಳನ್ನು ಈಡೇರಿಸುವಲ್ಲಿ ಗೊಂದಲ ಮೂಡುವುದು. ಜೀವನದಲ್ಲಿ ಅನಿರೀಕ್ಷಿತ ತಿರುವು ಬರಲಿದ್ದು, ಅದು ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ.  ಹಣಕಾಸಿನ ವಿಚಾರದಲ್ಲಿ ಮೋಸ ಹೋಗುವ ಸಂಭವವಿದೆ. ಲೇವಾದೇವಿ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.

 

ಕಷ್ಟ, ನಷ್ಟ ತಾತ್ಕಾಲಿಕ. ಕೋಪಕ್ಕೆ ಕಡಿವಾಣ ಹಾಕಿ. ಕೌಟುಂಬಿಕ ಜೀವನದಲ್ಲಿ ನಡೆದ ಘಟನೆ ಮನಸ್ಸಿಗೆ ಬೇಸರ ಮಾಡುವುದು. ವಿವಾಹಕ್ಕೆ ಸಂಬಂಧಪಟ್ಟ ಮಾತುಕತೆಗಳು ಬೇಡ.

 

ಹೊಸ ಸಂಬಂಧ ಏರ್ಪಡಲಿದ್ದು ಅದು ಪ್ರಮುಖ ಪಾತ್ರ ವಹಿಸಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದು. ನೆರೆಹೊರೆಯವರೊಂದಿಗೆ ಸ್ನೇಹದಿಂದ ವರ್ತಿಸಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top