fbpx
ಸಮಾಚಾರ

ʻನನ್ನನ್ನು ಕೇಳಿ ಬ್ಯಾಂಕಿನಲ್ಲಿ ಹಣ ಇಟ್ಟಿದ್ದೀರಾʼ ಎಂದು ಕೇಳಿದ್ರಂತೆ ವಿತ್ತ ಸಚಿವೆ ನಿರ್ಮಲ ಸೀತಾರಾಮನ್

ನನ್ನನ್ನು ಕೇಳಿ ನೀವು ರಾಘವೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಹಣ ಹೂಡಿಕೆ ಮಾಡಿದ್ದೀರಾ ಎಂದು ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಮ್ಮನ್ನು ಪ್ರಶ್ನಿಸಿದರು ಎಂದು ವಂಚನೆಗೊಳಗಾದ ಠೇವಣಿದಾರರು ಆರೋಪಿಸಿದ್ದಾರೆ.

ಜುಲೈ 2 ರ ಶುಕ್ರವಾರದಂದು ಒಕ್ಕೂಟ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಬ್ಯಾಂಕ್‌‌ನ ಠೇವಣಿದಾರರು ಭೇಟಿ ಮಾಡಿದ್ದರು. ಈ ವೇಳೆ ನ್ಯಾಯ ಕೊಡಿಸುವಂತೆ ಅವರಲ್ಲಿ ಕೇಳಿಕೊಂಡಾಗ ‘‘ನನ್ನನ್ನು ಕೇಳಿ ಹಣ ಇಟ್ಟಿದ್ದೀರಾ” ಎಂದು ಉಡಾಫೆಯಿಂದ ಮಾತನಾಡಿದರು ಎಂದು ಠೇವಣಿದಾರ ಹರೀಶ್ ಸೋಮವಾರ ಆರೋಪಿಸಿದ್ದಾರೆ.

ಕೆಪಿಸಿಸಿ ವೈದ್ಯಕೀಯ ಘಟಕದ ಕಾರ್ಯದರ್ಶಿ ಡಾ. ಶಂಕರ್‌ ಗುಹಾ ಅವರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಠೇವಣಿದಾರ ಹರೀಶ್‌, “ಸಚಿವೆ ಸೀತಾರಾಮ್‌ ಅವರು ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಗುರು ರಾಘವೇ೦ದ್ರ ಸಹಕಾರಿ ಬ್ಯಾಂಕ್‌ ಠೇವಣಿದಾರರು ತಾವು ಹೂಡಿಕೆ ಮಾಡಿದ ಹಣ ಕಳೆದುಕೊಂಡಿರುವ ಬಗ್ಗೆ ಹೇಳಲಾಯಿತು. ಅದಕ್ಕೆ ಅವರು, ನನ್ನನ್ನು ಕೇಳಿ ರಾಘವೇಂದ್ರ ಬ್ಯಾಂಕ್‌ನಲ್ಲಿ ಹಣ ಹೂಡಿಕೆ ಮಾಡಿದ್ದೀರಾ” ಎಂದು ಪ್ರಶ್ನಿಸಿದ್ದಾರೆ ಎಂದು ಹೇಳಿದ್ದಾರೆ..

ಕೇಂದ್ರ ಹಣಕಾಸು ಸಚಿವರ ಬಳಿ ಕೇಳಿದ್ರೆ ಆರ್​ಬಿಐನಿಂದ ಮಾಹಿತಿ ಬಂದ ಮೇಲೆ ಮಾತನಾಡುತ್ತೇನೆಂದು ಹೇಳ್ತಾರೆ. ಇಂತಹ ವಂಚಕ ಬ್ಯಾಂಕ್​ಗೆ ಆರ್​ಬಿಐ ‘A’ ಗ್ರೇಡ್ ಕೊಟ್ಟಿದೆ. ಇದು ಹೇಗೆ ಸಾಧ್ಯ? ವಂಚನೆ ನಡೆಸಿದ ಬ್ಯಾಂಕ್​ಗೆ ಈಗ ಬೇರೆ ಬೇರೆ ಕಡೆ ಬ್ರಾಂಚ್​​ಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಈ ಪ್ರಕರಣದಲ್ಲಿ ರಾಜಕೀಯ ದುರುದ್ದೇಶ ಇರೋದು ಪಕ್ಕಾ ಆಗಿದೆ.” ಎಂದು ಹೇಳಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top