fbpx
ಸಮಾಚಾರ

“ಊಟ ತಡವಾಗಿದ್ದಕ್ಕೆ ಸಪ್ಲೈಯರ್ ಮೇಲೆ ರೇಗಾಡಿರಬಹುದು ನಿಜ” ನಟ ದರ್ಶನ್ ಸ್ಪಷ್ಟನೆ

ನಟ ದರ್ಶನ್ ಅವರು ದಲಿತ ಸಪ್ಲಯರ್ ಒಬ್ಬನಿಗೆ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಮಾಡಿರುವ ಆರೋಪದ ವಿಚಾರ ಭಾರಿ ಸುದ್ದಿಯಾಗುತ್ತಿದೆ. ಇದೀಗ ಈ ವಿಚಾರವಾಗಿ ಸ್ವತಃ ನಟ ದರ್ಶನ್ ಅವರೇ ಪ್ರತಿಕ್ರಿಯೆ ನೀಡಿದ್ದು ಘಟನೆಯ ಬಗ್ಗೆ ವಿವರಿಸಿದ್ದಾರೆ.

ಇಂದ್ರಜಿತ್ ಲಂಕೇಶ್ ಏನ್ ಬೇಕಾದರೂ ಹೇಳಲಿ. ಊಹಾಪೋಹಗಳನ್ನು ಬಿಟ್ಟು ಬಿಡಿ. ಇದನ್ನು ಮುಚ್ಚಿ ಹಾಕ್ತಿಲ್ಲ. ಈಗ ಇದರಲ್ಲಿ ಜಾತಿ ಬೇರೆ ತರುತ್ತಿದ್ದಾರೆ. ಇವತ್ತು ಯಾಕೆ ಈ ಪ್ರಶ್ನೆ ಹುಟ್ಟಿಕೊಂಡಿತು?

ನನ್ನದು ಸಂದೇಶ್ ಮಧ್ಯೆ ಸಾವಿರ ಗಲಾಟೆ ಇದೆ. ಇಂದ್ರಜಿತ್ ಅವ್ರು ದೊಡ್ಡ ತನಿಖಾದಾರರು. ನಾಲ್ಕು ದಿನದ ಲೆಕ್ಕ ತೆಗೆದುಕೊಳ್ಳಲಿ. ಇಂದ್ರಜಿತ್ ಹೇಳಿದ್ದನ್ನು ಸಾಬೀತು ಪಡಿಸಲಿ. ನಾಳೆ ಆಷಾಢ ಶುಕ್ರವಾರ ಇರುವ ಕಾರಣ ಈಗ ಮೈಸೂರಿಗೆ ಹೋಗುತ್ತಿದ್ದೇನೆ. ಅಲ್ಲಿ ಬಂದು ಕೇಳಿದರೂ ಇದೇ ಉತ್ತರವನ್ನು ನೀಡುತ್ತೇನೆ.

ಹೋಟೆಲ್‍ನಲ್ಲಿ ಸಪ್ಲೈಯರ್ ಊಟ ತಡವಾಗಿ ತಂದಿದ್ದಕ್ಕೆ ಬೈದಿರಬಹುದು. ಯಾಕಪ್ಪ ತಡ ಮಾಡಲಾಗಿದೆ ಎಂದು ಕೇಳಿರಬಹುದು. ಆದರೆ ಈಗ ಈ ಪ್ರಕರಣದಲ್ಲಿ ಜಾತಿ ತೆಗೆದಿದ್ದಾರೆ ಎಂದು ಹೇಳುವ ಮೂಲಕ ದರ್ಶನ್ ಇಂದ್ರಜಿತ್ ಲಂಕೇಶ್‍ಗೆ ತಿರುಗೇಟು ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top