fbpx
ಸಮಾಚಾರ

ಧಾರ್ಮಿಕ ಭಾವನೆಗೆ ದಕ್ಕೆ ನಟಿ ಕರೀನಾ ಕಪೂರ್ ಖಾನ್ ವಿರುದ್ಧ ದೂರು ದಾಖಲು

ಬಾಲಿವುಡ್​ ನಟಿ ಕರೀನಾ ಕಪೂರ್ ಅವರು ವಿರುದ್ಧ ಅವರು ಬರೆದಿರುವ (ಸಹ ಲೇಖಕಿ) ಪುಸ್ತಕದ ಶೀರ್ಷಿಕೆಗೆ ಸಂಭಂಧಿಸಿದಂತೆ ಮಹಾರಾಷ್ಟ್ರದ ಬೀಡ್​ನಲ್ಲಿ ದೂರೊಂದು ದಾಖಲಾಗಿದೆ. ಕ್ರೈಸ್ತ ಸಮುದಾಯಕ್ಕೆ ಸೇರಿದ ಗುಂಪೊಂದು ಕರೀನಾ ಅವರ ‘ಪ್ರಿಗ್ನೆನ್ಸಿ ಬೈಬಲ್’ ಪುಸ್ತಕ ಶೀರ್ಷಿಕೆಯಾಗಿ ಪವಿತ್ರ ಗ್ರಂಥದ ಹೆಸರನ್ನು ಪುಸ್ತಕಕ್ಕೆ ಇಟ್ಟಿರುವದಕ್ಕೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿ ದೂರು ದಾಖಲಿಸಿದ್ದಾರೆ.

 

 

ಆಲ್ಫಾ ಒಮೆಗಾ ಕ್ರಿಶ್ಚಿಯನ್ ಮಹಾಸಂಗ್ ಅಧ್ಯಕ್ಷ ಆಶಿಶ್ ಶಿಂಧೆ ಬೀಡ್‌ನ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಇನ್ನು ಈ ಪುಸ್ತಕಕ್ಕೆ ಇಬ್ಬರು ಲೇಖಕರಿದ್ದು, ಅದರಲ್ಲಿ ಕರೀನಾ ಕಪೂರ್ ಪ್ರಮುಖರಾಗಿದ್ದಾರೆ.

ಶಿಂಧೆಯವರು ದೂರಿನಲ್ಲಿ ಪುಸ್ತಕದ ಶೀರ್ಷಿಕೆಯನ್ನು ಕೇಂದ್ರವಾಗಿರಿಸಿಕೊಂಡು ದೂರು ದಾಖಲಿಸಿದ್ದಾರೆ. ಕರೀನಾ ಕಪೂರ್ ಮತ್ತು ಅದಿತಿ ಶಾ ಬಿಮ್ಜಿಯಾನಿ ಜೊತೆಯಾಗಿ ಈ ಪುಸ್ತಕ ಬರೆದಿದ್ದಾರೆ. ಜಗ್ಗರ್‌ನಾಟ್ ಬುಕ್ಸ್ ಪುಸ್ತಕವನ್ನು ಪ್ರಕಟಿಸಿದೆ. ಕರೀನಾ ಕಪೂರ್ ಗರ್ಭಾವಸ್ಥೆಯ ದಿನಚರಿಗಳನ್ನು ಒಳಗೊಂಡಿರುವ ಈ ಪುಸ್ತಕಕ್ಕೆ ‘ಪ್ರೆಗ್ನೆನ್ಸಿ ಬೈಬಲ್’ ಎನ್ನುವ ಶೀರ್ಷಿಕೆಯನ್ನು ಇಡಲಾಗಿದೆ. ಸದ್ಯ ಈ ಶೀರ್ಷಿಕೆ ಕ್ರೈಸ್ತ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.

ಐಪಿಸಿ ಸೆಕ್ಷನ್ 295-A ಅಡಿಯಲ್ಲಿ ಕರೀನಾ ಕಪೂರ್, ಅದಿತಿ ಶಾ ಭೀಮ್‌ಜಾನಿ ಮತ್ತು ಜಗ್ಗರ್‌ನಾಟ್ ಬುಕ್ಸ್ ವಿರುದ್ಧ ದೂರು ನೀಡಿದ್ದಾರೆ. ಆದರೆ, ಎಫ್‌ಐಆರ್ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

”ನಾವು ದೂರನ್ನು ಸ್ವೀಕರಿಸಿದ್ದೇವೆ. ಆದರೆ, ಪ್ರಕರಣವನ್ನು ದಾಖಲು ಮಾಡಿಲ್ಲ. ಯಾಕಂದ್ರೆ, ಘಟನೆ ಇಲ್ಲಿ ನಡೆದಿಲ್ಲ. ಮುಂಬೈನಲ್ಲಿ ದೂರು ನೀಡುವಂತೆ ಸಲಹೆ ನೀಡಿದ್ದೇವೆ” ಎಂದು ಶಿವಾಜಿನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಾಯಿನಾಥ್ ತೊಂಬ್ರೆ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top