fbpx
ಸಮಾಚಾರ

“ಗಲಾಟೆ ನಡೆದಿದ್ದು ನಿಜ, ಆದ್ರೆ ದರ್ಶನ್ ಹೊಡೆದಿಲ್ಲ, ಬೈದಿದ್ದಾರೆ ಅಷ್ಟೇ” -ಸಂದೇಶ್ ನಾಗರಾಜ್ ಪುತ್ರ ಸ್ಪಷ್ಟನೆ

ದರ್ಶನ್ ಮತ್ತು ಸ್ನೇಹಿತರು ದಲಿತ ವೇಟರ್‍ರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರ ಆರೋಪಕ್ಕೆ ನಿರ್ಮಾಪಕ ಸಂದೇಶ್ ನಾಗರಾಜ್ ಪುತ್ರ ಪ್ರತಿಕ್ರಿಯೆ ನೀಡಿದ್ದಾರೆ.

ಸಣ್ಣದಾಗಿ ಗಲಾಟೆ ನಡೆದಿದ್ದು ನಿಜ, ಆದರೆ ದರ್ಶನ್ ಯಾರಿಗೂ ಹೊಡೆದಿಲ್ಲ. ನಮ್ಮ ಕಾರ್ಮಿಕರಿಗೆ ಬೀದಿದ್ದಾರೆ ಅಷ್ಟೇ ಎಂದು ಸಂದೇಶ್ ದಿ ಪ್ರಿನ್ಸ್ ಮಾಲೀಕ ಸಂದೇಶ್ ನಾಗರಾಜ್ ಅವರು ಪುತ್ರ ಸ್ಪಷ್ಟಪಡಿಸಿದ್ದಾರೆ.

ಹೋಟೇಲಿನಲ್ಲಿ ವೇಟರ್ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, “ಸಣ್ಣ ಜಗಳ ಆಗಿದ್ದು ನಿಜ, ಆದರೆ ಹೊಡೆದಿಲ್ಲ ಬೈದಿದ್ದಾರೆ ಅಷ್ಟೆ. ಅಂದು ನಾನು ಕೂಡ ಇದ್ದೆ. ಬೈಬೇಡಪ್ಪ ನಮ್ಮ ಕಾರ್ಮಿಕರಿಗೆ. ನಮಗೆ ಕೆಲಸಗಾರರು ಸಿಗುವುದಿಲ್ಲ. ನೀನು ಯಾವುದೋ ಟೆನ್ಶನ್ ನಲ್ಲಿ ನಮ್ಮವರಿಗೆ ಯಾಕೆ ಬೈತೀಯಾ ಎಂದಿದ್ದೆ. ಅದಕ್ಕೆ ಅವನು ಕೋಪ ಕೂಡ ಮಾಡಿಕೊಂಡಿದ್ದ” ಎಂದರು.

ನನಗೆ ದರ್ಶನ್​ಗೂ ಗಲಾಟೆ ಆಗೋದೇ ಅವರು ಜನರನ್ನ ಕರೆದುಕೊಂಡು ಬರೋ ವಿಚಾರದಲ್ಲಿ. ಸುಮಾರು 15ರಿಂದ 30 ಜನ ಬರುತ್ತಾರೆ. ಇಷ್ಟೆಲ್ಲಾ ಜನರನ್ನ ಕರೆದುಕೊಂಡು ಬರಬೇಡಿ ಅಂತಾ ನಾನು ಹೇಳ್ತೇನೆ. ದರ್ಶನ್ ಯಾರ ಮೇಲೂ ಕೈಯೆತ್ತಿಲ್ಲ. ಬೈದಿದ್ದಾನೆ ಅಷ್ಟೇ. ಈ ಪ್ರಕರಣ ಮುಚ್ಚಿ ಹಾಕೋದ್ರಿಂದ ನನಗೆ ಯಾವುದೇ ಲಾಭ ಇಲ್ಲ. ಮಹಾರಾಷ್ಟ್ರದಿಂದ ಬಂದ ಟ್ರೈನಿ ಮೇಲೆ ಬೈದಿದ್ದಾನೆ. ಅವರಿಗೆ ಭಾಷೆ ಸಮಸ್ಯೆ ಇತ್ತು. ಈ ವಿಚಾರಕ್ಕೆ ಗಲಾಟೆ ಆಗಿದೆ ಅಂತಾ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top