fbpx
ಸಮಾಚಾರ

ಟೀಮ್ ಇಂಡಿಯಾಗೆ ಆಘಾತ: ಇಂಗ್ಲೆಂಡ್ ಪ್ರವಾಸದಲ್ಲಿರುವ ಇಬ್ಬರು ಆಟಗಾರರಿಗೆ ಕೊರೋನಾ ಪಾಸಿಟಿವ್

ಇಂಗ್ಲೆಂಡ್​ ಸರಣಿಗೆ ತೆರಳಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾಗೆ ದೊಡ್ಡ ಆಘಾತ ಉಂಟಾಗಿದ್ದು, ಇಬ್ಬರು ಆಟಗಾರನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಅಂತಾ ವರದಿಯಾಗಿದೆ. ಯಾರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಅನ್ನೋ ಮಾಹಿತಿ ಇನ್ನೂ ತಿಳಿದುಬಂದಿಲ್ಲ.

ಇಂಗ್ಲೆಂಡ್ ರಾಷ್ಟ್ರೀಯ ಆರೋಗ್ಯ ಸರ್ವಿಸ್ ಭಾರತೀಯ ಆಟಗಾರರ ಕೋವಿಡ್ ಪರೀಕ್ಷೆ ನಡೆಸುತ್ತಿದೆ. ಯಾವ ಆಟಗಾರ ಅಥವಾ ಎಷ್ಟು ಮಂದಿ ಆಟಗಾರರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಅದು ಇನ್ನಷ್ಟೇ ವರದಿ ನೀಡಬೇಕಿದೆ. ವರದಿಗಳ ಪ್ರಕಾರ ಸೋಂಕು ದೃಢಪಟ್ಟ ಬೆನ್ನಲ್ಲೇ ಆ ಆಟಗಾರನನ್ನ ಐಸೋಲೇಷನ್​ಗೆ ಒಳಪಡಿಸಲಾಗಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉಳಿದ ಆಟಗಾರರಿಗೂ ಆತಂಕ ಎದುರಾಗಿದೆ.

ಜು.10ರಂದು ಮೊದಲ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಎರಡನೇ ಪರೀಕ್ಷೆಯನ್ನು ಜು.14ರಂದು ನಡೆಸಲಾಗಿತ್ತು. ಆಟಗಾರನಿಗೆ ಮೊದಲ ಪರೀಕ್ಷೆಯಲ್ಲಿ ಕೋವಿಡ್ ಸೋಂಕು ದೃಢವಾಗಿದೆ ಎನ್ನಲಾಗಿದೆ. ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಬಳಿಕ ಆಟಗಾರ ಜನಸಂದಣಿ ಇರುವ ಜಾಗದಲ್ಲಿ ತಿರುಗಾಡಿದ್ದ ಎನ್ನಲಾಗಿದೆ.

ಗುರುವಾರ ಮಧ್ಯಾಹ್ನ ಭಾರತ ತಂಡ ಡರ್ಹಮ್ ನಲ್ಲಿ ಒಟ್ಟು ಸೇರಲಿದೆ. ಕೌಂಟಿ ಅಭ್ಯಾಸ ಪಂದ್ಯಕ್ಕಾಗಿ ಅಲ್ಲಿ ಸಿದ್ದತೆ ನಡೆಸಲಿದೆ. ಆದರೆ ಕೋವಿಡ್ ಪಾಸಿಟಿವ್ ಆದ ಆಟಗಾರ ಡರ್ಹಮ್ ಗೆ ಪ್ರಯಾಣ ಮಾಡುವುದಿಲ್ಲ. ಜುಲೈ 20ರಂದು ಕೌಂಟಿ ಚಾಂಪಿಯನ್ ಶಿಪ್ ಇಲೆವೆನ್ ವಿರುದ್ಧ ಭಾರತ ತಂಡ ಒಂದು ಅಭ್ಯಾಸ ಪಂದ್ಯವಾಡಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top