fbpx
ಸಮಾಚಾರ

ಬಿಗ್ ಬಾಸ್ ಕನ್ನಡ 8 :ಈ ನಾಲ್ಕು ಸ್ಪರ್ಧಿಗಳ ಮೇಲೆ ಎಲಿಮಿನೇಶನ್​​ ತೂಗುಗತ್ತಿ

‘ಬಿಗ್ ಬಾಸ್’ ಕನ್ನಡ ಸೀಸನ್ 8ರ ಎರಡನೇ ಇನಿಂಗ್ಸ್‌ನಲ್ಲಿ ಪ್ರಸ್ತುತ ಮನೆಯಲ್ಲಿ ಒಟ್ಟು 10 ಸದಸ್ಯರು ಇದ್ದಾರೆ. ವಾರದ ಆರಂಭದಲ್ಲೇ ಎಂಟು ಜನರನ್ನು ಬಿಗ್ ಬಾಸ್ ನಾಮಿನೇಟ್ ಮಾಡಿದ್ದರು. ಈ ವಾರ ಕ್ಯಾಪ್ಟನ್ ಆಗಿರುವುದರಿಂದ ಅರವಿಂದ್ ನಾಮಿನೇಷನ್‌ನಿಂದ ಬಚಾವ್ ಆಗಿದ್ದರು. ಇನ್ನು ಶಮಂತ್‌ರನ್ನು ಈ ವಾರ ನಾಮಿನೇಷನ್‌ನಿಂದ ರಘು ಗೌಡ ಬಚಾವ್ ಮಾಡಿದ್ದರು. ನಾಮಿನೇಟ್ ಆಗಿದ್ದ ಎಂಟು ಜನರಿಗೆ ಅದರಿಂದ ಬಚಾವ್ ಆಗುವುದಕ್ಕೆ ಬಿಗ್ ಬಾಸ್ ಟಾಸ್ಕ್‌ ನೀಡಿದ್ದರು. ಅಂತಿಮವಾಗಿ ಅದರಲ್ಲಿ ನಾಲ್ವರು ನಾಮಿನೇಟ್ ಆಗಿದ್ದಾರೆ.

 

 

ಮನೆಯಲ್ಲಿದ್ದ ಇತರೆ ಸ್ಪರ್ಧಿಗಳನ್ನು ಬಿಗ್ ಬಾಸ್​ ಖುದ್ದು ನಾಮಿನೇಟ್ ಮಾಡಿ, ಅದರಿಂದ ತಪ್ಪಿಸಿಕೊಳ್ಳಲು ದಂಡ ಯಾತ್ರೆ ಎಂಬ ಹೆಸರಿನ ಟಾಸ್ಕ್​ ಕೊಟ್ಟರು. ಇಡೀ ವಾರದಲ್ಲಿ ಕೊಡಲಾಗುವ ವಿಭಿನ್ನ ಟಾಸ್ಕ್​ಗಳಲ್ಲಿ ಎಲ್ಲರೂ ಭಾಗಿಯಾಬೇಕು. ಅದಕ್ಕೂ ಮೊದಲು ಟಾಸ್ಕ್​ ಎರಡು ಗುಂಪುಗಳ ನಡುವೆ ನಡೆಯಲಿದ್ದು, ಅದಕ್ಕಾಗಿ ಇರುವ ಸ್ಪರ್ಧಿಗಳಲ್ಲೇ ಎರಡು ತಂಡಗಳನ್ನಾಗಿ ವಿಂಗಡಿಸಲಾಯಿತು.

ಅರವಿಂದ್​ ನೇತೃತ್ವದ ತಂಡಕ್ಕೆ ವಿಜಯ ಯಾತ್ರೆ ಎಂದು ಹೆಸರಿಡಲಾಗಿತ್ತು. ಅದೇ ಮಂಜು ಪಾವಗಡ ಅವರ ತಂಡಕ್ಕೆ ನಿಂಗೈತೆ ಇರು ಅನ್ನೋ ಹೆಸರು ಕೊಡಲಾಯಿತು. ದಂಡ ಯಾತ್ರೆ ಟಾಸ್ಕ್​ನಲ್ಲಿ ವಿಭಿನ್ನ ರೀತಿಯ ಟಾಸ್ಕ್​ಗಳನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು. ಈ ಟಾಸ್ಕ್​ಗಳಲ್ಲಿ ಪ್ರತಿ ಸಲ ಗೆದ್ದಾಗಲೂ ಆ ತಂಡಕ್ಕೆ ಒಂದು ದಂಡವನ್ನು ನೀಡಲಾಗುತ್ತಿತ್ತು. ಈ ರೀತಿ ಕೊಡಲಾಗಿದ್ದ ಹತ್ತು ವಿಭಿನ್ನ ಟಾಸ್ಕ್​ಗಳಲ್ಲಿ ನಿಂಗೈತೆ ಇರು ಹೆಚ್ಚು ದಂಡಗಳನ್ನು ಪಡೆಯುವ ಮೂಲಕ ಜಯಗಳಿಸಿದೆ.

ಅಂತೆಯೇ ‘ನಿಂಗೈತೆ ಗುರು’ ತಂಡದಲ್ಲಿ ಚಕ್ರವರ್ತಿ ಚಂದ್ರಚೂಡ್, ದಿವ್ಯಾ ಸುರೇಶ್‌, ದಿವ್ಯಾ ಉರುಡುಗ, ಮಂಜು ಪಾವಗಡ, ಶಮಂತ್ ಇದ್ದರು. ವಿಜಯಯಾತ್ರೆ ತಂಡದಲ್ಲಿ ಅರವಿಂದ್, ಪ್ರಶಾಂತ್ ಸಂಬರಗಿ, ಶುಭಾ ಪೂಂಜಾ, ವೈಷ್ಣವಿ, ಪ್ರಿಯಾಂಕಾ ತಿಮ್ಮೇಶ್ ಇದ್ದರು. ಕೊನೆಗೆ ದಂಡಯಾತ್ರೆ ಟಾಸ್ಕ್‌ನಲ್ಲಿ ವಿಜಯಯಾತ್ರೆ ತಂಡ ಸೋತು, ನಾಮಿನೇಟ್ ಆಗಿದೆ. ಆ ತಂಡದಲ್ಲಿದ್ದ ಅರವಿಂದ್, ಕ್ಯಾಪ್ಟನ್ ಆಗಿರುವುದರಿಂದ ಅವರು ಇದರಿಂದ ಬಚಾವ್ ಆಗಿದ್ದಾರೆ. ಉಳಿದಂತೆ ಪ್ರಶಾಂತ್ ಸಂಬರಗಿ, ಶುಭಾ ಪೂಂಜಾ, ವೈಷ್ಣವಿ, ಪ್ರಿಯಾಂಕಾ ಅವರು ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರು ಬಿಗ್ ಬಾಸ್​ ಮನೆಯಿಂದ ಹೊರ ಹೋಗಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top