fbpx
ಸಮಾಚಾರ

ದಲಿತ ಸಪ್ಲೇಯರ್ ಮೇಲೆ ನಟ ದರ್ಶನ್ ಹಲ್ಲೆ ಆರೋಪ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದು ಹೀಗೆ

ನಟ ದರ್ಶನ್ ಅವರು ದಲಿತ ಸಪ್ಲಯರ್ ಒಬ್ಬನಿಗೆ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಮಾಡಿರುವ ಆರೋಪದ ವಿಚಾರ ಭಾರಿ ಸುದ್ದಿಯಾಗುತ್ತಿದೆ. ಇದೀಗ ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

”ಅದು ಅವರವರ ವೈಯಕ್ತಿಕ, ಸಾರ್ವಜನಿಕ ಜೀವನದಲ್ಲಿ ಹೇಗಿರಬೇಕು ಎನ್ನುವುದು ಅವರಿಗೆ ಸೇರಿದ್ದು. ಇಂತಹ ವಿಷಯಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಆಮೇಲೆ ಅದಕ್ಕೆ ಬೇರೆ ಏನೋ ಸಂಬಂಧ ಕಲ್ಪಿಸುವುದು ಬೇಡ. ಇದೆಲ್ಲ ಅವಶ್ಯಕತೆ ಇಲ್ಲ. ಯಾರಾದರೂ ತಪ್ಪು ಮಾಡಿದ್ರೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು, ನನಗೆ ಇದು ಸಂಬಂಧ ಇಲ್ಲ. ಈ ವಿಷಯಗಳು ಏನು ಎಂದು ಸರ್ಕಾರ ಮಾಹಿತಿ ಹೇಳಬೇಕು” ಎಂದು ತಿಳಿಸಿದ್ದಾರೆ.

ಇಂದ್ರಜಿತ್ ಆರೋಪವೇನು?
ಮೈಸೂರಿನಲ್ಲಿರುವ ಸಂದೇಶ್ ನಾಗರಾಜ್ ಅವರ ಸಂದೇಶ್ ಪ್ರಿನ್ಸ್ ಹೋಟೆಲ್​ನಲ್ಲಿ ದರ್ಶನ್ ಮತ್ತವರ ಗ್ಯಾಂಗ್​ನವರು ಹೋಟೆಲ್​ನ ವೇಟರ್​ವೊಬ್ಬನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಆ ವೇಟರ್ ಒಬ್ಬ ದಲಿತ ವ್ಯಕ್ತಿಯಾಗಿದ್ದಾನೆ. ವ್ಯಕ್ತಿಯ ಮೇಲೆ ಹಲ್ಲೆ ಆಗಿದ್ದರೂ ದರ್ಶನ್ ಮತ್ತವರ ಸಹಚರರ ವಿರುದ್ಧ ಮೈಸೂರು ಪೊಲೀಸರು ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂಬುದು ಇಂದ್ರಜಿತ್ ಲಂಕೇಶ್ ಅವ್ರ ಆರೋಪವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top