fbpx
ಸಮಾಚಾರ

ಇನ್ಮೇಲೆ ವ್ಯಾಕ್ಸೀನ್ ರಿಜಿಸ್ಟರ್, ಸರ್ಟಿಫಿಕೇಟ್ ಡೌನ್ಲೋಡ್ ಎಲ್ಲಾ ವಾಟ್ಸಾಪ್ ಟೆಲಿಗ್ರಾಂನಲ್ಲೇ ಮಾಡ್ಬೋದು, ಹೇಗೆ ಅಂತೀರಾ? ಮುಂದೆ ಓದಿ

ಭಾರತದಲ್ಲಿ ಕೋವಿಡ್​ ವಿರುದ್ಧ ಹೋರಾಡಲು 18 ವರ್ಷಗಳ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಕೆಲಸ ಕಳೆದ ಕೆಲ ತಿಂಗಳುಗಳಿಂದ ಭರದಿಂದ ಸಾಗುತ್ತಿದೆ. ಆದರೆ ಇನ್ನೂ ಬಹುತೇಕ ಲಸಿಕೆಯನ್ನು ಪಡೆಯಲು ಸಾಧ್ಯವಾಗಿಲ್ಲ. ಗ್ರಾಮೀಣ ಭಾಗದ ಜನರು ಸೇರಿದಂತೆ ಅನೇಕರಿಗೆ ವೆಬ್ ಸೈಟ್ ಗೆ ಭೇಟಿ ನೀಡಿ ಹೇಗೆ ವ್ಯಾಕ್ಸಿನ್ ರಿಜಿಸ್ಟರ್ ಮಾಡಬೇಕು ಎಂದು ಗೊತ್ತಿಲ್ಲ ಅಷ್ಟೇ ಅಲ್ಲದೆ ವೆಬ್’ಸೈಟ್ ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಕಾರಣ ಕೆಲವೊಮ್ಮೆ ಒಟಿಪಿಯೇ ಬರುವುದಿಲ್ಲ ಇನ್ನೂ ಮುಂತಾದ ಕಾರಣಗಳಿಂದ ಅನೇಕರು ಲಸಿಕೆ ನೋಂದಣಿ ಮಾಡಿ ಪಡೆಯಲು ಸಾಧ್ಯವಾಗುತ್ತಿಲ್ಲ.

 

 

ಇನ್ನು ಆಶಾ ಕಾರ್ಯಕರ್ತೆ/ ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ತಂತಮ್ಮ ಊರುಗಳಲ್ಲಿ ಲಸಿಕೆ ಪಡೆದ ಹಳ್ಳಿಗರು ತಮ್ಮ ವ್ಯಾಕ್ಸಿನ್ ಸರ್ಟಿಫಿಕೇಟ್ ಅನ್ನು ಡೌನ್ಲೋಡ್ ಮಾಡಿಕೊಂಡಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಒಂದೇ ವೇದಿಕೆಯಲ್ಲಿ ಪರಿಹಾರ ಸಿಗುತ್ತಿದೆ. ಹೌದು,ಸಂಸದ ಜಿಸಿ ಚಂದ್ರಶೇಖರ್ ಅವರ ಪ್ರಯತ್ನದ ಫಲವಾಗಿ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಮೂಲಕ ಅತೀ ಸುಲಭವಾಗಿ ಲಸಿಕೆ ನೋಂದಣಿ, ವ್ಯಾಕ್ಸಿನ್ ಸರ್ಟಿಫಿಕೇಟ್ ಜನರಿಗೆ ಸಿಗುತ್ತಿದೆ. ಅದು ಹೇಗೆ ಅಂತೀರಾ? ಮುಂದೆ ಓದಿ

 

 

ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರ ವತಿಯಿಂದ ಈ ಸೌಲಭ್ಯ ಅನುಷ್ಠಾನಕ್ಕೆ ಬಂದಿದ್ದು ಸದ್ಯ ಟೆಲಿಗ್ರಾಮ್ ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮುಂದಿನ ವಾರದಿಂದ ವಾಟ್ಸಾಪ್ ನಲ್ಲಿ ಕೂಡ ಮಾಹಿತಿ ಪಡೆಯಬಹುದು.. ‘BOT ತಂತ್ರಾಂಶ’ದ ಮೂಲಕ ಈ ಯೋಜನೆಯನ್ನು ಜನರಿಗೆ ಸಹಕಾರಿಯಾಗಿ ರೂಪಿಸಲಾಗಿದೆ ಅತೀ ಸುಲಭವಾಗಿ ವ್ಯಾಕ್ಸಿನ್ ಕುರಿತಾದ ಎಲ್ಲಾ ಸೌಲಭ್ಯ ಪಡೆಯಬಹುದು.

ಲಸಿಕೆಗೆ ನೋಂದಣಿ ಮಾಡುವುದು ಹೇಗೆ?
ಇಲ್ಲಿ ಕಾಣಿಸಿರುವ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ನೇರವಾಗಿ ಟೆಲಿಗ್ರಾಮ್ ನಲ್ಲಿ ‘VACCINATE INDIA’ ಎಂಬ bot ಚಾಟ್ ತೆರೆಯುತ್ತದೆ.
*ಮೊದಲು ನೀವು ಇಂಗ್ಲಿಷ್ ನಲ್ಲಿ ‘start’ ಎಂದು ಟೈಪಿಸಿ send ಮಾಡಬೇಕು
*ನಂತರ ನಿಮ್ಮಗೆ ಅನುಕೂಲವಾದ ಭಾಷೆ(ಇಂಗ್ಲಿಷ್ ಅಥವಾ ಕನ್ನಡ)ಯನ್ನು ಆಯ್ಕೆ ಮಾಡಿಕೊಳ್ಳಬೇಕು
*ಬಳಿಕ ಕೊಟ್ಟಿರುವ ಆಯ್ಕೆಗಳಲ್ಲಿ ಲಸಿಕೆ ಬುಕಿಂಗ್(ಆಯ್ಕೆ 1) ಎಂಬ ಆಪ್ಷನ್ ಅನ್ನು ಆಯ್ಕೆ ಮಾಡಿಕೊಳ್ಳಿ
* ನಂತರ ನಿಮ್ಮ ಹತ್ತಿರವಿರುವ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಹುಡುಕಲು ನಿಮ್ಮ ಪಿನ್‌ಕೋಡ್ ಅನ್ನು ನಮೂದಿಸಿ
*ನೀವು ನಮೂದಿಸಿದ ಪಿನ್ ಕೋಡ್ ನಲ್ಲಿ ಲಭ್ಯವಿರುವ ಲಸಿಕಾ ಕೇಂದ್ರಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ತೋರಿಸುತ್ತದೆ ಅವುಗಳಲ್ಲಿ ನಿಮಗೆ ಹತ್ತಿರದ ಲಸಿಕಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಿ
*ಬಳಿಕ ನಿಮ್ಮ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ, ಆ ಕೂಡಲೇ ನಿಮ್ಮ ಮೊಬೈಲ್‌ಗೆ
ಎಸ್‌ಎಂಎಸ್‌ ಮೂಲಕ ಒಟಿಪಿ ಸಂಖ್ಯೆ ಬರುತ್ತದೆ. ಅದನ್ನು ದಾಖಲಿಸಿ ನಿಮ್ಮ ಮೊಬೈಲ್ ನಂಬರ್ ಅನ್ನು ಪರಿಶೀಲಿಸಿಕೊಳ್ಳಿ (ಒಂದು ವೇಳೆ ಒಟಿಪಿ ಬರದಿದ್ದರೆ 0 ಯನ್ನು ಒತ್ತಿ ಆಗ ಮತ್ತೊಮ್ಮೆ ಒಟಿಪಿ ಬರುತ್ತದೆ)
*ಬಳಿಕ ಲಸಿಕೆ ಪಡೆದುಕೊಳ್ಳುವ ಫಲಾನುಭವಿಗಳ ಸಂಪೂರ್ಣ ಖಚಿತ ಮಾಹಿತಿಯನ್ನು ನಮೂದಿಸಿ ಲಸಿಕೆಗೆ ಅಪಾಯಿಂಟ್ಮೆಂಟ್ ಅನ್ನು ಪಡೆದುಕೊಳ್ಳಿ.

ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿಲ್ಲದಿದ್ದರೆ?
ಒಂದು ವೇಳೆ ನೀವು ನಮೂದಿಸಿದ ಪಿನ್ ಕೋಡ್ ವಿಳಾಸದಲ್ಲಿನ ಲಸಿಕಾ ಕೇಂದ್ರಗಳಲ್ಲಿ ಪ್ರಸ್ತುತ ಲಸಿಕೆ ಲಭ್ಯವಿಲ್ಲದಿದ್ದರೆ ನೀವು ಚಿಂತಿಸಬೇಕಿಲ್ಲ. ಏಕೆಂದರೆ ನೋಟಿಫಿಕೇಶನ್ ಮೂಲಕ ಲಸಿಕೆ ದೊರೆಯುವ ದಿನವೇ ಲಭ್ಯತೆಯ ಬಗ್ಗೆ ಮಾಹಿತಿ ಪಡೆಯಬಹುದು. ನೋಟಿಫಿಕೇಶನ್ ಆನ್ ಮಾಡಲು ಹೀಗೆ ಮಾಡಿ

 

 

ವ್ಯಾಕ್ಸಿನೇಷನ್ ಕೇಂದ್ರಗಳನ್ನು ಹುಡುಕಲು ನಿಮ್ಮ ಪಿನ್‌ಕೋಡ್ ಅನ್ನು ನಮೂದಿಸಿದ ನಂತರ ನೀವು ಸರ್ಚ್ ಮಾಡಿದ ಯಾವುದೇ ಕೇಂದ್ರವು ಲಸಿಕೆ ಲಭ್ಯತೆಯನ್ನು ಹೊಂದಿಲ್ಲ ಎಂಬ ಸಂದೇಶ ಬರುತ್ತದೆ. ಆ ನಂತರ ಅಲ್ಲಿನ ಕೊಟ್ಟಿರುವ ಆಯ್ಕೆಗಳಲ್ಲಿ ಅಧಿಸೂಚನೆಗಾಗಿ ಸಬ್‌ಸ್ಕ್ರೈಬ್ ಮಾಡಿ ಎಂಬ ಆಪ್ಷನ್ ಅನ್ನು ಆಯ್ಕೆ ಮಾಡಿ. ಅಲ್ಲಿಗೆ ನಿಮ್ಮ ಸಬ್‌ಸ್ಕ್ರೈಬ್ ಪ್ರಕ್ರಿಯೆ ಮುಗಿಯುತ್ತದೆ. ನೀವು ಯಶಸ್ವಿಯಾಗಿ ಸಬ್‌ಸ್ಕ್ರೈಬ್ ಆಗಿರುತ್ತೀರಿ..

ಲಸಿಕೆ ಪ್ರಮಾಣಪತ್ರ ಡೌನ್ಲೋಡ್ ಮಾಡುವುದು ಹೇಗೆ?
ಇಲ್ಲಿ ಕಾಣಿಸಿರುವ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ನೇರವಾಗಿ ಟೆಲಿಗ್ರಾಮ್ ನಲ್ಲಿ ‘VACCINATE INDIA’ ಎಂಬ bot ಚಾಟ್ ತೆರೆಯುತ್ತದೆ.
*ಮೊದಲು ನೀವು ಇಂಗ್ಲಿಷ್ ನಲ್ಲಿ ‘start’ ಎಂದು ಟೈಪಿಸಿ send ಮಾಡಬೇಕು

 

 

*ನಂತರ ನಿಮ್ಮಗೆ ಅನುಕೂಲವಾದ ಭಾಷೆ(ಇಂಗ್ಲಿಷ್ ಅಥವಾ ಕನ್ನಡ)ಯನ್ನು ಆಯ್ಕೆ ಮಾಡಿಕೊಳ್ಳಬೇಕು
*ಕೊಟ್ಟಿರುವ ಆಯ್ಕೆಗಳಲ್ಲಿ ‘ವ್ಯಾಕ್ಸಿನೇಷನ್ ಪ್ರಮಾಣ ಪತ್ರವನ್ನು ಡೌನ್ಲೋಡ್’ ಮಾಡಿ ಎಂಬ ಆಪ್ಷನ್ ಅನ್ನು ಆಯೆ ಮಾಡಿ
*ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ನಮೂದಿಸಿ
* ಬಳಿಕ ನಿಮ್ಮ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ, ಆ ಕೂಡಲೇ ನಿಮ್ಮ ಮೊಬೈಲ್‌ಗೆ
ಎಸ್‌ಎಂಎಸ್‌ ಮೂಲಕ ಒಟಿಪಿ ಸಂಖ್ಯೆ ಬರುತ್ತದೆ. ಅದನ್ನು ದಾಖಲಿಸಿ ನಿಮ್ಮ ಮೊಬೈಲ್ ನಂಬರ್ ಅನ್ನು ಪರಿಶೀಲಿಸಿಕೊಳ್ಳಿ (ಒಂದು ವೇಳೆ ಒಟಿಪಿ ಬರದಿದ್ದರೆ 0 ಯನ್ನು ಒತ್ತಿ ಆಗ ಮತ್ತೊಮ್ಮೆ ಒಟಿಪಿ ಬರುತ್ತದೆ)
*ಆಗ ನೀವು ನಮೂದಿಸಿದ್ದ ದೂರವಾಣಿ ಸಂಖ್ಯೆಗೆ ನೋಂದಣಿಯಾಗಿರುವ ಫಲಾನುಭವಿಗಳ ವಿವರ ಕಾಣಿಸುತ್ತದೆ. ನಂತರ ನಿಮಗೆ ಬೇಕಿರುವ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಂಡು ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top