fbpx
ಸಮಾಚಾರ

“ಅಪ್ಪನಿಗೆ ಹುಟ್ಟಿದ್ರೆ ದಾಖಲೆ ರಿಲೀಸ್ ಮಾಡಲಿ” ಇಂದ್ರಜಿತ್ ಗೆ ದರ್ಶನ್ ನೇರ ಸವಾಲ್

ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಅಪ್ಪನಿಗೆ ಹುಟ್ಟಿದವರೇ ಆಗಿದ್ದರೆ ಅವರು ದಾಖಲೆ ರಿಲೀಸ್ ಮಾಡಲಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನೇರ ಸವಾಲ್ ಹಾಕಿದ್ದಾರೆ.

ತಮ್ಮ ಫಾರ್ಮ್‍ಹೌಸ್‍ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ದರ್ಶನ್ “ಇಂದ್ರಜಿತ್ ಅವರು ಗಾಂಡುಗಿರಿ ಅಂತ ನನ್ನ ವಿರುದ್ಧ ಪದ ಬಳಕೆ ಮಾಡಿದ್ದಾರೆ. ನಮ್ಮಪ್ಪ ಗಂಡು ಮಗ ಅಂತ ಹೆತ್ತು ಸಾಕಿದ್ದಾರೆ. ಇಂದ್ರಜಿತ್ ಅವರು ಎಷ್ಟು ಬೇಕಾದರೂ ದಾಖಲೆ ರಿಲೀಸ್ ಮಾಡಲಿ. ನಾನು ಕೇರ್ ಮಾಡಲ್ಲ. ” ಎಂದು ಗುಡುಗಿದರು.

“ನೆನ್ನೆ ಆಡಿಯೋಗಳನ್ನ ಬಿಟ್ರು.. ಇಂದ್ರಜಿತ್ ಅವರು ಅನ್​ ಎಜುಕೇಟೆಡ್ ಅಂತ ಹೇಳಿದ್ರಲ್ಲ.. ನಾನು ಎಸ್​ಎಸ್​ಎಲ್​ಸಿ ಪಾಸ್.. ಅವರು ನಿನ್ನೆ ಗಾಂ*ಗಿರಿ ಅಂದಿದ್ದಾರೆ. ಇಲ್ಲಿ ಯಾರು ಗಾಂ*ಗಿರಿ ಮಾಡ್ತಿದ್ದಾರೆ. ಇಂದ್ರಜಿತ್ ಲಂಕೇಶ್ ಅವರಪ್ಪನಿಗೆ ಹುಟ್ಟಿದವನಾಗಿದ್ರೆ ಅವರು ಗಂಡಸಾಗಿದ್ರೆ ಇವತ್ತು ಸಾಯಂಕಾಲದೊಳಗೆ ನನ್ನ ವಾಯ್ಸ್ ನೋಟ್ ಬಿಡೋಕೆ ಹೇಳಿ. ಇಲ್ಲಿ ಮೂರೂ ಬಿಟ್ಟು ನಿಂತವರೇ ನಾವೆಲ್ಲರೂ ಇರೋದು. ” ಎಂದು ಇಂದ್ರಜಿತ್ ವಿರುದ್ಧ ದರ್ಶನ್ ಹರಿಹಾಯ್ದಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top