fbpx
ಸಮಾಚಾರ

ದಲಿತನಲ್ಲ, ನಾನು ಬ್ರಾಹ್ಮಣ’: ದರ್ಶನ್​ ಹಲ್ಲೆ ಪ್ರಕರಣದ ತನಿಖೆ ವೇಳೆ ಗಂಗಾಧರ್​ ಹೇಳಿಕೆ

ನಟ ದರ್ಶನ್​ ಅವರಿಂದ ಹಲ್ಲೆಗೆ ಒಳಗಾಗಿದ್ದಾರೆ ಎನ್ನಲಾದ ‘ಸಂದೇಶ ದಿ ಪ್ರಿನ್ಸ್’ ಹೋಟೆಲ್​ ಸಿಬ್ಬಂದಿ ಗಂಗಾಧರ್​ ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂದು ಹೇಳಲಾಗಿತ್ತು. ಆದರೆ ಪೊಲೀಸ್ ವಿಚಾರಣೆ ವೇಳೆ ಬೇರೆ ವಿಷಯ ತಿಳಿದುಬಂದಿದೆ.

ನಾನು ದಲಿತ ಸಮುದಾಯಕ್ಕೆ ಸೇರಿದವನಲ್ಲ, ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು ಎಂದು ಸಂದೇಶ್ ಪ್ರಿನ್ಸ್ ಹೋಟೆಲಿನ ಸರ್ವಿಸ್ ಮ್ಯಾನೇಜರ್ ಗಂಗಾಧರ್ ಪೊಲೀಸರ ಮುಂದೆ ಹೇಳಿದ್ದಾರೆ.

”ನಮ್ಮದು ನಾಯರ್ ಕುಟುಂಬ. ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು. ದಲಿತ ಅಲ್ಲ. ಅವತ್ತು ನಮ್ಮ ಸರ್ವೀಸ್‌ನಲ್ಲಿ ಡಿಲೇ ಆಯ್ತು ಎಂದು ದರ್ಶನ್ ಸ್ವಲ್ಪ ರ‍್ಯಾಶ್ ಆಗಿ ಮಾತನಾಡಿದ್ದರು. ಅಷ್ಟು ಬಿಟ್ಟು ಬೇರೇನೂ ಆಗಿಲ್ಲ. ಜಗಳ ಆಗಿಲ್ಲ. ಮಾಮೂಲಿಯಾಗಿ ಮಾತನಾಡುವುದಕ್ಕಿಂತ ಸ್ವಲ್ಪ ರ‍್ಯಾಶ್ ಆಗಿ ಮಾತನಾಡಿದರು ಅಷ್ಟೇ. ಹಲ್ಲೆ ಮಾಡಿಲ್ಲ. ಅವರು ನನ್ನನ್ನ ಮುಟ್ಟೇ ಇಲ್ಲ. ನನ್ನ ಕಣ್ಣಿಗೆ ಏಟಾಗಿಲ್ಲ.”

” ನನಗೆ ಮದುವೆ ಆಗಿಲ್ಲ. ನಾನು ಬಾಚ್ಯುಲರ್. ಅದ್ಯಾರು ಪೊರಕೆ ತಂದಿದ್ದರು ಅನ್ನೋದು ನನಗೆ ಗೊತ್ತಿಲ್ಲ. ರೆಗ್ಯುಲರ್‌ ಆಗಿ ದರ್ಶನ್ ಅವರು ನನಗೆ ಫೋನ್ ಮಾಡಿ ಆರ್ಡರ್ ಮಾಡುತ್ತಾರೆ. ನಮ್ಮ ಸಂಬಂಧ ಚೆನ್ನಾಗಿದೆ” ಎಂದು ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ನ ಸರ್ವೀಸ್ ಮ್ಯಾನೇಜರ್ ಗಂಗಾಧರ್ ಮಾಧ್ಯಮಗಳ ಮುಂದೆ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top