fbpx
ಸಮಾಚಾರ

“ನಿಮ್ಮ ತಂದೆಗೆ ಹುಟ್ಟಿದ್ದರೇ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿ” ದರ್ಶನ್ ಸವಾಲಿಗೆ ಇಂದ್ರಜಿತ್ ಪ್ರತಿ ಸವಾಲು

ಮೈಸೂರಿನ ಸಂದೇಶ್‌ ಹೋಟೆಲ್‌ನಲ್ಲಿ ನಡೆದಿದೆ ಎಂದು ಹೇಳಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೊ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದ ದರ್ಶನ್‌ ಅವರಿಗೆ ಪತ್ರಕರ್ತ, ಚಿತ್ರ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಪ್ರತಿ ಸವಾಲು ಹಾಕಿದ್ದಾರೆ. ಹೌದು, ನಿಮ್ಮಪ್ಪನಿಗೆ ಹುಟ್ಟಿದ್ದರೆ ನನ್ನ ವಿರುದ್ಧದ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ದರ್ಶನ್ ಇಂದ್ರಜಿತ್ ಅವರಿಗೆ ನೇರ ಸವಾಲು ಹಾಕಿದ್ರು. ಇದಕ್ಕೆ ಇಂದ್ರಜಿತ್ ಲಂಕೇಶ್ ಕೂಡ ಪ್ರತಿ ಸವಾಲು ಹಾಕಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಟೆಲಿನಲ್ಲಿ ನೀವು ಬಡವ ಸಪ್ಲೇಯರ್ ಗೆ ಹೊಡೆದ್ರೋ ಇಲ್ಲವೋ..?, ಅಂದು ನೀವು ಯಾರ ಜೊತೆಗಿದ್ರಿ..?, 25 ಕೋಟಿ ಡೀಲ್ ವಿಚಾರ ಸಂಬಂಧ ನೀವು ಅರುಣಾ ದೇವಿಯನ್ನು ಯಾಕೆ ತೋಟಕ್ಕೆ ಕರೆದ್ರಿ..?. ಮೊದಲು ನನ್ನ ಈ ಪ್ರಶ್ನೆಗಳಿಗೆ ಉತ್ತರ ನೀಡಿ. ಅಲ್ಲದೆ ಬಡವನಿಗೆ ಹೊಡೆದಿಲ್ಲ ಅಂದ್ರೆ ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿ ಎಂದು ಚಾಲೆಂಜ್ ಹಾಕಿದ್ರು.

‘ನೀವು ನಿಮ್ಮ ತಂದೆಗೆ ಹುಟ್ಟಿದ್ದರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಿ. ನಿಮ್ಮ ಜೊತೆಗೆ, ಸಂದೇಶ್‌ ನಾಗರಾಜ್‌ ಅವರೂ ಬರಲಿ. ನೀವು ಹೋಟೆಲ್‌ ಕೆಲಸಗಾರನಿಗೆ ಹೊಡೆದಿರೋ ಇಲ್ಲವೋ? ನಿಂದಿಸಿದಿರೋ ಇಲ್ಲವೋ ಎಂಬುದನ್ನು ಆಣೆ ಮಾಡಿ ಹೇಳಿ. ಇಷ್ಟು ಮಾಡಿದರೆ ನೀವು ಗಂಡಸರೋ ಇಲ್ಲವೋ, ನಿಮ್ಮ ತಂದೆಗೆ ಹುಟ್ಟಿದ್ದೀರೋ ಇಲ್ಲವೋ ಎಂಬುದು ಸಾಬೀತಾಗುತ್ತದೆ,‘ ಎಂದು ಇಂದ್ರಜಿತ್‌ ಲಂಕೇಶ್‌ ಅವರು ನಟ ದರ್ಶನ್‌ ಅವರಿಗೆ ಸವಾಲು ಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top