fbpx
ಸಮಾಚಾರ

ಸಪ್ಲೈಯರ್ ಮೇಲೆ ದರ್ಶನ್ ಹಲ್ಲೆ ಆರೋಪ: ಯೂಟರ್ನ್ ಹೊಡೆದ ಇಂದ್ರಜಿತ್ ಲಂಕೇಶ್

ಮೈಸೂರಿನ ಸಂದೇಶ್​ ದಿ ಪ್ರಿನ್ಸ್​ ಹೋಟೆಲ್​ ಸಿಬ್ಬಂದಿ ಗಂಗಾಧರ್​ ಅವರ ಮೇಲೆ ನಟ ದರ್ಶನ್ ಅಂಡ್ ಟೀಂನಿಂದ ಹಲ್ಲೆ ನಡೆದಿದೆ ಎನ್ನುವ ಆರೋಪ ಪ್ರಕರಣ ಗಂಟೆಗೆ ಒಂದೊಂದು ರೀತಿಯ ತಿರುವು ಪಡೆದುಕೊಳ್ಳುತ್ತಿದೆ. ಅಂದು ಹಲ್ಲೆಯೇ ಆಗಿಲ್ಲ ಎಂದು ಗಂಗಾಧರ್​ ಹೇಳಿದ್ದರು. ಈ ಬೆನ್ನಲ್ಲೇ ನಿರ್ದೇಶಕ ಇಂದ್ರಜಿತ್​ ಸುದ್ದಿಗೋಷ್ಠಿ ನಡೆಸಿದ್ದಾರೆ. 

ದರ್ಶನ್ ಅವರು ದಲಿತ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದ ಇಂದ್ರಜಿತ್ ಲಂಕೇಶ್ ಅವರು ಹಿಂದಿನ ಸುದ್ದಿಗೋಷ್ಠಿಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಯೂಟರ್ನ್ ಪಡೆದಿದ್ದಾರೆ

”ಸಪ್ಲೈಯರ್ ತಾವು ದಲಿತ ಸಮುದಾಯಕ್ಕೆ ಸೇರಿದವರಲ್ಲ” ಅಂತ ಹೇಳಿದ್ದಾರೆ ಎಂದು ಮಾಧ್ಯಮದವರು ಕೇಳಿದಾಗ, ”ಎಲ್ಲಾ ಬಡವರು ದಲಿತರು, ಸಮಾಜದಲ್ಲಿ ಶೋಷಿತರು ದಲಿತರು. ಇದು ಜಾತಿ ವಿಷಯ ಅಲ್ಲ” ಅಂತ ಇಂದ್ರಜಿತ್ ಲಂಕೇಶ್ ಹೇಳಿದರು.

”ದರ್ಶನ್ ಹೊಡೆದಿಲ್ಲ” ಅಂತ ಗೋಪಾಲ್ ರಾಜ್, ಗಂಗಾಧರ್ ಹೇಳಿದ್ದಾರೆ. ಇದರ ಬಗ್ಗೆ ಏನಂತೀರಾ ಎಂದು ಮಾಧ್ಯಮದವರು ಪ್ರಶ್ನೆ ಮಾಡಿದಾಗ, ”ಗೋಪಾಲ್ ರಾಜ್ ಇರಬಹುದು, ಗಂಗಾಧರ್ ಇರಬಹುದು.. ಅವರೆಲ್ಲ ಬಡವರು. ಸಮಾಜದ ಮುಂದೆ ಫೇಸ್ ಮಾಡುವ ಧೈರ್ಯ ಅವರಿಗೆ ಇರುವುದಿಲ್ಲ. ಅವರಿಗೆ ಕೆಲಸ ಸಿಗಲ್ಲ, ಕೆಲಸ ಕಳೆದುಕೊಳ್ಳುವ ಭಯ ಇರುತ್ತದೆ. ಸಂಸಾರ, ಜೀವನದ ಬಗ್ಗೆ ಭಯ ಇರುತ್ತದೆ. ಸಮಾಜದ ಹಿತದೃಷ್ಟಿಯಿಂದ ನಾನು ಮಾತನಾಡುತ್ತಿದ್ದೇನೆ” ಎಂದರು ಇಂದ್ರಜಿತ್ ಲಂಕೇಶ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top