fbpx
ಸಮಾಚಾರ

ಜುಲೈ 18: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಜುಲೈ 18, 2021 ಭಾನುವಾರ
ವರ್ಷ : 1943 ಪ್ಲಾವ
ತಿಂಗಳು : ಆಷಾಢ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ನವಮೀ 12:28 am
ನಕ್ಷತ್ರ : ಸ್ವಾತಿ 12:08 am
ಯೋಗ : ಸಾಧ್ಯ 1:56 am
ಕರಣ : ಬಾಲವ 1:36 pm ಕುಲವ 12:28 am

Time to be Avoided
ರಾಹುಕಾಲ : 5:11 pm – 6:46 pm
ಯಮಗಂಡ : 12:25 pm – 2:00 pm
ದುರ್ಮುಹುರ್ತ : 5:04 pm – 5:55 pm
ವಿಷ : 6:48 am – 8:19 am, 12:00 am – 6:49 am
ಗುಳಿಕ : 3:35 pm – 5:11 pm

Good Time to be Used
ಅಮೃತಕಾಲ : 3:51 pm – 5:21 pm
ಅಭಿಜಿತ್ : 12:00 pm – 12:51 pm

Other Data
ಸೂರ್ಯೋದಯ : 6:01 am
ಸುರ್ಯಾಸ್ತಮಯ : 6:49 pm
ರವಿರಾಶಿ : ಕರ್ಕಾಟಕ
ಚಂದ್ರರಾಶಿ : ತುಲ

 

 

 

ಕಬ್ಬು ಸಿಹಿ ಇದೆ ಎಂದು ಸಿಪ್ಪೆಯ ಸಹಿತ ಅಗೆಯಲು ಆಗುವುದಿಲ್ಲ. ಅಂತೆಯೆ ಕೆಲವು ವಿಚಾರಗಳ ಬಗ್ಗೆ ಮೂಲಕ್ಕೆ ಕೈಹಾಕಲು ಮುಂದಾಗದಿರಿ. ಇದರಿಂದ ನೋವಿಗೆ ದಾರಿ ಆಗುವುದು. ಅರಿತು ಆಳಿದರೆ ಆರು ವರ್ಷ ಮರೆತು ಬಾಳಿದರೆ ಮೂರು ವರ್ಷ ಎಂಬುದು ನೆನಪಿರಲಿ

ನಿಮ್ಮ ಕುರಿತಾಗಿ ಇಲ್ಲಸಲ್ಲದ ಹಲವಾರು ಅಪಸ್ವರಗಳು ಬಂದರೂ ಆ ಬಗ್ಗೆ ಕಿವಿಗೊಡದೆ ಮಾನಸಿಕವಾಗಿ ಧೈರ್ಯದಿಂದ ಇರಿ. ಇದರಿಂದ ನಿಮಗೆ ಅನುಕೂಲವಾಗುವುದು. ಮನೆಯ ಸದಸ್ಯರು ನಿಮಗೆ ಸಹಕಾರಿಯಾಗಿ ನಿಲ್ಲುವರು.

 

ಮನೆಯ ಹಿರಿಯರಿಗೆ ದೀರ್ಘಕಾಲದಿಂದ ಕಾಡುತ್ತಿದ್ದ ಅನಾರೋಗ್ಯ ಸುಧಾರಿಸಲಿದೆ. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು. ಸಮಾಜದಲ್ಲಿ ನಿಮ್ಮ ಕೀರ್ತಿ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದೆ.

 

ಸಾಲಗಳು ತಕ್ಕಮಟ್ಟಿಗೆ ತೀರಲಿವೆ. ವ್ಯಾಪಾರ, ವ್ಯವಹಾರದಲ್ಲಿ ಸ್ನೇಹಿತರಿಂದ ಬೆಂಬಲ ಮತ್ತು ಸಹಕಾರ ದೊರೆಯುವುದು. ಪ್ರೇಮಿಗಳಲ್ಲಿ ಅನಿರೀಕ್ಷಿತ ಭಿನ್ನಾಭಿಪ್ರಾಯ ಕಂಡು ಬರುವುದು. ಅಜೀರ್ಣ ಸಂಬಂಧಿ ವ್ಯಾಧಿಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಮಾಡಿಸಿ.

 

 

ಬಹುದಿನದ ಆಸೆ ಈಡೇರಿದ ಸಂತೃಪ್ತಿ ನಿಮ್ಮದಾಗುವುದು. ಖಾಸಗಿ ನೌಕರರಿಗೆ ಉದ್ಯೋಗದಲ್ಲಿನ ಏಕತಾನತೆಯಿಂದ ಬೇಸರ ಮೂಡುವುದು. ಮುಂದಿನ ದಿನಗಳಲ್ಲಿ ಈ ಕೆಲಸ ಬಿಟ್ಟು ಬಿಡಲೇ ಎಂದು ಚಿಂತಿಸುವರು. ಯಾವುದಕ್ಕೂ ಹಿರಿಯರ ಸಲಹೆ ಅನುಸರಿಸಿ

 

 

ಸಮಾಧಾನದಿಂದ ಇದ್ದರೆ ಮಾತ್ರ ನೆರೆಹೊರೆಯವರೊಡನೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳುವಿರಿ. ಮಹತ್ವದ ತೀರ್ಮಾನ ಕೈಗೊಳ್ಳಬೇಡಿ. ನವ ದಂಪತಿಗೆ ಸಂತತಿ ವಿಚಾರವಾಗಿ ವಾದ, ವಿವಾದ ಉಂಟಾಗುವ ಸಾಧ್ಯತೆ ಇದೆ.

 

 

ಅವಸರದ ನಿರ್ಧಾರಗಳಿಂದ ನಷ್ಟ ಅನುಭವಿಸಬೇಕಾಗುವುದು. ಮನೆ ಮಂದಿಯ ಸಹಕಾರ ಪಡೆಯಿರಿ. ಅವರು ನಿಮ್ಮ ಆಶೋತ್ತರಗಳನ್ನು ಈಡೇರಿಸಲು ಸಹಕಾರ ನೀಡುವರು. ಬಂಧುಗಳ ಅನಿರೀಕ್ಷಿತ ಆಗಮನದಿಂದ ಮನೆಯಲ್ಲಿ ಸಂತಸ ನೆಲೆಸುವುದು.

 

 

ನಿಮಗೆ ನೀವೇ ಗುರುವಾಗಿ ನಿಮ್ಮ ಇತಿಮಿತಿಯ ಬಗ್ಗೆ ತಿಳಿಯಿರಿ. ಇದರಿಂದ ಸಮಾಜದಲ್ಲಿ ನಿಮಗೆ ಗೌರವ ದೊರೆಯುವುದು. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿರುವುದಿಲ್ಲ. ಹಾಗಾಗಿ ಹಣ ಖರ್ಚಿನ ಬಗ್ಗೆ ಹಿಡಿತವಿರಲಿ.

 

ನಿಮ್ಮ ಸಮಸ್ಯೆಗಳು ಸಾಕಷ್ಟು ಇರುವಾಗ ಪರರ ಸಂಕಷ್ಟಗಳಿಗೆ ಮರುಗಿ ಸಹಾಯ ಮಾಡಲು ಹೋಗಿ ನೀವೇ ಸಿಕ್ಕಿಹಾಕಿಕೊಳ್ಳುವಿರಿ. ಈ ಬಗ್ಗೆ ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ.

 

ಹೊಸ ಜನರ ಪರಿಚಯದೊಂದಿಗೆ ಹೊಸದಾದ ಜವಾಬ್ದಾರಿ ನಿಮ್ಮ ಹೆಗಲೇರುವ ಸಾಧ್ಯತೆ ಇದೆ. ರಾಜಕೀಯ ಇಲ್ಲವೆ ಸಮಾಜದಲ್ಲಿನ ಪ್ರಭಾವಿ ವ್ಯಕ್ತಿಗಳ ಸಂಪರ್ಕ ದೊರೆತು ಅದರಿಂದ ನಿಮ್ಮ ವ್ಯಾಪಾರ, ವ್ಯವಹಾರಗಳಿಗೆ ಹೆಚ್ಚಿನ ಅನುಕೂಲವಾಗುವುದು.

 

ನಿಮ್ಮ ಮನಸ್ಸಿಗೆ ಸಂತೋಷ ಎನಿಸುವ ಕಾರ್ಯವು ಪೂರ್ಣಗೊಳ್ಳುವುದು. ಮಕ್ಕಳ ವಿದ್ಯಾಕಲಿಕೆಯಲ್ಲಿ ಪ್ರಗತಿ ತೋರಿ ನಿಮಗೆ ಹರ್ಷವನ್ನುಂಟು ಮಾಡುವರು. ನಿಮಗಾಗಿ ಹಿರಿಯರ ಆಶೀರ್ವಾದವು ಬೇಗನೆ ದೊರೆಯುವುದು

 

ನಿಮ್ಮಲ್ಲಿನ ಆತ್ಮವಿಶ್ವಾಸ ಮತ್ತು ನಿಮ್ಮ ಬಗೆಗಿನ ನಂಬಿಕೆ ಸ್ಥೈರ್ಯ ಧೈರ್ಯಗಳು ನಿಮಗೆ ಅನುಕೂಲವಾಗುವುದು. ನೀವು ನಡೆಯುವ ದಾರಿಯಲ್ಲಿ ಯಾವುದೇ ಅಡೆತಡೆಗಳು ಕಂಡುಬರುವುದಿಲ್ಲ. ನಿಮ್ಮೊಂದಿಗೆ ನಿಮ್ಮ ಸಹಾಯಕ್ಕೆ ಸ್ನೇಹಿತರು ಹೆಜ್ಜೆ ಹಾಕುವರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top