fbpx
ಸಮಾಚಾರ

“ಚಿತ್ರರಂಗದಲ್ಲಿ ಯಾರೂ ದೊಡ್ಡವರು ಚಿಕ್ಕವರಿಲ್ಲ” ದರ್ಶನ್ ವಿರುದ್ಧ ರಕ್ಷಿತಾ ಗರಂ

ನಟ ದರ್ಶನ್ ಮೈಸೂರಿನಲ್ಲಿ ಸಡೆಸಿದ ಸುದ್ದಿಗೋಷ್ಠಿಯಲ್ಲಿ ಉಮಾಪತಿ ಶ್ರೀನಿವಾಸ್ ಅವರನ್ನು ಜೋಗಿ ಪ್ರೇಮ್ ಪರಿಚಯ ಮಾಡಿಸಿದ್ದರು. ಸಿನಿಮಾ ಡೇಟ್ ವಿಚಾರಕ್ಕೆ ಪ್ರೇಮ್ ಏನ್ ಪುಡಂಗಾ? ಪ್ರೇಮ್‌ಗೆ ಎರಡು ಕೊಂಬು ಇದೆಯಾ? ‘ಕರಿಯ’ ಸಿನಿಮಾ ಟೈಮ್‌ನಲ್ಲಿ ಪ್ರೇಮ್ ಏನು ಅಂತ ನೋಡಿದ್ದೇವೆ ಎಂದು ದರ್ಶನ್ ಹೇಳಿದ್ದರು.

ನಟ ದರ್ಶನ್ ರ ಈ ಮಾತು ಕೇಳಿ ಮನನೊಂದ ಪ್ರೇಮ್ ಪತ್ನಿ ರಕ್ಷಿತಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡುವ ಮೂಲಕ ಪರೋಕ್ಷವಾಗಿ ದರ್ಶನ್ ವಿರುದ್ಧ ಅಸಮಾಧಾನಗೊಂಡಿದ್ದಾರೆ.

 

 

ರಕ್ಷಿತ್ ಪೋಸ್ಟ್ ನಲ್ಲಿ ಇರುವುದೇನು?
“ಯಾರಾದ್ರೂ ಒಬ್ಬರು ಇನ್ನೊಬ್ಬರ ನಡೆಯ ಬಗ್ಗೆ ಮಾತನಾಡುವಾಗ ತಾವು ತಮ್ಮ ಸ್ವಂತ ಬದುಕಿನಲ್ಲಿ ಏನು ಮಾಡ್ತಿದ್ದಾರೆ ಅನ್ನೋದನ್ನ ನೋಡಿಕೊಳ್ಳಬೇಕು.. ಜನರ ಎದುರಿಗೆ ಏನು ಮಾತಾಡುತ್ತಿದ್ದೇವೆ.. ಯಾವಾಗ ಮಾತಾಡುತ್ತಿದ್ದೇವೆ ಎಂಬುದು ಗೊತ್ತಿರುವುದು ಮುಖ್ಯವಾಗುತ್ತದೆ ಎಂದು ರಕ್ಷಿತಾ ಪ್ರೇಮ್ ಅಸಮಾಧಾನ ಹೊರಹಾಕಿದ್ದಾರೆ. “

 

 

ಕನ್ನಡ ಚಿತ್ರರಂಗ ನಮ್ಮದು, ನಮ್ಮ ಮನೆ ಇದ್ದಂತೆ. ಇಲ್ಲಿ ಯಾರೂ ದೊಡ್ಡವರು ಚಿಕ್ಕವರಿಲ್ಲ. ಎಲ್ಲರೂ ಸಮಾನರು. ಆದರೆ ಅವರವರ ಕೆಲಸವೇ ಅವರು ಏನೆಂಬುದನ್ನು ಗುರುತಿಸುತ್ತದೆ. ಇಲ್ಲಿ ನಾವು ಎಲ್ಲರನ್ನೂ ಪ್ರೀತಿಸುತ್ತೇವೆ. ಹಾಗೆಯೇ ಎಲ್ಲರಿಗೂ ಗೌರ ಕೊಡುತ್ತೇವೆ. ಆದರೆ ಇಂತಹ ಘಟನೆಗಳು ನಡೆದಾಗ ಬೇಸರವಾಗುತ್ತದೆ. ಇಲ್ಲಿ ದುರದೃಷ್ಟಕರ ಕೆಲವೊಂದು ವಿಚಾರಗಳು ತೆರೆದುಕೊಳ್ಳುತ್ತಿರುವುದು ಮನಸ್ಸಿಗೆ ಬೇಸರವನ್ನು ಉಂಟುಮಾಡುತ್ತಿದೆ ಅಂತ ರಕ್ಷಿತಾ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top