fbpx
ಸಮಾಚಾರ

ದರ್ಶನ್ ಹಲ್ಲೆ ನಡೆದಿದ್ದು ನಿಜವೆಂದ ಹೊಟೇಲ್ ಸೆಕ್ಯುರಿಟಿ ಗಾರ್ಡ್: ಸ್ಫೋಟಕ ವಿಚಾರ!

ಸಂದೇಶ್​ ಪ್ರಿನ್ಸ್​ ಹೋಟೆಲ್​ನಲ್ಲಿ ಸಪ್ಲೈಯರ್​ ಮೇಲೆ ನಟ ದರ್ಶನ್​ ಹಲ್ಲೆ ಮಾಡಿದ್ದಾರೆನ್ನಲಾದ ಪ್ರಕರಣವು ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಜೂನ್​ 24ರಂದು ಹೋಟೆಲ್​ನಲ್ಲಿ ನಡೆದ ಘಟನೆಯನ್ನು ಸೆಕ್ಯುರಿಟಿ ಗಾರ್ಡ್​ ಬಿಚ್ಚಿಟ್ಟಿದ್ದಾರೆ.

 

 

ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್​ನಲ್ಲಿ ದರ್ಶನ್ ಗಲಾಟೆ ನಡೆಸಿದ್ದಾರೆ. ಅಲ್ಲಿನ ಸೆಕ್ಯುರಿಟಿ ಗಾರ್ಡ್​ಗೆ ಅವಾಚ್ಯವಾಗಿ ಬೈದಿದ್ದಾರೆ. ಜೊತೆಗೆ 50 ಸಾವಿರ ರೂ.ಗಳನ್ನು ಎಸೆದು ನಾನಿನ್ನು ಈ ಹೊಟೆಲ್​ಗೆ ಕಾಲಿಡುವುದಿಲ್ಲ ಎಂದು ಹೇಳಿದ್ದರು ಎಂದು ಸೆಕ್ಯುರಿಟಿ ಗಾರ್ಡ್​ ಒಬ್ಬರು ತಿಳಿಸಿದ್ದಾರೆ. ದುಡ್ಡನ್ನು ಆಯ್ದುಕೊಳ್ಳಲು ಹೋದ ಹೌಸ್ ಕೀಪರ್​ಗೂ ಅವಾಚ್ಯವಾಗಿ ಬೈದಿದ್ದಾರೆ. ಈ ಘಟನೆಯಿಂದ ಹೊಟಲ್​ನ ಸಿಬ್ಬಂದಿಗಳೆಲ್ಲಾ ಕೆಲಸ ಬಿಡುವ ಯೋಚನೆಯಲ್ಲಿದ್ದರು. ಆಗ ಸಂಸ್ಥೆಯ ಎಂಡಿ ಸಮಾಧಾನಪಡಿಸಿದ್ದರಿಂದ ಸಿಬ್ಬಂದಿ ಹೊಟೆಲ್​ನಲ್ಲಿ ಮುಂದುವರೆದಿದ್ದರು ಎಂದು ಸೆಕ್ಯುರಿಟಿ ಗಾರ್ಡ್ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಹೊಡೆದಿದ್ದು ಮಾತ್ರವಲ್ಲದೆ, ಕೆಟ್ಟದಾಗಿ ನಿಂದಿಸಿದರು. ಸೆಕ್ಯುರಿಟಿಗಳಿಗೂ ಬೈದರು. ಅಲ್ಲದೆ, ತನ್ನ ಬಳಿಯಿದ್ದ ಹಣವನ್ನು ಎರಚಿ ಹೋಟೆಲ್​ ಮಾಲೀಕರ ವಿರುದ್ಧವೂ ಕೂಗಾಡಿದರು ಎಂದು ಸೆಕ್ಯೂರಿಟಿ ಗಾರ್ಡ್​ ಹೇಳಿರುವುದು ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಅಂದು ರಾತ್ರಿ ದರ್ಶನ್​ ಅವರ ವರ್ತನೆ ಹೇಗಿತ್ತು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಘಟನೆ ನಡೆದ ದಿನದಂದು ಇವರೆಲ್ಲರೂ ಪ್ರತ್ಯಕ್ಷದರ್ಶಿಗಳಾಗಿದ್ದರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top