fbpx
ಸಮಾಚಾರ

ಬಿಗ್ ಬಾಸ್ ಮನೆಯಿಂದ ಬಲಿಷ್ಠ ಸ್ಪರ್ಧಿ ಎಲಿಮಿನೇಟ್

ಬಿಗ್ ಬಾಸ್ ಕನ್ನಡ ಸೀಸನ್ 8ರ ಸೆಕೆಂಡ್ ಇನಿಂಗ್ಸ್‌ನಲ್ಲಿ ಮೂರನೇ ಸ್ಪರ್ಧಿ ಮನೆಯಿಂದ ಹೊರಬಂದಿದ್ದಾರೆ. ಸೆಕೆಂಡ್ ಇನಿಂಗ್ಸ್‌ ಶುರುವಾದಾಗ 12 ಸ್ಪರ್ಧಿಗಳು ಮನೆಯೊಳಗೆ ಹೋಗಿದ್ದರು. ನಿಧಿ ಸುಬ್ಬಯ್ಯ ಮತ್ತು ರಘು ಗೌಡ ಈಗಾಗಲೇ ಮನೆಯಿಂದ ಹೊರಬಿದ್ದಿದ್ದಾರೆ. ಈ ವಾರ ವೈಷ್ಣವಿ ಗೌಡ, ಪ್ರಶಾಂತ್ ಸಂಬರಗಿ, ಶುಭಾ ಪೂಂಜಾ, ಪ್ರಿಯಾಂಕಾ ತಿಮ್ಮೇಶ್ ನಾಮಿನೇಟ್ ಆಗಿದ್ದರು. ಅದರಲ್ಲಿ ಪ್ರಿಯಾಂಕಾ ಮನೆಯಿಂದ ಔಟ್ ಆಗಿದ್ದಾರೆ.

ಈ ವಾರ ಬಿಗ್​ ಬಾಸ್​ ನಾಮಿನೇಷನ್​ಗೆ ಬೇರೆ ರೀತಿಯ ಮಾರ್ಗ ಅನುಸರಿಸಲಾಗಿತ್ತು. ಪ್ರತಿವಾರ ಸ್ಪರ್ಧಿಗಳಿಗೆ ನಾಮಿನೇಷನ್​ ಮಾಡುವ ಆಯ್ಕೆಯನ್ನು ನೀಡಲಾಗುತ್ತದೆ. ಯಾರಿಗೆ ಯಾವ ಸ್ಪರ್ಧಿ ಇಷ್ಟವಿಲ್ಲವೋ ಅವರನ್ನು ನಾಮಿನೇಟ್​ ಮಾಡುತ್ತಾರೆ. ಈ ಬಾರಿ ಬಿಗ್​ ಬಾಸ್​ ಮನೆಯಲ್ಲಿ ಆ ರೀತಿ ಇರಲಿಲ್ಲ. ಮನೆಯಲ್ಲಿ ಎರಡು ಟೀಂ ಮಾಡಿ 10 ಟಾಸ್ಕ್​ಗಳನ್ನು ನೀಡಲಾಗಿತ್ತು. 4 ದಿನಗಳ ಕಾಲ ನಡೆದ ಟಾಸ್ಕ್​ನಲ್ಲಿ ಸೋತ ತಂಡದ ಸದಸ್ಯರು ನಾಮಿನೇಟ್​ ಆಗಿದ್ದರು. ಈ ಬಾರಿ ಸೋತ ತಂಡದಲ್ಲಿದ್ದ ಪ್ರಶಾಂತ್ ಸಂಬರಗಿ​, ಪ್ರಿಯಾಂಕಾ ತಿಮ್ಮೇಶ್​, ವೈಷ್ಣವಿ ಗೌಡ, ಶುಭಾ ಪೂಂಜಾ ನಾಮಿನೇಷನ್​ ಪಟ್ಟಿಯಲ್ಲಿದ್ದರು. ಕಡಿಮೆ ವೋಟ್ ಪಡೆದು ಪ್ರಿಯಾಂಕಾ ಔಟ್ ಆಗಿದ್ದಾರೆ.

ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದ ಪ್ರಿಯಾಂಕಾ ತಿಮ್ಮೇಶ್ ಅವರು ಕನ್ನಡ, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ದೊಡ್ಮನೆಯಲ್ಲಿ ಎಲ್ಲರೊಂದಿಗೂ ಬೆರೆತು, ತುಂಬಾ ಸೈಲೆಂಟಾಗಿದ್ದ ಪ್ರಿಯಾಂಕಾ, ಯಾರು ಏನೇ ಹೇಳಿದರೂ ತಾಳ್ಮೆ ಕಳೆದುಕೊಳ್ಳದೆ, ಎಲ್ಲವನ್ನೂ ನಿಭಾಯಿಸುತ್ತಿದ್ದರು. ಟಾಸ್ಕ್ ವೇಳೆ ಸಹ ತಮ್ಮದೇ ಛಾಪು ಮೂಡಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top