fbpx
ಸಮಾಚಾರ

ಪ್ರಿಯಾಂಕಾಗೆ ಮದ್ಯದ ಬೆರಳು ತೋರಿಸಿದ ಚಕ್ರವರ್ತಿ ಚಂದ್ರಚೂಡ್

ಬಿಗ್ ಬಾಸ್ ಕನ್ನಡ ಸೀಸನ್ 8ರ ಸೆಕೆಂಡ್ ಇನಿಂಗ್ಸ್‌ನಲ್ಲಿ ಮೂರನೇ ಸ್ಪರ್ಧಿ ಮನೆಯಿಂದ ಹೊರಬಂದಿದ್ದಾರೆ. ಸೆಕೆಂಡ್ ಇನಿಂಗ್ಸ್‌ ಶುರುವಾದಾಗ 12 ಸ್ಪರ್ಧಿಗಳು ಮನೆಯೊಳಗೆ ಹೋಗಿದ್ದರು. ನಿಧಿ ಸುಬ್ಬಯ್ಯ ಮತ್ತು ರಘು ಗೌಡ ಈಗಾಗಲೇ ಮನೆಯಿಂದ ಹೊರಬಿದ್ದಿದ್ದರು. ಈ ವಾರ ಪ್ರಿಯಾಂಕಾ ಮನೆಯಿಂದ ಔಟ್ ಆಗಿದ್ದಾರೆ.

ಪ್ರಿಯಾಂಕಾ ಮನೆಯಿಂದ ಹೊರಹೋಗುವಾಗ ಪ್ರಿಯಾಂಕಾಗೆ ವಿಶೇಷ ಅಧಿಕಾರವೊಂದನ್ನ ನೀಡಿದ್ದರು. ನೇರವಾಗಿ ಮುಂದಿನ ವಾರಕ್ಕೆ ಒಬ್ಬರನ್ನು ನಾಮಿನೇಟ್ ಮಾಡುವ ಅಧಿಕಾರವನ್ನು ಬಿಗ್‌ ಬಾಸ್ ಪ್ರಿಯಾಂಕಾಗೆ ನೀಡಿದರು. ಆಗ ತಕ್ಷಣವೇ ಚಕ್ರವರ್ತಿ ಚಂದ್ರಚೂಡ್ ಹೆಸರನ್ನು ಹೇಳಿದರು ಪ್ರಿಯಾಂಕಾ. ಆ ಮೂಲಕ ಚಕ್ರವರ್ತಿಗೆ ಶಾಕ್ ನೀಡಿದರು.

ಮನೆಯ ಬಾಕಿಯವರೆಲ್ಲರೂ ಪ್ರಿಯಾಂಕಾ ಅವರನ್ನು ಕಳಿಸಿಕೊಡಲು ಬಂದಿದ್ದರೆ ಚಕ್ರವರ್ತಿ ಸೋಫಾದ ಮೇಲೆಯೇ ಕುಳಿತಿದ್ದರು. ಪ್ರಿಯಾಂಕಾ ನಾಮಿನೇಟ್ ಮಾಡಿದಾಗ ಮಿಡಲ್ ಫಿಂಗರ್ ತೋರಿಸಿದ್ದು ಚರ್ಚೆಗೆ ಕಾರಣವಾಯಿತು. ಈ ವೇಳೇ ಅಲ್ಲಿಗೆ ಹೋದ ಪ್ರಶಾಂತ್ ಇದು ಪಬ್ಲಿಕ್ ಡೋಮೇನ್ ಇಂಥ ಸನ್ನೆ ಮಾಡುವುದು ಸರಿ ಅಲ್ಲ ಎಂದು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top