fbpx
ಸಮಾಚಾರ

ದರ್ಶನ್ ಗಲಾಟೆ: ನೋವಿನ ಪತ್ರ ಬರೆದ ಜಗ್ಗೇಶ್

ಕಳೆದ ಕೆಲವು ದಿನಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಚ್ಚು ಸುದ್ದಿಯಲ್ಲಿದ್ದಾರೆ. ಅತ್ತ 25 ಕೋಟಿ ರೂಪಾಯಿ ಫೇಕ್ ಲೋನ್ ಪ್ರಕರಣದಲ್ಲಿ ದರ್ಶನ್ ಹಾಗೂ ಉಮಾಪತಿ ಮಧ್ಯೆ ಜಟಾಪಟಿ ನಡೆಯುತ್ತಿದ್ದರೆ, ಇತ್ತ ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ನಲ್ಲಿ ಸಪ್ಲೈಯರ್ ಮೇಲೆ ಹಲ್ಲೆ ಆರೋಪದ ಕುರಿತಾಗಿ ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್ ನಡುವೆ ವಿವಾದ ಭುಗಿಲೆದ್ದಿದೆ.

ನಿನ್ನೆಯಂತೂ ಮಾಧ್ಯಮಗಳ ಮುಂದೆ ನಟ ದರ್ಶನ್ ಗರಂ ಆಗಿ ಮಾತನಾಡಿದ್ದರು. ಹೀಗಿರುವಾಗಲೇ, ನಟ ಜಗ್ಗೇಶ್ ತಮ್ಮ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಆ ಪೋಸ್ಟ್‌ನಲ್ಲಿ ಜಗ್ಗೇಶ್, ದರ್ಶನ್ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ, ”ಉದ್ಯಮದ ಹಿರಿಯರು, ವಾಣಿಜ್ಯ ಮಂಡಳಿ ಮಧ್ಯ ಪ್ರವೇಶಿಸಿ ಒಡೆದ ಮನಗಳ ಸರಿಮಾಡಿ” ಎಂದು ಸಾಮಾಜಿಕ ಜಾಲತಾಣದ ಮುಖಾಂತರ ಜಗ್ಗೇಶ್ ಪ್ರಾರ್ಥನೆ ಮಾಡಿದ್ದಾರೆ.

ಜಗ್ಗೇಶ್ ಅವರ ಫೇಸ್‍ಬುಕ್ ಬರಹ ಹೀಗಿದೆ-

ತುಮಕೂರು ಜಿಲ್ಲೆಯ, ತುರುವೇಕೆರೆ ತಾಲ್ಲೂಕಿನ, ಮಾಯಸಂದ್ರ ಹೋಬಳಿಯ,ಆನಡುಗು ಎಂಬ ಸಣ್ಣ ಗ್ರಾಮದ, ಸಣ್ಣ ಕುಟುಂಬದ, ಹಳ್ಳಿಹುಡುಗ ನಾನು ಈಶ್ವರ್ ಗೌಡ @ಜಗ್ಗೇಶ..!
ನನಗೆ ಇದ್ದ ಆಸೆ ರಾಜಕುಮಾರ್ ಕಂಡು ಮಾತಾಡಿಸಿ ಆಶೀರ್ವಾದ ಪಡೆದು ಸಿನಿಮ ನಟನಾಗ ಬೇಕು ಎಂಬುದು ಒಂದೆ ಗುರಿ!1980ಕ್ಕೆ ಆ ಕಾರ್ಯ ಶುರು,ಆಗ ಹೇಗಿದ್ದೆ ನಾನು ದಾಖಲಿಸಿರುವೆ ಚಿತ್ರಗಳಲ್ಲಿ ಮತ್ತೊಮ್ಮೆ ಮುಖ ನೋಡಿ ನಕ್ಕುಬಿಡಿ!ಆ ಮುಖಕ್ಕೆ ಆಕಾಲಕ್ಕೆ ಸಿನಿಮನಟ ಆಗುವ ಕನಸ್ಸು?ಈಗಿನ ಜಗ್ಗೇಶನ ಮರೆತು ಯೋಚಿಸಿ ಇದು ಸಾಧ್ಯವಾ?

ಆಗ ಅಪ್ಪಅಮ್ಮ ಬಂಧು ಮಿತ್ರರು ಹೇಳಿದ್ದು, ಉಗಿದದ್ದು ಹೀಗೆ ಮುಚ್ಕೊಂಡು ಅನ್ನ ಹುಡ್ಕೋ ಕ್ಯಾಮೆ ನೋಡು!ಶಿವಲಿಂಗಪ್ಪನ ಮರ್ಯಾದೆ ಉಳಿಸು ಮಂಗಮುಂಡೆದೆ ಎಂದು!
ಗುರುಹಿಂದೆ ಗುರಿಮಂದೆ ಹಠ ಬಿಡಲಿಲ್ಲಾ ಗಾಂಧಿನಗರ ಅಲೆದು ಚಪ್ಪಲಿಸವೆಸಿ ದಡಮುಟ್ಟಿದೆ ಎಂದುಬಿಟ್ಟರೆ ಆತ್ಮ ಧ್ರೋಹ ಆಗಿಬಿಡುತ್ತದೆ ಕಾರಣ ದಡಮುಟ್ಟಿಸಿದ್ದು ಅಂದಿನ ನಿರ್ದೇಶಕರು ನಿರ್ಮಾಪಕರು ಮಾಧ್ಯಮಮಿತ್ರರು ಹಾಗು ವಿಶೇಷವಾಗಿ ಸ್ವಾಭಿಮಾನಿ ಕನ್ನಡಿಗರು!ಹೇಳಿ ಹೇಗಿದ್ದರಬೇಕು ಅಪಮಾನ ಅವಮಾನ ಹಸಿವಿನಿಂದ ನಿದ್ರೆಗೆಟ್ಟು ಗೆದ್ದ ಒಬ್ಬ ಸಾಮಾನ್ಯನ ಬದುಕು!ಆಗ ನಮ್ಮ ಬಗ್ಗೆ ಹೇಳಲು ಇದ್ದದ್ದು ಒಂದೆ ಬರಹಮಾಧ್ಯಮ ಮಾತ್ರ! ನೆನಪಿಡಿ ಇಂದು ನೂರಾರು ಮಾಧ್ಯಮ, ಅಂಗೈಯಲ್ಲೆ ಆಕಾಶ ತೋರಿ ಹತ್ತಾರುವರ್ಷ ಸಾಧನೆ ಕ್ಷಣಮಾತ್ರದಲ್ಲೆ ಅನುಮಾನದಿಂದ ಸಾಧಕನ ನೋಡುವಂತ ಮಾಯಾಜಾಲ #ಸಾಮಾಜಿಕ ಜಾಲತಾಣ,
ಸಿಕ್ಕಸಿಕ್ಕವರ ಕೈಲಿ ಈ ಜಾಲಸಿಕ್ಕು ವಯಸ್ಸು ಸಾಧನೆ ಅವರ ಮೂಗಿನ ನೇರಕ್ಕೆ ಅವರು ಬದುಕಿದ ಪರಿಸರ ಭಾಷೆಬಳಸಿ ಅವಮಾನ ಮಾಡಿ ವಿಕೃತ ಆನಂದ ಅನುಭವಿಸುವುದು😭 ವಿಪರ್ಯಾಸ ದಿನಗಳು!ಇಂದಿನ ಸಾರ್ವಜನಿಕ ಜೀವನ public toilet ನಂತೆ ಆಗಿಬಿಟ್ಟಿದೆ!ಆದರು ವಿಧಿಯಿಲ್ಲಾ ಚರ್ಮ ದಪ್ಪಮಾಡಿ ಬದುಕಬೇಕು!

ಈಗ ವಿಷಯಕ್ಕೆ ಬರುವೆ ಈ ಅಕ್ಷರ ಠಂಕಿಸಿದ್ದಕ್ಕೆ ಉಧ್ಯಮದ ಕಲಾಬಂಧುಗಳಿಗೆ ನನ್ನ ಸಣ್ಣ ಅನುಭವದ ನುಡಿ!
ಮಾನ್ಯರೆ ನಶ್ವರ ಬಣ್ಣದ ಬದುಕು!ಕಲಾವಿಧನ ಜೀವನ ನಡೆಯುವವರೆಗೆ ನಾಣ್ಯ ಮಿಕ್ಕಂತೆ ಸವಕಲು! ಎಲ್ಲಿಯವರೆಗು ಕಲಾವಿದ ವರ್ಷಕ್ಕೆ ಮಾತ್ರ ಹೊರಬರುವ ಊರ ಮೆರೆದೇವರಂತೆ ಹೊರ ಬರಬೇಕು,ಆಗ ದೇವರಪರ ಅದ್ಭುತ ಅನನ್ಯ!ದಿನ ಆ ದೇವರು ಬೀದಿಗೆ ಬಂದರೆ ಮೌಲ್ಯ ಇರುವುದಿಲ್ಲಾ!ರಾಜನಾಗಲಿ ಸೇವಕನಾಗಲಿ ಜಗಳ ಗರ್ಷಣೆ ಸಹಜ!ಆ ಗರ್ಷಣೆ ನಿಭಾಯಿಸುವ ಕಲೆ ಕರಗತ ಆಗಿರಬೇಕು ಆಗ ಕಾಡ್ಗಿಚ್ಚನ್ನು ತಣ್ಣಗೆ ಮಾಡಬಹುದು!ಹಾಗೆ ಅನ್ಯತ ಭಾವಿಸದೆ ನನ್ನ ಮಾತು ಆಲಿಸಬೇಕು ಕಲಾಬಂಧುಗಳು!ಆತ್ಮೀಯ ಮಾಧ್ಯಮಮಿತ್ರರು ಕಲಾರಂಗದ ನಮ್ಮಕಾಯಕ ಜನರಿಗೆ ತಲುಪಿಸೋ ನಾವಿಕರು, ನಾವು ನೀವು ದೇಹದ ಎರಡುಕಣ್ಣಂತೆ ಯಾವುದಕ್ಕು ನೋವಾದರು ನಮಗೆ ನಷ್ಟ!ದಯಮಾಡಿ ವಿಶೇಷ ಹೃದಯ ನಿಮ್ಮದಾಗಿ ನಮ್ಮ ಚಿತ್ರರಂಗ ಬೀದಿಚರ್ಚೆಗೆ ವಿಷಯವಾಗದಿರಲಿ ವಿನಂತಿ!ಈಗಾಗಲೆ ಚಿತ್ರರಂಗ ಕರೋನ ಹೆಮ್ಮಾರಿ ಹೊಡೆತಕ್ಕೆ ನಲುಗಿದೆ!ಉಧ್ಯಮದ ಹಿರಿಯರು ವಾಣಿಜ್ಯಮಂಡಲಿ ಮಧ್ಯಪ್ರವೇಶಿಸಿ ಒಡೆದಮನಗಳ ಸರಿಮಾಡಿ ಎಂದು ಪ್ರಾರ್ಥನೆ🙏ಸರ್ವೆಜನಃಸುಖಿನೋಭವ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top