fbpx
ಸಮಾಚಾರ

ಜುಲೈ 19: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಜುಲೈ 19, 2021 ಸೋಮವಾರ
ವರ್ಷ : 1943 ಪ್ಲಾವ
ತಿಂಗಳು : ಆಷಾಢ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ದಶಮೀ 9:59 pm
ನಕ್ಷತ್ರ : ವಿಶಾಖ 10:27 pm
ಯೋಗ : ಶುಭ 10:51 pm
ಕರಣ : ತೈತುಲ 11:15 am ಗರಿಜ 9:59 pm

Time to be Avoided
ರಾಹುಕಾಲ : 7:40 am – 9:15 am
ಯಮಗಂಡ : 10:50 am – 12:25 pm
ದುರ್ಮುಹುರ್ತ : 12:51 pm – 1:41 pm, 3:23 pm – 4:13 pm
ವಿಷ : 2:08 am – 3:36 am
ಗುಳಿಕ : 2:00 pm – 3:35 pm

Good Time to be Used
ಅಮೃತಕಾಲ : 2:16 pm – 3:45 pm
ಅಭಿಜಿತ್ : 12:00 pm – 12:51 pm

Other Data
ಸೂರ್ಯೋದಯ : 6:02 am
ಸುರ್ಯಾಸ್ತಮಯ : 6:49 pm
ರವಿರಾಶಿ : ಕರ್ಕಾಟಕ
ಚಂದ್ರರಾಶಿ : ತುಲ upto 16:53

 

 

 

ಜನರ ನಡುವೆ ನಿಂತು ನಾಯಕತ್ವ ಪ್ರದರ್ಶಿಸುವ ಸಂದರ್ಭ ಬಂದರೆ ಅಂಥ ಸವಾಲು ಸ್ವೀಕರಿಸಿ ಒಳಿತಾಗುವುದು. ಕುಟುಂಬದ ಸದಸ್ಯರೊಡನೆ ಸೌಹಾರ್ದಯುತವಾಗಿ ವರ್ತಿಸಿ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ.

ವೃರ್ಥ ಕಾಲಹರಣ ಬೇಡ. ನಿಶ್ಚಿತವಾದ ಗುರಿ ಹಾಗೂ ಧೈರ್ಯ ನಿಮಗೆ ರಕ್ಷ ಣೆ ನೀಡುವುದು. ವಾಹನ ಖರೀದಿ ಯೋಗ ವಿರುತ್ತದೆ. ಸಂಸಾರದಲ್ಲಿ ಸ್ವಲ್ಪ ವಿರಸ ಮೂಡುವ ಸಾಧ್ಯತೆ ಇರುವುದು. ಮನೋನಿಯಾಮಕ ರುದ್ರದೇವರನ್ನು ಭಜಿಸಿ.

 

ಇದ್ದಕ್ಕಿದ್ದಂತೆ ಆಪ್ತ ವಲಯವೇ ನಿಮ್ಮ ವಿರುದ್ಧ ತಿರುಗಿ ಬೀಳವ ಸಾಧ್ಯತೆ ಇದೆ. ಆದರೆ ಅವರನ್ನು ಎದುರಿಸುವ ಕಲೆಗಾರಿಕೆ ನಿಮ್ಮಲ್ಲಿರುವುದರಿಂದ ಹೆದರುವ ಅವಶ್ಯಕತೆ ಇಲ್ಲ. ಈ ಬಗ್ಗೆ ಹಿರಿಯರೊಬ್ಬರ ಸಲಹೆ ನಿಮಗೆ ಸಹಕಾರಿಯಾಗುವುದು.

 

ನಿಮ್ಮ ದೇಹಕ್ಕೆ ವಯಸ್ಸಾಗಿದ್ದರೂ ನಿಮ್ಮ ಮನಸ್ಸಿಗೆ ಮುಪ್ಪು ಬಂದಿಲ್ಲ. ಹಾಗಾಗಿ ಕಿರಿಯರೊಡನೆ ಸ್ನೇಹ ಬಾಂಧವ್ಯದಿಂದ ವರ್ತಿಸುವಿರಿ. ಆ ಮೂಲಕ ನಿಮ್ಮ ಅಂತರಂಗದ ತುಮುಲಗಳಿಗೆ ಸಾಂತ್ವನ ಕಂಡುಕೊಳ್ಳುವಿರಿ. ಸಮರಸವೇ ಜೀವನ ವಿರಸವೇ ಮರಣ ಎಂಬುದನ್ನು ಅರಿಯುವಿರಿ.

 

 

ಕೆಲಸ ಕಾರ್ಯಗಳನ್ನು ಸಂಪೂರ್ಣವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಕೊರಗುತ್ತ ಕೂರದಿರಿ. ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಬನ್ನಿ. ಮನಸ್ಸಿಗೆ ಶಾಂತಿ ದೊರಕುವುದು. ಮೌನದಿಂದ ಕಾರ್ಯ ನಿರ್ವಹಿಸಿ.

 

 

ಬದಲಾವಣೆ ಬಯಸಿ ಬಯಸಿ ನಿರಾಶರಾಗಿದ್ದ ನಿಮಗೆ ಹೊಸ ಬೆಳಕೊಂದು ಗೋಚರಿಸಲಿದೆ. ಇದು ನಿಮ್ಮ ಮನೋಕಾಮನೆಯನ್ನು ಪೂರ್ತಿಗೊಳಿಸಲು ಸಹಕಾರಿಯಾಗುವುದು. ಹಣಕಾಸಿನ ವಿಷಯದಲ್ಲಿ ಜಾಗ್ರತೆಯಿಂದ ಇರುವುದು ಒಳ್ಳೆಯದು.

 

 

ತಿಳಿದು ತಿಳಿದು ತಲೆಗಟ್ಟಿ ಇದೆ ಎಂದು ಕಲ್ಲುಬಂಡೆಗೆ ತಲೆಯನ್ನು ಬಡಿದುಕೊಳ್ಳದಿರಿ. ಅರ್ಥಾತ್‌ ನೀವು ಮಾಡುವ ಕೆಲಸವನ್ನು ಎಲ್ಲರೂ ಮೆಚ್ಚುವರು ಎಂಬ ಹುಂಬುತನದಿಂದ ಮುನ್ನುಗ್ಗಿದಲ್ಲಿ ಸೋಲನ್ನು ಅನುಭವಿಸಬೇಕಾಗುವುದು. ಸಂಗಾತಿಯ ಸಲಹೆ ಸ್ವೀಕರಿಸಿ.

 

 

ಸಂಬಂಧಿಗಳ ಬಳಿ ಹಳೆಯ ವಿಚಾರಗಳನ್ನು ಕೆದಕಲು ಪ್ರಯತ್ನಿಸದಿರಿ. ಕೆದಕಲು ಹೋದರೆ ಮುಂದಿನ ಉತ್ತಮ ಬಾಂಧವ್ಯ ಮುರಿದು ಬೀಳುವುದು. ಹಳೇ ಭಿನ್ನಾಭಿಪ್ರಾಯ ಉತ್ತಮ ಮಾತುಕತೆಯ ಸಂವಹನದಿಂದ ಕೊನೆಗೊಳ್ಳಲಿದೆ. ಜೀವನದಲ್ಲಿ ಹರ್ಷದ ವಾತಾವರಣ ಉಂಟಾಗುವುದು.

 

ನಾಲಿಗೆ ಒಳ್ಳೆಯದಿದ್ದರೆ ನಾಡೇ ಒಳ್ಳೆಯದು ಎಂಬಂತೆ ಸ್ನೇಹಜೀವಿಯಾದ ನಿಮ್ಮ ಮಾತನ್ನು ಎಲ್ಲರೂ ಗೌರವಿಸುವರು. ಇದರಿಂದ ಹೊಸತನ ಮತ್ತು ಹೊಸ ಸ್ನೇಹಿತರನ್ನು ನೀವು ಸಂಪಾದಿಸುವಿರಿ. ಸಾಮಾಜಿಕವಾಗಿ ಸರ್ವರಿಂದ ಗೌರವಿಸಲ್ಪಡುವಿರಿ. ಹಣಕಾಸು ಕೂಡಾ ಉತ್ತಮವಾಗಿರುತ್ತದೆ.

 

ಹಣ ನೀರಿನಂತೆ ಖರ್ಚಾಗುವುದು. ಎಲ್ಲ ಖರ್ಚು ಮಾಡಿ ಬರಿಗೈಯಾಗುವ ಸಂಭವವಿದೆ. ಹಣಕಾಸಿನ ವ್ಯವಹಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಿ. ಸಹೋದರರಿಂದ ಸುಖವಿಲ್ಲ.

 

ಸಾಧ್ಯವಾದಷ್ಟು ನೀವು ನಿಮ್ಮ ಪಾಡಿಗೆ ಇರುವುದು ಕ್ಷೇಮ. ಮನಸ್ಸು ಧಾರ್ಮಿಕ ವಿಚಾರಗಳ ಕಡೆ ಸೆಳೆಯಲಿದ್ದು ಅಂತಹ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ರೈತರು ರಾಜಕೀಯ ವ್ಯಕ್ತಿಗಳನ್ನು ನಂಬದಿರುವುದು ಒಳ್ಳೆಯದು.

 

ಶತ್ರುಮಿತ್ರರ ಅರಿವಿಲ್ಲದೆ ಎಲ್ಲರೊಂದಿಗೂ ಸಂಸಾರದ ಸುಖ ದುಃಖಗಳನ್ನು ಹೇಳಿಕೊಳ್ಳಬೇಡಿ. ಆದಾಯದಲ್ಲಿ ಅನಿರೀಕ್ಷಿತ ಹೆಚ್ಚಳ ಕಂಡು ಬರುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸೋದರಿಯ ಆರೋಗ್ಯದ ಕಡೆ ಗಮನವಿರಲಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top