fbpx
ಸಮಾಚಾರ

“ಕನ್ನಡಿಗರು ನಪುಂಸಕರು” ಕೆ.ಎಸ್. ಭಗವಾನ್ ರಿಂದ ಮತ್ತೊಂದು ವಿವಾದ

ಸಾಮಾಜಿಕ ವಿದ್ಯಮಾನಗಳ ಬಗ್ಗೆ ತಮ್ಮ ನಿಲುವನ್ನು ನಿರ್ಬಿಢೆಯಿಂದ ಮಂಡಿಸುತ್ತಲೇ ಒಂದು ಪಂಥದವರ ವಿರೋಧವನ್ನೂ ಕಟ್ಟಿಕೊಂಡಿರುವವರು ಪ್ರಗತಿಪರ ಚಿಂತಕ, ಹಿರಿಯ ಸಾಹಿತಿ ಪ್ರೊ. ಕೆ.ಎಸ್ ಭಗವಾನ್​.. ತಮ್ಮ ಬರಹಗಳಿಗಿಂತಲೂ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಹೆಚ್ಚು ಸುದ್ದಿಯಾಗುವ ಕೆಎಸ್ ಭಗವಾನ್ ಅವರು ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

“ಕನ್ನಡಿಗರು ನಪುಂಸಕರು” ಎಂದು ಹೇಳುವ ಮೂಲಕ ಕೆಎಸ್ ಭಗವಾನ್ ಅವರು ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದ್ದಾರೆ. ಮೈಸೂರು ಜಿಲ್ಲಾ ಕನ್ನಡ ಹೋರಾಟಗಾರರ ಸಂಘ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ನಡೆಸಬೇಕು ಎಂದು ಆಗ್ರಹಿಸಿತ್ತು. ಈ ವೇಳೆ ಮಾತನಾಡಿದ ಪ್ರೊ. ಭಗವಾನ್ ‘ತಮಿಳರು ಹೋರಾಡಿ ಸ್ಪರ್ಧಾತ್ಮಕ ಪರೀಕ್ಷೆಗಳು ತಮಿಳಿನಲ್ಲಿ ನಡೆಯುವಂತೆ ಮಾಡಿದರು. ಕರ್ನಾಟಕದಲ್ಲಿ ಇನ್ನೂ ಹೋರಾಟ ನಡೆದಿಲ್ಲ. ಒಂದು ರೀತಿಯಲ್ಲಿ ಕನ್ನಡಿಗರು ನಪುಂಸಕರು’ ಎಂದು ಸಾಹಿತಿ ಕೆ.ಎಸ್.ಭಗವಾನ್‌ ಹೇಳಿದರು..

ಇದೆ ವೇಳೆ ಮೆಕಡತು ಯೋಜನೆ ಬಗ್ಗೆ ಮಾತನಾಡಿದ ಭಗವಾನ್ ಅವರು ‘ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ಮೇಕೆದಾಟು ಯೋಜನೆ ವಿರುದ್ಧ ಕೇಂದ್ರಕ್ಕೆ ಮನವಿ ಸಲ್ಲಿಸಿವೆ. ಆದರೆ, ರಾಜ್ಯದಲ್ಲಿ ಯೋಜನೆ ಜಾರಿಗೆ ಆಗ್ರಹಿಸಿ ರಾಜಕೀಯ ಪಕ್ಷಗಳು ಒಂದಾಗಿ ಕೇಂದ್ರದ ಜತೆ ಚರ್ಚಿಸಿಲ್ಲ’ ಎಂದು ವಿಷಾದಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top