fbpx
ಸಮಾಚಾರ

ಎರಡು ತಿಂಗಳ ಹಿಂದೆಯೇ ರಾಜೀನಾಮೆಗೆ ಮುಂದಾಗಿದ್ದೆ: ಸಿಎಂ ಬಿಎಸ್‍ವೈ ಸ್ಪೋಟಕ ಹೇಳಿಕೆ

ಬಿ.ಎಸ್. ಯಡಿಯೂರಪ್ಪ ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಬಗ್ಗೆ ಈವರೆಗಿನ ಸ್ಪಷ್ಟ ಸುಳಿವು ದೊರೆತಿದೆ. ಎರಡು ತಿಂಗಳ ಹಿಂದೆಯೇ ರಾಜೀನಾಮೆಗೆ ಮುಂದಾಗಿದ್ದೆ ಎಂಬ ಸ್ಫೋಟಕ ಹೇಳಿಕೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸಂಪುಟ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಜುಲೈ 25ರಂದು ಬರು ಸಂದೇಶಕ್ಕಾಗಿ ಕಾಯುತ್ತಿದೇನೆ. ಹೈಕಮಾಂಡ್ ಯಾವಾಗ ಬೇಡ ಅನ್ನುತ್ತೋ ಆವತ್ತೆ ರಾಜೀನಾಮೆ ನೀಡುತ್ತೇನೆ. ಹೈಕಮಾಂಡ್ ಬೇಡ ಅಂದ್ರೆ ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶ ನೀಡುತ್ತೇನೆ. ಕೇಂದ್ರದ ನಾಯಕತ್ವ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ತಮ್ಮ ಹೇಳಿಕೆಯನ್ನ ಪುನರುಚ್ಛಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾರ ಸೂಚನೆಯನ್ನು ಪಾಲಿಸುತ್ತೇನೆ. ಹೈಕಮಾಂಡ್ ಹೇಳುವವರೆಗೆ ನಾನು ಸಿಎಂ ಆಗಿ ಮುಂದುವರಿಸುತ್ತೇನೆ. ಇದುವರೆಗೆ ಯಾವುದೇ ಸಂದೇಶ ಬಂದಿಲ್ಲ ಎಂದರು. ಅಧಿಕಾರ ಇಲ್ಲದೇ ಇದ್ದರೂ ಪಕ್ಷ ಸಂಘಟನೆಗೆ ನಾನು ದುಡಿಯುತ್ತೇನೆ. ಬಿಜೆಪಿಯನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ಬಿಎಸ್ ವೈ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top