fbpx
ಸಮಾಚಾರ

ಚಕ್ರವರ್ತಿ ಚಂದ್ರಚೂಡ್ ಮದ್ಯದ ಬೆರಳು ತೋರಿಸಿದ ಬಗ್ಗೆ ಪ್ರಿಯಾಂಕಾ ತಿಮ್ಮೇಶ್ ಪ್ರತಿಕ್ರಿಯೆ: ಹೇಳಿದ್ದೇನು ಗೊತ್ತಾ?

ಈ ವಾರ ಬಿಗ್ ಬಾಸ್ ಮನೆಯಿಂದ ನಟಿ ಪ್ರಿಯಾಂಕಾ ತಿಮ್ಮೇಶ್ ಅವರು ಎಲಿಮಿನೇಟ್ ಆಗಿದ್ದರು. ಈ ವೇಳೆ ಪ್ರಿಯಾಂಕಾಗೆ ಚಕ್ರವರ್ತಿ ಚಂದ್ರಚೂಡ್ ಮದ್ಯದ ಬೆರಳು ತೋರಿಸಿದ ಬಗ್ಗೆ ಪ್ರೇಕ್ಷಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಿಯಾಂಕಾಗೆ ಅವರು ಕ್ಷಮೆ ಕೇಳಬೇಕು, ಅವರು ಔಟ್ ಆಗಬೇಕು ಅಂತ ಜನ ಆಗ್ರಹಿಸುತ್ತಿದ್ದಾರೆ. ಇದೀಗ ಈ ಬಗ್ಗೆ ಸ್ವತಃ ಪ್ರಿಯಾಂಕಾ ತಿಮ್ಮೇಶ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

ಚಕ್ರವರ್ತಿ ಅವರು ಮದ್ಯದ ಬೆರಳು ತೋರಿಸಿದ ಬಗ್ಗೆ ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾಂಕಾ ಇದರಿಂದ ನಮ್ಮ ತಾಯಿಗೆ ಬೇಸರವಾಗಿದೆ ಎಂದು ಹೇಳಿದ್ದಾರೆ.

“ಇದರ ಬಗ್ಗೆ ಮಾತನಾಡೋದು ವೇಸ್ಟ್. ಅವರೇನು ಅಂತ ಈ ಮೂಲಕ ತೋರಿಸುತ್ತಿದ್ದಾರೆ. ತುಂಬ ಅತಿರೇಕವಾಗಿ ಚಕ್ರವರ್ತಿ ವರ್ತಿಸಿದ್ದಾರೆ. ಕರ್ನಾಟಕದ ಜನತೆಗೆ ಚಕ್ರವರ್ತಿ ಮೇಲೆ ಇದ್ದ ಅಭಿಮಾನವನ್ನು ಅವರೇ ಹಾಳು ಮಾಡಿಕೊಂಡರು ಅನಿಸತ್ತೆ. ಕ್ಷಮೆ ಕೇಳುವುದರಿಂದ ಏನೂ ಬದಲಾಗಲ್ಲ. ನನಗೆ ಕ್ಷಮೆ ಅಗತ್ಯವಿಲ್ಲ. ಈ ವಿಚಾರವನ್ನು ನೋಡಿ ನನ್ನ ತಾಯಿ ಬೇಸರ ಮಾಡಿಕೊಂಡಿದ್ದಾರೆ. ” ಎಂದು ಪ್ರಿಯಾಂಕಾ ಹೇಳಿದ್ದಾರೆ.

ಏನಿದು ಘಟನೆ?
ಪ್ರಿಯಾಂಕಾ ಮನೆಯಿಂದ ಹೊರಹೋಗುವಾಗ ಪ್ರಿಯಾಂಕಾಗೆ ವಿಶೇಷ ಅಧಿಕಾರವೊಂದನ್ನ ನೀಡಿದ್ದರು. ನೇರವಾಗಿ ಮುಂದಿನ ವಾರಕ್ಕೆ ಒಬ್ಬರನ್ನು ನಾಮಿನೇಟ್ ಮಾಡುವ ಅಧಿಕಾರವನ್ನು ಬಿಗ್‌ ಬಾಸ್ ಪ್ರಿಯಾಂಕಾಗೆ ನೀಡಿದರು. ಆಗ ತಕ್ಷಣವೇ ಚಕ್ರವರ್ತಿ ಚಂದ್ರಚೂಡ್ ಹೆಸರನ್ನು ಹೇಳಿದರು ಪ್ರಿಯಾಂಕಾ. ಆ ಮೂಲಕ ಚಕ್ರವರ್ತಿಗೆ ಶಾಕ್ ನೀಡಿದರು.

ಮನೆಯ ಬಾಕಿಯವರೆಲ್ಲರೂ ಪ್ರಿಯಾಂಕಾ ಅವರನ್ನು ಕಳಿಸಿಕೊಡಲು ಬಂದಿದ್ದರೆ ಚಕ್ರವರ್ತಿ ಸೋಫಾದ ಮೇಲೆಯೇ ಕುಳಿತಿದ್ದರು. ಪ್ರಿಯಾಂಕಾ ನಾಮಿನೇಟ್ ಮಾಡಿದಾಗ ಮಿಡಲ್ ಫಿಂಗರ್ ತೋರಿಸಿದ್ದು ಚರ್ಚೆಗೆ ಕಾರಣವಾಯಿತು. ಈ ವೇಳೇ ಅಲ್ಲಿಗೆ ಹೋದ ಪ್ರಶಾಂತ್ ಇದು ಪಬ್ಲಿಕ್ ಡೋಮೇನ್ ಇಂಥ ಸನ್ನೆ ಮಾಡುವುದು ಸರಿ ಅಲ್ಲ ಎಂದು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top