fbpx
ಸಮಾಚಾರ

ದರ್ಶನ್ ಫ್ಯಾನ್ಸ್ ಇಟ್ಟ ಬೇಡಿಕೆಗೆ ಒಂದೇ ಮಾತಲ್ಲಿ ಉತ್ತರಿಸಿದ ಜಗ್ಗೇಶ್​

ದರ್ಶನ್ ಬಗ್ಗೆ ನವರಸನಾಯಕ ಜಗ್ಗೇಶ್ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಯೊಬ್ಬ ಜಗ್ಗೇಶ್ ಅವರಿಗೆ ದರ್ಶನ್ ಜೊತೆ ಕೈ ಜೋಡಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕೇಳಿಕೊಂಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಇನ್ಸ್ಟಾಗ್ರಾಮ್ ಲೈವ್ ಬಂದಿದ್ದ ಜಗ್ಗೇಶ್ ತನ್ನ ಮುಂದಿನ ಸಿನಿಮಾಗಳ ಬಗ್ಗೆ ಬಹಿರಂಗ ಪಡಿಸಿದರು.

 

 

‘ಪ್ಲೀಸ್​ ಸರ್, ಡಿ ಬಾಸ್​ ಪರವಾಗಿ ಹೇಳಿಕೆ ನೀಡಿ. ನಿಮ್ಮ ನಡುವೆ ಮನಸ್ತಾಪ ಇದ್ದರೂ ಅಭಿಮಾನಿಗಳ ಸಲುವಾಗಿ ಡಿ ಬಾಸ್​ ಜೊತೆ ಕೈ ಜೋಡಿಸಿ’ ಎಂಬ ಕಮೆಂಟ್ ಅಭಿಮಾನಿಗಳಿಂದ ಬಂದಿದೆ. ಅದಕ್ಕೆ ಒಂದೇ ಮಾತಿನಲ್ಲಿ ಜಗ್ಗೇಶ್​ ಉತ್ತರ ನೀಡಿದ್ದಾರೆ. ‘ನನಗೂ ದರ್ಶನ್​ಗೂ ಯಾವ ಮನಸ್ತಾಪವೂ ಇಲ್ಲ. ಆತ ನನ್ನ ಕಲಾಬಂಧು’ ಎಂದು ‘ನವರಸ ನಾಯಕ’ ಪ್ರತಿಕ್ರಿಯಿಸಿದ್ದಾರೆ.​

ದರ್ಶನ್ ಮತ್ತು ಜಗ್ಗೇಶ್ ನಡುವೆ ಉತ್ತಮ ಸ್ನೇಹ ಬಾಂಧವ್ಯವಿತ್ತು. ಆದರೆ ಕಳೆದ ಕೆಲವು ತಿಂಗಳ ಹಿಂದೆ ಜಗ್ಗೇಶ್, ದರ್ಶನ್ ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಆಡಿಯೋ ವೈರಲ್ ಆದ ಬಳಿಕ ಇಬ್ಬರ ನಡುವಿನ ಮನಸ್ತಾಪ ಇನ್ನೂ ಮುಂದುವರಿಯುತ್ತಿರಬಹುದು ಎಂಬುದು ಕೆಲವರು ಅನುಮಾನವಾಗಿತ್ತು. ಅದಕ್ಕೆ ಈ ಕಮೆಂಟ್​ ಮೂಲಕ ಜಗ್ಗೇಶ್​ ತೆರೆ ಎಳೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top