fbpx
ಸಮಾಚಾರ

ಜುಲೈ 23: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಜುಲೈ 23, 2021 ಶುಕ್ರವಾರ
ವರ್ಷ : 1943 ಪ್ಲಾವ
ತಿಂಗಳು : ಆಷಾಢ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಚತುರ್ದಶೀ 10:42 am
ನಕ್ಷತ್ರ : ಪೂರ್ವಾಷಾಢ 2:25 pm
ಯೋಗ : ವೈಧೃತಿ 9:24 am
ಕರಣ : ವಾಣಿಜ 10:42 am ವಿಷ್ಟಿ 9:22 pm

Time to be Avoided
ರಾಹುಕಾಲ : 10:51 am – 12:26 pm
ಯಮಗಂಡ : 3:35 pm – 5:10 pm
ದುರ್ಮುಹುರ್ತ : 8:38 am – 9:29 am, 12:51 pm – 1:41 pm
ವಿಷ : 9:50 pm – 11:19 pm
ಗುಳಿಕ : 7:41 am – 9:16 am

Good Time to be Used
ಅಮೃತಕಾಲ : 10:01 am – 11:29 am
ಅಭಿಜಿತ್ : 12:00 pm – 12:51 pm

Other Data
ಸೂರ್ಯೋದಯ : 6:03 am
ಸುರ್ಯಾಸ್ತಮಯ : 6:48 pm
ರವಿರಾಶಿ : ಕರ್ಕಾಟಕ
ಚಂದ್ರರಾಶಿ : ಧನುಸ್ upto 19:57

 

 

 

ನೀವು ಮಾಡುವ ಉತ್ತಮ ಕಾರ್ಯವನ್ನು ಎಲ್ಲರೂ ಗಮನಿಸುವರು. ಆದರೆ ಯಾರೂ ಹೊಗಳರು. ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಹೊಂದಿರುವ ನೀವು ಉತ್ತಮ ನಡೆಯನ್ನು ಮುಂದುವರಿಸುವಿರಿ.

ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಈಗ ಯಾರನ್ನು ನಂಬದೆ ಭಗವಂತನನ್ನೆ ಮೊರೆ ಹೋಗುವುದು ಸೂಕ್ತ. ತಣ್ಣೀರನ್ನು ಆರಿಸಿ ಕುಡಿಯುವ ಕಾಲವಾದ್ದರಿಂದ ನಡೆ-ನುಡಿಯಲ್ಲಿ ಎಚ್ಚರಿಕೆ ವಹಿಸಿರಿ.

 

ಜವಾಬ್ದಾರಿಯನ್ನು ನಿರ್ವಹಿಸಿ, ಅಡೆತಡೆಗಳನ್ನು ಎದುರಿಸಿ ನಿಲ್ಲುವಂತಹ ಶಕ್ತಿಯು ಇಂದು ತನ್ನಿಂದ ತಾನೇ ಲಭಿಸುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿದ್ದು, ನಿಮ್ಮ ಬಹುದಿನದ ಕನಸು ನನಸಾಗುವುದು.

 

ಅನೇಕ ರೀತಿಯ ಅಡೆತಡೆಗಳನ್ನು ದಾಟಿಕೊಂಡು ಬಂದಿರುವಿರಿ. ನಿಮ್ಮ ಈದಿನದ ಸಂಕಲ್ಪ ಶಕ್ತಿಯು ಹೆಚ್ಚು ಪ್ರಖರವಾಗಿದ್ದು ಮಹತ್ತರ ಕೆಲಸವನ್ನು ಗೆಲ್ಲಲಿದ್ದೀರಿ. ಆದರೆ ಅದರ ಸಾಮರ್ಥ್ಯ‌ವು ನಿಮ್ಮಲ್ಲಿ ಅಹಂಕಾರ ಬರದಂತೆ ನೋಡಿಕೊಳ್ಳಿರಿ.

 

 

ನಿಮ್ಮ ಮನೋಧೈರ್ಯವನ್ನು ಕೆಡಿಸುವಂತಹ ಅನ್ಯರ ಮಾತುಗಳನ್ನು ಬೇಗನೆ ನಂಬದಿರಿ. ಮನಸ್ಸಿನ ಸಂತುಲವನ್ನು ಕಾಯ್ದುಕೊಂಡರೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಕೇವಲ ಔಷಧಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ. ಅದರ ಬಗ್ಗೆ ನಂಬಿಕೆಯೂ ಬೇಕು.

 

 

ನಿಮ್ಮ ನಂಬಿಕೆ ಮತ್ತು ಧೈರ್ಯದ ಮೂಲಕವಾದ ನಡೆಗಳು ಒಳಿತಿನತ್ತ ಸಾಗುತ್ತವೆ. ಈ ಬಗ್ಗೆ ಚಿಂತೆ ಮಾಡದೆ ನಿರಾಳವಾಗಿರಿ. ಮನೆಯಲ್ಲಿ ಮತ್ತು ಮನದಲ್ಲಿ ಸಂತಸ ಉಕ್ಕಿ ಹರಿಯುವುದು.

 

 

ನಿಮ್ಮನ್ನು ತೊಂದರೆಗೆ ಸಿಲುಕಿಸುವ ಹಲವು ಯೋಜನೆಗಳನ್ನು ಖಂಡಿತ ಹಾಕಿಕೊಳ್ಳದಿರಿ. ಇರುವ ಕಾರ್ಯಕ್ಷೇತ್ರದಲ್ಲಿಯೇ ಮನಸ್ಸಿಟ್ಟು ಕಾರ್ಯ ಮಾಡಿರಿ. ಯಶಸ್ಸು ನಿಮ್ಮದಾಗುವುದು. ಆಂಜನೇಯ ಸ್ತೋತ್ರವನ್ನು ಮರೆಯದಿರಿ.

 

 

ಉತ್ತಮ ಸ್ನೇಹಿತರು ಕಾಪಾಡಿಕೊಂಡು ಹೋಗುವುದೇ ಇಂದಿನ ದಿನದಲ್ಲಿ ದುಸ್ಸಾಹಸದ ಮಾತು. ಅದರಲ್ಲೂ ಹಾವು ಮುಂಗುಸಿಯಂತೆ ನೀವುಗಳು ಕಾದಾಡುತ್ತಿದ್ದರೆ ಇತರರಿಗೆ ತಮಾಷೆ ನಿಮಗೆ ಬಹುದೀರ್ಘದ ಹಾನಿ.

ಮನಸ್ಸಿನಲ್ಲಿಯೇ ಮಂಡಿಗೆ ತಿನ್ನಬೇಕೆಂದು ಯೋಚಿಸುತ್ತಿದ್ದರೆ ಹೇಗೆ? ನಿಮ್ಮ ಕಾರ್ಯ ಯೋಜನೆಗಳನ್ನು ಆಪ್ತರ ಮುಂದೆ ಹೇಳಿಕೊಳ್ಳಿರಿ. ಆಗ ಅದಕ್ಕೆ ಒಂದು ಸರಳ ಸೂತ್ರ ದೊರೆಯುವುದು. ಆ ಸೂತ್ರದಿಂದ ನಿಮ್ಮ ಮನಸ್ಸಿನ ಬಯಕೆಯು ಈಡೇರುವುದು.

 

ಸಿಟ್ಟು ಕೆಡುಕಿಗೆ ಮೂಲ ಎಂಬುದು ತಿಳಿದು ಕೂಡ ಸೋಲಲು ಮುಂದಾಗುವಿರಿ. ಕಾರಣ ಈದಿನ ಎಲ್ಲ ಕಾರ್ಯವೂ ನೀವು ಎಣಿಸದಂತೆ ಆಗದೆ ಇರುವುದು. ಭಗವಂತನ ಕೃಪೆ ಆಗುವವವರೆಗೂ ಅರಿತು ಸುಮ್ಮನಿರುವುದು ಲೇಸು.

 

ಹತ್ತಿರದವರ ಮಾತು ನಿಮ್ಮಲ್ಲಿನ ದುಃಖ, ದುಗುಡ, ದುಮ್ಮಾನಗಳನ್ನು ದೂರ ಮಾಡುವುದು. ಕೆಲವು ಅನಪೇಕ್ಷಿತ ಖರ್ಚುಗಳನ್ನು ತಡೆ ಹಿಡಿಯುವುದು ಉತ್ತಮ. ಉದರ ಶೂಲೆಯ ನಿವಾರಣೆಗಾಗಿ ಸೂಕ್ತ ವೈದ್ಯರ ಸಲಹೆ ಪಡೆಯಿರಿ.

ನಿಮ್ಮ ಮಾತಿನ ಮೋಡಿಯಿಂದ ಇಂದು ಇತರರನ್ನು ಆಕರ್ಷಿಸುವಿರಿ. ಹಾಗಾಗಿ ಈದಿನ ಇಷ್ಟಾನಿಷ್ಟ ಕಾರ್ಯಗಳು ಬೇಗನೆ ಮುಗಿಯುವವು. ಆಸ್ತಿಗೆ ಸಂಬಂಧದ ವ್ಯವಹಾರದಲ್ಲಿ ಸ್ವಲ್ಪ ಹಿನ್ನಡೆಯಾಗುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top