fbpx
ಸಮಾಚಾರ

ಪ್ರಿಯಾಮಣಿ-ಮುಸ್ತಫಾ ರಾಜ್ ವಿವಾಹ ಅಮಾನ್ಯ; ಮೊದಲ ಪತ್ನಿಯಿಂದ ಗಂಭೀರ ಆರೋಪ

ಉದ್ಯಮಿ ಮುಸ್ತಫಾ ರಾಜ್ ಹಾಗೂ ಪ್ರಿಯಾಮಣಿ ವಿರುದ್ಧ ಮುಸ್ತಫಾ ರಾಜ್ ಅವರ ಮೊದಲ ಪತ್ನಿ ಆಯೆಷಾ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದಾರೆ. ”ಮುಸ್ತಫಾ ರಾಜ್ ನನಗೆ ಈವರೆಗೂ ಕಾನೂನಾತ್ಮಕವಾಗಿ ವಿಚ್ಛೇದನ ನೀಡಿಲ್ಲ. ಹೀಗಾಗಿ, ಮುಸ್ತಫಾ ರಾಜ್ ಹಾಗೂ ಪ್ರಿಯಾಮಣಿ ಮದುವೆ ಅಸಿಂಧು” ಎಂಬುದು ಆಯೆಷಾ ಹೇಳಿದ್ದಾರೆ.

ಮುಸ್ತಫಾ ರಾಜ್ ಮೊದಲ ಪತ್ನಿ ಆಯೆಷಾ ಹೇಳುವುದೇನು?
”ಕಾನೂನು ಪ್ರಕಾರ ಮುಸ್ತಫಾ ರಾಜ್ ಈಗಲೂ ನನ್ನ ಪತಿಯೇ. ನಾವಿನ್ನೂ ವಿಚ್ಛೇದನಕ್ಕೆ ಅರ್ಜಿಯೇ ಹಾಕಿಲ್ಲ. ಮುಸ್ತಫಾ ರಾಜ್ ಹಾಗೂ ಪ್ರಿಯಾಮಣಿ ಮದುವೆ ಅಮಾನ್ಯವಾಗಿದೆ. ಪ್ರಿಯಾಮಣಿ ಅವರನ್ನು ಮದುವೆಯಾಗುವಾಗ, ತಾವು ಬಾಚ್ಯುಲರ್ ಎಂದು ಕೋರ್ಟ್‌ನಲ್ಲಿ ಮುಸ್ತಫಾ ರಾಜ್ ಘೋಷಿಸಿಕೊಂಡಿದ್ದರು” ಎಂದು ETimesಗೆ ಮುಸ್ತಫಾ ರಾಜ್ ಮೊದಲ ಪತ್ನಿ ಆಯೆಷಾ ಹೇಳಿದ್ದಾರೆ.

ಲೀಡಿಂಗ್ ಡೈಲಿಗೆ ಮುಸ್ತಫಾ ರಾಜ್ ನೀಡಿರುವ ಪ್ರತಿಕ್ರಿಯೆಯಲ್ಲಿ ಆಯೆಷಾ ಅವರ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ನನ್ನ ವಿರುದ್ಧ ಸುಖಾಸುಮ್ಮನೆ ಆರೋಪಿಸಲಾಗುತ್ತಿದೆ. ನಾನು ಆಯೆಷಾ ಅವರಿಗೆ ಮಕ್ಕಳನ್ನು ಬೆಳೆಸುವುದಕ್ಕಾಗಿ ಹಣವನ್ನು ನೀಡುತ್ತಿದ್ದೇನೆ. ಅದಕ್ಕಿಂತಲೂ ಹೆಚ್ಚು ಹಣವನ್ನು ಪಡೆಯುವುದಕ್ಕಾಗಿ ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ. ಆಯೆಷಾ ಅವರು ಆರೋಪಿಸಿರುವಂತೆ ಕೌಟುಂಬಿಕ ದೌರ್ಜನ್ಯ ನಡೆದಿರುವುದೇ ಹೌದಾದರೆ ಇಷ್ಟು ಸಮಯ ಅವರು ಏಕೆ ಸುಮ್ಮನಿದ್ದರು ಎಂದು ಮುಸ್ತಫಾ ಮರು ಪ್ರಶ್ನಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top