fbpx
ಸಮಾಚಾರ

”ಜೀವಂತವಾಗಿರುವುದೇ ನನ್ನ ಅದೃಷ್ಟ” ಪತಿಯ ಬಂಧನದ ಬಳಿಕ ಶಿಲ್ಪಾ ಶೆಟ್ಟಿ ಮೊದಲ ಪ್ರತಿಕ್ರಿಯೆ

ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅಶ್ಲೀಲ ಸಿನಿಮಾಗಳ ನಿರ್ಮಾಣದ ಆರೋಪದಡಿಯಲ್ಲಿ ಅರೆಸ್ಟ್ ಆಗಿದ್ದಾರೆ.. ಪತಿ ರಾಜ್ ಕುಂದ್ರಾ ಬಂಧನದ ಬಳಿಕ ಶಿಲ್ಪಾ ಶೆಟ್ಟಿ ಮೌನಕ್ಕೆ ಶರಣಾಗಿದ್ದರು. ಇದೀಗ ಪತಿಯ ಬಂಧನ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಶಿಲ್ಪಾ ಶೆಟ್ಟಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ನನ್ನ ಜೀವನವನ್ನು ಯಾವುದೂ ವಿಚಲಿತಗೊಳಿಸುವುದಿಲ್ಲ” ಎಂದು ಬರೆದಿರುವ ಪುಸ್ತಕ ಫೋಟೋವನ್ನು ಶಿಲ್ಪಾ ಶೆಟ್ಟಿ ಹಂಚಿಕೊಂಡಿದ್ದಾರೆ. ಆ ಮೂಲಕ ತಮ್ಮ ಮನಸ್ಸಿನ ಭಾವನೆಯನ್ನು ಶಿಲ್ಪಾ ಶೆಟ್ಟಿ ಮಾರ್ಮಿಕವಾಗಿ ಹೊರಹಾಕಿದ್ದಾರೆ.

‘ನಮಗೆ ನೋವು ಕೊಟ್ಟವರ ಬಗ್ಗೆ, ಅನುಭವಿಸಿದ ಹತಾಶೆ ಬಗ್ಗೆ, ದುರಾದೃಷ್ಟದ ಬಗ್ಗೆ ನಾವು ಸದಾ ಕೋಪದಿಂದಲೇ ಹಿಂದಿರುಗಿ ನೋಡುತ್ತೇವೆ. ಮುಂದೆ ಕೆಲಸ ಕಳೆದುಕೊಳ್ಳಬಹುದು, ಕಾಯಿಲೆ ಬರಬಹುದು ಅಥವಾ ಪ್ರೀತಿ ಪಾತ್ರರನ್ನು ಕಳೆದುಕೊಳ್ಳಬಹುದು ಎಂಬ ಭಯದಿಂದಲೇ ಭವಿಷ್ಯವನ್ನು ನೋಡುತ್ತೇವೆ. ಆದರೆ, ಈ ಕ್ಷಣದಲ್ಲಿ ನಾವು ಬದುಕಬೇಕು. ಈ ಹಿಂದೆ ಏನಾಗಿತ್ತು, ಮುಂದೆ ಏನಾಗಬಹುದು ಎಂಬುದನ್ನು ಬಿಟ್ಟು ಈ ಕ್ಷಣದ ಬಗ್ಗೆ ನಾವು ಜಾಗೃತವಾಗಿರಬೇಕು ಎಂದು ತಿಳಿಸಿದ್ದಾರೆ.

ಬದುಕಿನಲ್ಲಿ ಸವಾಲುಗಳನ್ನು ಹೇಗೆ ಸ್ವೀಕರಿಸಬೇಕು ಎಂಬುದನ್ನು ತಿಳಿಸುವ ಪುಸ್ತಕದ ಫೋಟೋವೊಂದನ್ನು ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೋಪದಿಂದ ಹಿಂತಿರುಗಿ ನೋಡಬೇಡಿ, ಅಥವಾ ಭಯದಿಂದ ಭವಿಷ್ಯವನ್ನು ನೋಡಬೇಡಿ, ಆದರೆ ಸದಾ ಜಾಗೃತವಾಗಿರಿ” ಎಂದು ಜೇಮ್ಸ್ ಥರ್ಬರ್ ಬರೆದಿರುವ ಸಾಲನ್ನು ಶಿಲ್ಪಾ ಶೆಟ್ಟಿ ಶೇರ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top