fbpx
ಸಮಾಚಾರ

ಬೆಸ್ಕಾಮ್ ನೇಮಕಾತಿ 2021: 400 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್‌ (ಬೆಸ್ಕಾಂ) ಪದವೀಧರ ಮತ್ತು ಡಿಪ್ಲೊಮ ಅಪ್ರೆಂಟಿಸ್‌ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಗ್ರಾಜುಯೇಟ್ ಮತ್ತು ಟೆಕ್ನಿಕಲ್ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಕರೆಯಲಾಗಿದೆ. ಆಯ್ಕೆಗೊಂಡವರು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಿದೆ. ತರಬೇತಿ ಅವಧಿಯಲ್ಲಿ 5 ರಿಂದ 7 ಸಾವಿರ ರೂ. ತನಕ ಸ್ಟೈಫಂಡ್ ನೀಡಲಾಗುತ್ತದೆ. ಜುಲೈ 15ರಿಂದ 30ರ ತನಕ ಬೆಸ್ಕಾಂನ ಎನ್‌ಎಟಿಸ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಅರ್ಜಿಗಳನ್ನು ಸಲ್ಲಿಕೆ ಮಾಡಲು ಆಗಸ್ಟ್ 5 ಕೊನೆಯ ದಿನವಾಗಿದೆ.

ವಿದ್ಯಾರ್ಹತೆ :
ಡಿಪ್ಲೊಮ / ಬಿಇ / ಬಿ.ಟೆಕ್‌ ವಿದ್ಯಾರ್ಹತೆಯನ್ನು ಸಂಬಂಧಿಸಿದ ವಿಭಾಗಗಳಲ್ಲಿ ಪಾಸ್‌ ಮಾಡಿರಬೇಕು.

ಆಯ್ಕೆ ಪ್ರಕ್ರಿಯೆ:
ಅರ್ಜಿದಾರರ ಅರ್ಜಿಯನ್ನು ಕಿರುಪಟ್ಟಿಯನ್ನು ಮಾಡಿ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ:
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://bescom.karnataka.gov.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಜುಲೈ 15,2021 ರಿಂದ ಆಗಸ್ಟ್ 5,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top