fbpx
ಸಮಾಚಾರ

ಜಯಂತಿಯವರದು ಮಗುವಿನಂತಹ ಮನಸ್ಸು: ಮಹಾನಟಿಯ ನಿಧನಕ್ಕೆ ಜಗ್ಗೇಶ್ ಕಂಬನಿ

ಬೆಂಗಳೂರು: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ (76) ಅವರು ಸೋಮವಾರ ಬೆಳಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಜಯಂತಿ ಅವರ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಸರ್ಕಾರದ ವತಿಯಿಂದಲೇ ವ್ಯವಸ್ಥೆ ಮಾಡಲಾಗಿದೆ.

ಜಯಂತಿ ಅವರುನ್ನು ಕಳೆದುಕೊಂಡ ಕನ್ನಡ ಸಿನಿಮಾ ತಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ನಿಧನಕ್ಕೆ ಹಲವು ಕಲಾವಿದರು, ಗಣ್ಯರು ಅವರನ್ನು ನೆನೆದು ಸಂತಾಪ ವ್ಯಕ್ತಪಡಿಸಿದ್ದಾರೆ. ಜಗ್ಗೇಶ್ ಸಾಲು ಸಾಲು ಟ್ವೀಟ್ ಗಳನ್ನು ಮಾಡಿದ್ದಾರೆ.

ನನ್ನ ಬಾಲ್ಯದಿಂದ ನಾನು ತುಂಬ ಇಷ್ಟಪಟ್ಟ ನಟಿಯರಲ್ಲಿ ಭಾರತಿ ಅಮ್ಮ ಹಾಗೂ ಜಯಂತಿ ಅಮ್ಮ..ಭಾರತಿ ಅಮ್ಮನ ಜೊತೆ ನಟಿಸಲು ನನ್ನ ಅವಕಾಶ ಸಿಗಲಿಲ್ಲಾ ಆದರೆ ಜಯಂತಿ ಅಮ್ಮನ ಜೊತೆ ಅನೇಕ ಚಿತ್ರಗಳಲ್ಲಿ ನಟಿಸಿದ ಸಮಾಧಾನ ಸಂತೋಷ ನನ್ನ ಕಲಾಬದುಕಿಗೆ.. ಅವರ ಜೊತೆ ಪಟೇಲ ನಟಿಸುವಾಗ ಪಾಂಡುಪುರದ ಚಿಕ್ಕಾಡೆ ಗ್ರಾಮದಲ್ಲಿ ಶೂಟಿಂಗ್ ವಿರಾಮ ಸಿಕ್ಕು ಸಮಯ ಕಳೆವ ಅವಕಾಶ. ಸಿಕ್ಕಿತು ಆಗ ನನ್ನ ಸಿನಿಮ ಪಯಣ ಅವರ ಜೊತೆ ಹಂಚಿಕೊಂಡ ಸಮಯ ಮರೆಯಲಾಗದ ಕ್ಷಣ.

ಅವರಿಗೆ ನಾನು ರೇಗಿಸಿದ್ದು ಜಯಮ್ಮ ದೊರದ ಬೆಟ್ಟ ಚಿತ್ರದಲ್ಲಿ ನಿಮ್ಮ ನೋಡಿ ಈಗ ಅನ್ನಿಸುತ್ತದೆ ಅಯ್ಯೋ ದೇವರೆ ಇಂದು ನಾಯಕನಟ ಆಗುವ ಬದಲು ದೂರದ ಬೆಟ್ಟದ ಸಮಯ ಆಗಿದ್ದರೆ ಎಂಥ ಅದ್ಭುತ ಇರುತ್ತಿತ್ತು ಎಂದಾಗ ನಾಚಿ ನೀರಾಗಿದ್ದರು ಹಾಗು ಕೋಲು ಹಿಡಿದು ಅಟ್ಟಾಡಿಸಿ ನಕ್ಕು ಆನಂದಿಸಿ you are my favorite actor ಎಂದು ಮುತ್ತಿಕ್ಕಿದ್ದರು! ಕೆಲವೊಮ್ಮೆ ನನ್ನ ಹಾಸ್ಯಕಂಡು ಮಗುವಂತೆ ನಗುತ್ತಿದ್ದರು! ಮನಸ್ಸು ಮಗುವಂತೆ ನಡೆದಸಂಗತಿ ಮೆಲುಕಾಕಿ ಆನಂದಿಸುತ್ತದೆ! ಇಂದು ಆ ಮಹಾನಟಿ ಇಲ್ಲಾ ಎಂದಾಗ ಮನಸ್ಸಿಗೆ ನೋವಾಯಿತು! ಹೋದ ಅನೇಕ ಹಿರಿನಟರ ಸಾಲಿಗೆ ಜಯಮ್ಮ ಸೇರಿಬಿಟ್ಟರು! ನಿಮ್ಮಆತ್ಮ ಶಾರದೆಯಲ್ಲಿ ಲೀನವಾಗಲಿ! loveyou ಅಮ್ಮ. ಎಂದು ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top