fbpx
ಸಮಾಚಾರ

ಜುಲೈ 27: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಜುಲೈ 27, 2021 ಮಂಗಳವಾರ
ವರ್ಷ : 1943 ಪ್ಲಾವ
ತಿಂಗಳು : ಆಷಾಢ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಚತುರ್ಥೀ 2:27 am
ನಕ್ಷತ್ರ : ಶತಭಿಷ 10:13 am
ಯೋಗ : ಶೋಭನ 9:11 pm
ಕರಣ : ಬಾವ 2:35 pm ಬಾಲವ 2:27 am

Time to be Avoided
ರಾಹುಕಾಲ : 3:35 pm – 5:09 pm
ಯಮಗಂಡ : 9:16 am – 10:51 am
ದುರ್ಮುಹುರ್ತ : 8:39 am – 9:29 am, 11:17 pm – 12:03 am
ವಿಷ : 4:46 pm – 6:24 pm
ಗುಳಿಕ : 12:26 pm – 2:00 pm

Good Time to be Used
ಅಮೃತಕಾಲ : 2:34 am – 4:13 am
ಅಭಿಜಿತ್ : 12:00 pm – 12:51 pm

Other Data
ಸೂರ್ಯೋದಯ : 6:04 am
ಸುರ್ಯಾಸ್ತಮಯ : 6:48 pm
ರವಿರಾಶಿ : ಕರ್ಕಾಟಕ
ಚಂದ್ರರಾಶಿ : ಕುಂಭ upto 28:33+

 

 

 

ತಾಳ್ಮೆ ಹಾಗೂ ನಿಮ್ಮ ಸೂಕ್ಷ ್ಮಮತಿಯು ಹೊಸದೇ ಆದ ಅನುಪಮ ಅವಕಾಶವೊಂದನ್ನು ತಂದು ಕೊಡುವುದು. ಇದರಿಂದ ಮನೆಯಲ್ಲಿಯೂ ಮತ್ತು ಹೊರಗಿನ ಸಮಾಜದಲ್ಲಿಯೂ ಹೆಸರನ್ನು ತಂದು ಕೊಡುವುದು.

ಹಿರಿಯರು ಮಾಡಿದ ಇಲ್ಲವೇ ಮಗನು ಮಾಡಿದ ಸಾಲಕ್ಕೆ ನೀವು ಹೊಣೆಗಾರರಾಗಬೇಕಾಗುತ್ತದೆ. ಈದಿನ ಸಾಲಗಾರರು ನಿಮ್ಮನ್ನು ಹಣ ಕೊಡುವಂತೆ ಪೀಡಿಸಬಹುದು. ಸಾಧ್ಯವಾದಷ್ಟು ಮಟ್ಟಿಗೆ ಹಣವನ್ನು ಮರುಪಾವತಿ ಮಾಡುವಿರಿ.

 

ಹಣಕಾಸು ವಿಷಯದಲ್ಲಿ ಜಾಗ್ರತೆಯಿಂದಿರಿ. ಆದರೆ ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಮನೆಯ ಸದಸ್ಯರ ಮಾತಿನಿಂದ ಉದ್ವೇಗಕ್ಕೆ ಒಳಗಾಗುವಿರಿ. ಆದಷ್ಟು ಇಂದು ತಾಳ್ಮೆಯಿಂದ ಇರಿ.

 

ಅನೇಕ ಸಮಸ್ಯೆಗಳಿಂದ ಗೊಂದಲದ ಗೂಡಾಗಿದ್ದ ಕುಟುಂಬದಲ್ಲಿ ನೆಮ್ಮದಿ ಕಾಣಲು ಆರಂಭವಾಗಿದೆ. ಆರ್ಥಿಕ ಸಮಸ್ಯೆಗಳು ಆದಾಯದಿಂದ ಸುಧಾರಿಸಲಿವೆ. ಮಾವನ ಮನೆಯಿಂದ ಬರಲಿರುವ ಎಲ್ಲ ರೀತಿಯ ಸಹಾಯಗಳನ್ನು ಸ್ವೀಕರಿಸಿರಿ.

 

 

ಆದಾಯಕ್ಕೆ ಹೊಸ ಹೊಸ ದಾರಿ ಕಂಡಂತೆ ಖರ್ಚಿಗೂ ಹೊಸ ದಾರಿ ಕಾಣಲಿವೆ. ಖರ್ಚಿನ ಬಾಬ್ತಿಗೆ ಕಡಿವಾಣ ಹಾಕಲು ಪ್ರಯತ್ನಿಸದಿದ್ದಲ್ಲಿ ಕೂಡಿಟ್ಟ ಗಂಟು ಕೂಡ ಕರಗುವ ಸಾಧ್ಯತೆ ಇದೆ. ಸೋಮಾರಿತನ ಹಾನಿ ಮಾಡುವುದು.

 

 

ಹಿತಶತ್ರುಗಳು ನಿಮ್ಮನ್ನು ಪೀಡಿಸುವಂತಹ ಸಾಧ್ಯತೆಗಳು ಹೇರಳವಾಗಿದೆ. ಆದರೆ ಅವರು ಪೀಡಿಸುತ್ತಾರೆ ಎಂಬ ಕಾರಣದಿಂದ ಇದ್ದ ಜವಾಬ್ದಾರಿ ಸ್ಥಾನದಿಂದ ಕೆಳಗಿಳಿಯುವುದು ತರವಲ್ಲ. ಆದಷ್ಟು ಕುಲದೇವರ ಪ್ರಾರ್ಥನೆ ಮಾಡಿರಿ.

 

 

ಪದೇ ಪದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಇತರರು ನಿಮ್ಮ ಮೇಲೆ ಇಟ್ಟ ಭರವಸೆಗೆ ಧಕ್ಕೆ ಉಂಟಾಗುವುದು. ಹಾಗಾಗಿ ಆದಷ್ಟು ಸರಿಯಾದ ಮತ್ತು ದೃಢ ನಿರ್ಧಾರ ತಳೆಯುವತ್ತ ಚಿಂತಿಸುವುದು ಒಳ್ಳೆಯದು.

 

 

ಬಹು ಮುಖ್ಯವಾದ ನಿರ್ಧಾರಕ್ಕೆ ಬರಲು ಅವಕಾಶವೊಂದು ಒದಗಿ ಬರಲಿದೆ. ಜತೆಯಲ್ಲಿ ಮುಂದೆ ಬರಬಹುದಾದ ಸಮಸ್ಯೆಗಳ ಬಗ್ಗೆಯೂ ಅಮೂಲಾಗ್ರವಾಗಿ ಚಿಂತನೆಯನ್ನು ಮಾಡುವುದು ಒಳ್ಳೆಯದು. ಹಣಕಾಸಿನ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ.

ಎಲ್ಲವನ್ನೂ ನಿಭಾಯಿಸಬಲ್ಲೆನೆಂಬ ಅತಿಯಾದ ಆತ್ಮವಿಶ್ವಾಸ ಬೇಡ- ಮಕ್ಕಳು ತಮ್ಮ ನಡವಳಿಕೆಯಿಂದ ಹಿರಿಯರಿಗೆ ಮುಜುಗರವನ್ನುಂಟು ಮಾಡುವರು. ಕಾರ್ಯ ಒತ್ತಡದ ನಡುವೆಯೂ ಪರರಿಗೆ ಉಪಕಾರವನ್ನು ಮಾಡುವಿರಿ.

 

ಪರಿಶ್ರಮದಲ್ಲಿಯೇ ಹಿತ ಕಾಣುವ ನಿಮಗೆ ಯಶಸ್ಸು ನಿಶ್ಚಿತ. ಅದರ ಫಲವನ್ನು ಶೀಘ್ರದಲ್ಲಿಯೇ ಕಂಡುಕೊಳ್ಳುವಿರಿ. ಕೆಲವೊಮ್ಮೆ ನಿಮ್ಮ ಅತಿಯಾದ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಇರುವುದು. ಕುಟುಂಬದಲ್ಲಿ ಒಮ್ಮತ ಮೂಡುವುದು.

 

ಹಲವು ಸನ್ನಿವೇಶಗಳಿಂದಾಗಿ ಮಾನಸಿಕ ಚಂಚಲತೆ ಕಾಡುವುದು. ಸಂಬಂಧಪಡದ ಭೂವಿವಾದದ ಒತ್ತಡದಿಂದಾಗಿ ಬಳಲಿಕೆ ಉಂಟಾಗುವುದು. ಗುರು-ಹಿರಿಯರ ಸಲಹೆಯನ್ನು ಸ್ವೀಕರಿಸಿ ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಬರಲಿರುವ ಸಮಸ್ಯೆಗಳನ್ನು ಸಾವಧಾನ ಚಿತ್ತದಿಂದ ಎದುರಿಸಿ, ಗಾಬರಿಯಿಂದ ಗೊಂದಲ ಮಾಡಿಕೊಂಡಲ್ಲಿ ಸಮಸ್ಯೆಗಳು ಬೆಳೆಯುತ್ತಾ ಹೋಗಬಹುದೇ ವಿನಃ ಪರಿಹಾರವಾಗಲಾರವು. ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆ ಕಂಡು ಬರುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top