fbpx
ಸಮಾಚಾರ

ಯಡಿಯೂರಪ್ಪಾಜಿ ಜೊತೆಯ ನನ್ನ ಪಯಣದ ಅತ್ಯಂತ ಬೇಸರದ ದಿನ” ರೇಣುಕಾಚಾರ್ಯ ಭಾವುಕ ನುಡಿ

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಧಿಕಾರ ತಂದುಕೊಟ್ಟ ಧೀಮಂತ ನಾಯಕ ಬಿ.ಎಸ್. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಅವರ ಬೆಂಬಲಿಗರಿಗೆ ತುಂಬಲಾರದ ನೋವುಂಟು ಮಾಡಿದೆ. ಮೊದಲಿನಿಂದಲೂ ಬಿಎಸ್ ವೈ ಅವರನ್ನು ಬೆಂಬಲಿಸುತ್ತ ಬಂದಿರುವ ಹೊನ್ನಾಳಿ ಹುಲಿ ಖ್ಯಾತಿಯ ಶಾಸಕ ಎಂ.ಪಿ ರೇಣುಕಾಚಾರ್ಯ ‘ಬಿಎಸ್ ವೈ ವಿದಾಯ’ಕ್ಕೆ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.

 

 

ಟ್ವೀಟ್ ನಲ್ಲೇನಿದೆ..?
ದಶಕಗಳ ನಿಮ್ಮ(BSY)ಸಂಘಟನೆ ಮತ್ತು ರಾಜಕೀಯ ಸೇವೆ ಲಕ್ಷಾಂತರ ಕಾರ್ಯಕರ್ತರು ಮತ್ತು ಅನೇಕ ನಾಯಕರನ್ನು ಸೃಷ್ಟಿಸಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಿಮ್ಮ ಕೊಡುಗೆ ಅಪಾರ. ಮುಂದೆಯು ನಿಮ್ಮ ಮಾರ್ಗದರ್ಶನ ನಮಗೆಲ್ಲರಿಗು ಇರಲೇಬೇಕು. ನನ್ನ ರಾಜಕೀಯ ಜೀವನದ ಆದಿಯಿಂದ ಇಂದಿನವರೆಗೆ ಯಡಿಯೂರಪ್ಪಾಜಿ ಜೊತೆಯ ನನ್ನ ಪಯಣದ ಅತ್ಯಂತ ಬೇಸರದ ದಿನ ಇಂದು ಎಂದು ತಿಳಿಸಿದ್ದಾರೆ.

ಅಂದಹಾಗೆ ಕಳೆದ ಹಲವು ದಿನಗಳಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡುತ್ತಾರೆ ಎಂಬ ಊಹಾಪೋಹಗಳು ಎದ್ದಿತ್ತು. ಇಂದು ಈ ಊಹಾಪೋಹಗಳಿಗೆ ಇಂದು ತೆರೆಬಿದ್ದಿದ್ದು, ತಮ್ಮ ಎರಡು ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಹಾಭಾಷಣ ಮಾಡಿ, ತಾವು ರಾಜೀನಾಮೆ ನೀಡುತ್ತಿರುವುದಾಗಿ ಘೋಷಣೆ ಮಾಡಿದರು. ಅದರಂತೆ ಮಧ್ಯಾಹ್ನ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top