fbpx
ಸಮಾಚಾರ

ಕಾಲಿವುಡ್‍ಗೆ ಎಂಟ್ರಿ ಕೊಟ್ಟ ಡಾ. ರಾಜ್‌ಕುಮಾರ್ ಮೊಮ್ಮಗಳು

ಡಾ ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದಾರೆ. ‘ನಿನ್ನ ಸನಿಹಕೆ’ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಬೆಳ್ಳಿ ಪರದೆ ಮೇಲೆ ಬರಲಿದ್ದಾರೆ. ‘ನಿನ್ನ ಸನಿಹಕೆ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಚೊಚ್ಚಲ ಸಿನಿಮಾ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಅಷ್ಟರಲ್ಲೇ ರಾಜ್ ಮೊಮ್ಮಗಳು ತಮಿಳು ಇಂಡಸ್ಟ್ರಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಈ ವಿಚಾರವಾಗಿ ಕೆಲವು ತಮಿಳು ವೆಬ್‍ಸೈಟ್‍ಗಳಲ್ಲಿ ಸದ್ಯದಲ್ಲಿಯೇ ಧನ್ಯಾ ರಾಮ್ ಕುಮಾರ್ ತಮಿಳು ಸಿನಿಮಾವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದು ವರದಿ ಮಾಡಿದೆ. ಆದರೆ ಧನ್ಯಾ ರಾಮ್ ಕುಮಾರ್ ಅಭಿನಯಿಸುತ್ತಿರುವ ಚಿತ್ರ ಯಾವುದು, ನಿರ್ದೇಶಕ, ನಟ ಯಾರು ಎಂಬ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ದೊರೆತಿಲ್ಲ.

ಈ ವಿಚಾರವಾಗಿ ತಮಿಳು ಚಿತ್ರ ವಿಶ್ಲೇಷಕ ಕೌಶಿಕ್ ಧನ್ಯಾ ರಾಮ್ ಸಿನಿಮಾ ಕುರಿತಂತೆ ಆದಷ್ಟು ಬೇಗ ವಿವರಗಳು ಸಿಗಲಿದೆ ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top