fbpx
ಸಮಾಚಾರ

ರಾಜ್​ ಕುಂದ್ರಾ ಅಶ್ಲೀಲ ಸಿನಿಮಾ ದಂಧೆಯಲ್ಲಿ ಕನ್ನಡ ಸಿನಿಮಾ ನಟಿ ಹೆಸರು

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅವರ ಪೋರ್ನ್ ಫಿಲಂ ವಿವಾದದಲ್ಲಿ ಅನೇಕರ ಹೆಸರು ಕೇಳಿಬರುತ್ತಿದೆ. ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ನೀಲಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದರು ಎಂಬ ಆರೋಪ ರಾಜ್​ಕುಂದ್ರಾ ಅವ್ರ ಮೇಲಿದೆ. ಹಾಗಾಗಿ ಅವರನ್ನು ಮುಂಬೈ ಪೊಲೀಸರು ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ.

ಈ ನಡುವೆ ಹಲವು ನಟಿಯರ ಮೇಲೆ ಅನುಮಾನ ಮೂಡಿವಂತಾಗಿದೆ. ಅಚ್ಚರಿ ಎಂದರೆ, ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿರುವ ಫ್ಲೋರಾ ಸೈನಿ ಹೆಸರನ್ನು ಕೂಡ ಈಗ ಎಳೆದು ತರಲಾಗಿದೆ. ಸುದೀಪ್​ ನಟನೆಯ ‘ನಮ್ಮಣ್ಣ’, ರವಿಚಂದ್ರನ್​ ಹಾಗೂ ಶಿವರಾಜ್​ಕುಮಾರ್​ ನಟನೆಯ ‘ಕೋದಂಡರಾಮ’ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿರುವ ಫ್ಲೋರಾ ಸೈನಿ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಿದೆ. ಸೈನಿ ಹೆಸರು ನೀಲಿ ಚಿತ್ರಗಳ ದಂಧೆಯ ವಿಷಯದಲ್ಲಿ ಪ್ರಸ್ತಾಪ ಆಗಲು ಕಾರಣವಾಗಿರುವುದು ರಾಜ್​ ಕುಂದ್ರಾ ಮತ್ತು ಉಮೇಶ್​ ಕಾಮತ್​ ಎಂಬುವವರ ನಡುವೆ ನಡೆದ ವಾಟ್ಸ್​ಆ್ಯಪ್​ ಚಾಟ್​!

ರಾಜ್​ ಕುಂದ್ರಾ ಮತ್ತು ಉಮೇಶ್​ ಕಾಮತ್ ವಿನಿಮಯ ಮಾಡಿಕೊಂಡಿರುವ ವಾಟ್ಸಾಪ್ ಮೆಸೇಜ್​ಗಳಲ್ಲಿ ಫ್ಲೋರಾ ಸೈನಿ ಬಗ್ಗೆ ಚರ್ಚೆ ಮಾಡಲಾಗಿತ್ತು. ಹಾಗಾಗಿ ಫ್ಲೋರಾ ಕೂಡ ಇವರ ಗ್ಯಾಂಗ್​ನಲ್ಲಿ ಇರಬಹುದು ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಆದರೆ ನಟಿ ಸೈನಿ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

ನಟಿ ಸೈನಿ ಹೇಳಿದ್ದೇನು?
ಇಬ್ಬರು ವ್ಯಕ್ತಿಗಳು ಅವರ ಚಾಟ್​ನಲ್ಲಿ ನನ್ನ ಬಗ್ಗೆ ಚರ್ಚೆ ಮಾಡಿದರೆ ಅವರ ಕೃತ್ಯದಲ್ಲಿ ನಾನೂ ಭಾಗಿ ಆಗಿದ್ದೇನೆ ಎಂದರ್ಥವಲ್ಲ’ ಎಂದು ಫ್ಲೋರಾ ಸೈನಿ ಹೇಳಿದ್ದಾರೆ. ” ರಾಜ್​ ಕುಂದ್ರಾ ಅಥವಾ ಅವರ ಕಡೆಯವರು ನನ್ನನ್ನು ಯಾವತ್ತೂ ಭೇಟಿ ಆಗಿಲ್ಲ. ಒಂದು ವೇಳೆ ಅವರು ನನಗೆ ಆಫರ್​ ನೀಡಿದ್ದರೂ ಕೂಡ ನಾನು ಒಪ್ಪಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ಈ ರೀತಿಯ ಹೊಸ ಪ್ಲಾಟ್​ಫಾರ್ಮ್​ಗಳಲ್ಲಿ ನಾನು ನಟಿಸುತ್ತಿಲ್ಲ’ ಎಂದು ಫ್ಲೋರಾ ಸೈನಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top