fbpx
ಸಮಾಚಾರ

ಟೀಮ್ ಇಂಡಿಯಾ ಆಟಗಾರನಿಗೆ ಕೊರೊನಾ ಸೋಂಕು: ಇಂದು ನಡೆಯಬೇಕಿದ್ದ ಭಾರತ-ಲಂಕಾ T20 ಪಂದ್ಯ ರದ್ದು

ಟೀಂ ಇಂಡಿಯಾ ಹಾಗೂ ಶ್ರೀಲಂಕಾ ಮಧ್ಯೆ ಇಂದು ನಡೆಯಬೇಕಿದ್ದ 2ನೇ ಟಿ20 ಪಂದ್ಯವನ್ನು ರದ್ದು ಮಾಡಲಾಗಿದೆ. ಭಾರತೀಯ ಆಟಗಾರ ಕೃನಾಲ್​ ಪಾಂಡ್ಯರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಮ್ಯಾಚ್​ ರದ್ದಾಗಿದೆ. ಆಲ್​​ರೌಂಡರ್​ ಕೃನಾಲ್​ ಪಾಂಡ್ಯ ಕೋವಿಡ್​​ ರಿಪೋರ್ಟ್​​ ಪಾಸಿಟಿವ್​ ಬಂದಿರುವ ಹಿನ್ನೆಲೆ ಪಂದ್ಯಾವಳಿ ಕ್ಯಾನ್ಸಲ್​ ಆಗಿದೆ ಎಂದು ತಿಳಿಸಿದ್ದಾರೆ.

 

 

ಭಾರತ ಹಾಗೂ ಲಂಕಾ ನಡುವಿನ ಎರಡನೇ ಟಿ20 ಪಂದ್ಯವು ಇಂದು ಸಂಜೆ 8 ಗಂಟೆಯಿಂದ ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ಆರಂಭವಾಗಬೇಕಿತ್ತು. ಈಗಾಗಲೇ ಮೊದಲ ಟಿ20 ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾಗೆ ಶಾಕ್ ಎದುರಾಗಿದೆ.

ಕೃನಾಲ್ ಪಾಂಡ್ಯ ಜತೆ ಎಂಟು ಕ್ರಿಕೆಟಿಗರು ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಇವರ ಪೈಕಿ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಪೃಥ್ವಿ ಶಾ ಹಾಗೂ ಸೂರ್ಯಕುಮಾರ್ ಯಾದವ್ ಕೂಡಾ ಇದ್ದರು ಎನ್ನಲಾಗಿದೆ. ಒಂದು ವೇಳೆ ಪೃಥ್ವಿ ಹಾಗೂ ಸೂರ್ಯಕುಮಾರ್ ಯಾದವ್‌ ಅವರಿಗೂ ಕೋವಿಡ್ ದೃಢಪಟ್ಟರೆ ಇಂಗ್ಲೆಂಡ್ ಪ್ರವಾಸದಿಂದ ಹೊರಬೀಳುವ ಸಾಧ್ಯತೆಯಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top