fbpx
ಸಮಾಚಾರ

ಟೀಮ್ ಇಂಡಿಯಾಗೆ ಕೊರೊನಾ ಕಾಟ: ಇಂದಿನ ಪಂದ್ಯದಿಂದ ಬರೋಬ್ಬರಿ 8 ಮಂದಿ ಆಟಗಾರರು ಔಟ್

ಪ್ರಸಕ್ತ ಶ್ರೀಲಂಕಾದಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ನಿಗದಿತ ಓವರುಗಳ ಕ್ರಿಕೆಟ್ ಸರಣಿಗೆ ಕೊರೋನಾ ಕಾಡಲಾರಂಭಿಸಿದೆ ಭಾರತೀಯ ತಂಡದ ಆಲ್-ರೌಂಡರ್ ಕ್ರುನಾಲ್ ಪಾಂಡ್ಯಾಗೆ ನೆನ್ನೆ ಕೊರೊನಾ ಸೋಂಕು ದೃಢಪಟ್ಟಿತ್ತು ಹಾಗಾಗಿ ನೆನ್ನೆಯ ಪಂದ್ಯವನ್ನು ಇಂದಿಗೆ ಮುಂದೂಡಲಾಗಿತ್ತು.

ಇದರ ಬೆನ್ನಲ್ಲೆ ಸದ್ಯ ಬಿಸಿಸಿಐಯಿಂದ ಮತ್ತೊಂದು ಮಾಹಿತಿ ಹೊರಬಿದ್ದಿದ್ದು ಇದರ ಪ್ರಕಾರ ಕ್ರುನಾಲ್ ಲಂಕಾ ವಿರುದ್ಧದ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಖುಷಿಯ ವಿಚಾರ ಎಂದರೆ  ಪಾಂಡ್ಯ ಜೊತೆಗೆ ನಿಕಟ ಸಂಪರ್ಕವನ್ನು ಹೊಂದಿದ್ದ ಟೀಮ್ ಇಂಡಿಯಾದ 8 ಕ್ರಿಕೆಟಿಗರ ಕೋವಿಡ್ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಅವರನ್ನು ಐಸೊಲೇಷನ್ ನಲ್ಲಿರಿಸಲಾಗಿದ್ದು, ಬುಧವಾರ ನಡೆಯುವ ಪಂದ್ಯದಲ್ಲಿ ಅವರು ಕಣಕ್ಕಿಳಿಯುವುದಿಲ್ಲ ಎನ್ನಲಾಗಿದೆ. 

ಎಂಟು ಮಂದಿ ಆಟಗಾರರು ಯಾರು?
ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ, ಪೃಥ್ವಿ ಶಾ, ದೇವದತ್ ಪಡಿಕಲ್, ಸೂರ್ಯ ಕುಮಾರ್ ಯಾದವ್, ಕೃಷ್ಣಪ್ಪ ಗೌತಮ್, ಮತ್ತು ಈಶನ್ ಕಿಶನ್ ಅವರನ್ನು ಐಸೋಲೇಶನ್ ನಲ್ಲಿ ಇಡಲಾಗಿದ್ದು ಇಂದಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top